ವಿಶ್ವೇಶ್ವರನ ಎದುರಿನಲ್ಲಿ

ಮೈ ತೊಳೆದು ಗಂಗೆಯಲಿ ಮನವೆಲ್ಲ ಮಡಿಯಾಗಿ ಅವಕಾಶವೆಲ್ಲವನು ತುಂಬಿದರು ದೇಗುಲದಿ ಸಾಕಾರ ನಾಗಿರುವ ವಿಶ್ವೇಶ ನಿನ್ನಡಿಗೆ ಶರಣಾಗಿ ಬಂದಿಹುದು ಈ ಜೀವ ಈ ಬಾಳ ನಿನ್ನಡಿಗೆ ಮುಡುಪಾಗಿ ನಿಲಿಸುವಂತಹ ಮನವ ನೀಡೆನೆಗೆ ಕಾರುಣ್ಯರೂಪನೇ! ತಾಮಸದ...

ಯಾಕೆ?

ಯಾಕೆ? ಎಂದೆ ಕೇಳ್ವರೆಲ್ಲ ನೋವ ಮರೆಸರು ಎಂತು ಎಂದು ಮೂಗಮೇಲೆ ಬೆರಳನಿಡುವರು ಗುರುವೆ ನೀನು ಮಾತ್ರ ಎನಿತು ಕೇಳಲಿಲ್ಲವು ಪಾಪಿ , ಎಂದು ನಿನ್ನ ದಿಟ್ಟ ತೊರೆಯಲಿಲ್ಲವು ನಿನ್ನ ಮಮತೆ ನನ್ನ ಮೂಕ- ನನ್ನು...

ಶ್ರೀಗುರುವಿನಡಿಗೆ

ಅಂದು ಏನು ಹೇಳಿದ್ದೆ ತಂದೆ ನೆನ- ಪಿಹುದೆ ನಿನಗೆ ಮತ್ತೆ? ಕೈಯನೆಂದಿಗೂ ಬಿಡೆನು ಎಂದಿದ್ದೆ ಮತ್ತೆ ಏಕೆ ಬಿಟ್ಟೆ ? ದಿವ್ಯ ಜೀವನದ ಸಾಧನೆಗೆ ಎಂದು ಬದ್ಧನಾಗಿ ಇದ್ದೆ ಉನ್ಮಾದದೊಂದು ಅಮಲಿನಲಿ ಗುರುವೆ ನೆಲಕುರುಳಿ...

ಜೊತೆಗಿರುವ ಜೀವಕ್ಕೆ

ಕರುಣಾಳು ಸಂತತವು ಕಾಯ್ವಬೀಳಿಸನೆಮ್ಮ ಏಕೆ ಹೆದರಿಕೆ ಒಂದು ತಪ್ಪಿಗಾಗಿ ಹೆದರದಿರು ದಟ್ಟಡಿಯ, ಹಾಕುತ್ತ ಹೋಗೋಣ ದೇವನಿರುವಾ ದಿವ್ಯ ತಾಣಕಾಗಿ ಹಲವು ಹಂಬಲಗಳನ್ನು ಹೊರಹಾಕಿ ಎದೆಗೂಡ ಹಸನಾಗಿ ಇಟ್ಟು ಸೊಗ ಉಣ್ಣೋಣುಬಾ ಒಂದೊಂದೆ ಮೆಟ್ಟಲವ ಮೇಲೇರಿ...

ತಂಗಿಗೆ

ನಿನ್ನ ಕಣ್ಣ ಹನಿ ನನ್ನ ಮನಕೊರೆದು ತತ್ತರಿಸಿ ಬಿಡುವುದಮ್ಮ ಬೇಡ ಹಾಕದಿರು, ತಡೆದು ಹಿಡಿತಾಯಿ ಕಣ್ಣೀರ ಮುತ್ತನಮ್ಮ ಒಂದೆ ಹೊಟ್ಟೆಯಲಿ ಹುಟ್ಟ ಬಹುದಿತ್ತು ಎಂತೊ ತಪ್ಪಿತಕ್ಕ ಆದರೇನು ನಾವಣ್ಣ ತಂಗಿಯರು ಆಗಿ ಇರುವದಕ್ಕ ಹುಟ್ಟಿನಲ್ಲೇನು...

ನಿಸರ್‍ಗ

ಮುಗಿಲ ನೀಲಿಯ ಬಣ್ಣ ಹಲವು ಹೂಗಳ ಬಣ್ಣ ನಿಂತ ನೆಲದಾಸೊಬಗೊ ಹರಿವ ನೀರಿನ ಬೆಡಗೊ ಒಂದೆರಡೆ ಸೌಭಾಗ್ಯ ನೋಡೆ ಸಾಲದು ಕಣ್ಣ ಈ ವಿಶ್ವದೈಸಿರಿಯ ಮುಖಕೆಲ್ಲಿ ಇಹುದೆಡರೊ? ಸಿಡಿಲಾಗಿ ಗುಡುಗುವದು ನೀರೆಯೋಲು ಮೆರೆಯುವದು ಭಕ್ತನೋಲು...

ಸಂಶಯವೆ

ಸುಳಿಯದಿರು ಸಂಶಯವೆ ನನ್ನವರ ಸನಿಹದಲಿ ಬೆರಸದಿರು ವಿಷವನ್ನು ಅನ್ನದಲ್ಲಿ ಬಾಳನಂದನ ವನವ ತುಳಿದು ತೊತ್ತಳಗೈದು ತುತ್ತದಿರು ಇದನಿನ್ನ ಒಡಲಿನಲ್ಲಿ ನಿನ್ನ ರಾಕ್ಷಸ ಕೃತ್ಯ ವಿಷಮತೆಗೆ ಮೊದಲಹುದು ದೂರಸರಿ ಸುಳಿಯುವುದೆ ನೀನು ಇಲ್ಲಿ? ವಿಶ್ವಾಸವೆಂಬುವದು ತತ್ತರಿಸಿ...

ಪ್ರಭುಲೋಕ

ಪ್ರಭುಲೋಕಕೆ ಸಾಗಿರುವದು ಬಾಳ್ ಬಳ್ಳಿಯ ಕುಡಿಯು ಚಾಚಿರುವದು ಮೊಗಹೊರಳಿದೆ ಅಪ್ಪಿದೆ ಗುರುವಿನಡಿಯು ತಟಕಿಕ್ಕುತಲಿದೆ ಜೇನದು ಕೊನೆಯೇ ಇಲ್ಲದಕೆ ಘಮಘಮಿಸುತಲಿವೆ ಹೂಗಳು ಬಾಡುವದಿಲ್ಲದಕೆ ದೂರದಲ್ಲಿದೆ ಆಗಸದೆಡೆ ಆದರು ಎದೆಯಿಹುದು ಗುರು ಕರುಣೆಯ ಪರ್‍ಜನ್ಯವು ಸೊನೆ ಸುರಿಸುತಲಿಹುದು...