ಭಾಗೀರಥಿ

ಹೆಣ್ಣು ಬಾಳ್ ಕಣ್ಣೀರು ಎಂದು ಹೇಳುವರೆಲ್ಲ
ಆದರೇಂ ಕಣ್ಣೀರನೊರೆಸುವವರಾರಿಲ್ಲ
ಮುಳ್ಳು ಬೇಲಿಯೊಳೆಲ್ಲ ಹೂಮಾಲೆ ಎಳೆದಂತೆ
ಬಾಳ ಸಾಗಿಸುವವರ ಕಂಡರೂ ಏನಂತೆ?
ಮರುಕವೊಂದಿನಿತಿಲ್ಲ! ಮಾತು ಗಾಳಿಯಲಾಯ್ತು
ಬಡಹಣ್ಗೆ ಈ ಬಯಲು ನೈರಾಶ್ಯಗತಿಯಾಯ್ತು
ಹುಣ್ಗೆ ಒರೆಎಳೆದಂತೆ ಅಪಹಾಸ್ಯ ಹಿರಿದಾಯ್ತು
ಪೂಜ್ಯನಾರಿಗೆ ನರಕ ಬಾಳನ್ನು ಕೊಟ್ಟಾಯ್ತು

ಇದಕಂಡು ಕನಿಕರದಿ, ಸಗರ ಸಂತತಿಯನ್ನು
ಎತ್ತಒಂದಾ ಧೀರೆ ಗಂಗೆಯೊಲು ಕನ್ನಡದಿ
ಬಂದ ಭಾಗೀರಥಿಯೆ ಬಾಳಿನಲ್ಲಿ ಮುನ್ನಡೆದೆ
ತೆಗಳುವವರನು ಕಂಡು ಕುಗ್ಗದೆಯೆ ನಿನ್ನನ್ನು,
ಅಪವಾದ ಅಪಮಾನಗಳನೆಲ್ಲಸಹಿಸುತ್ತ!
ಗೆಲುವಿರಲಿ ಶ್ರೀಮಾತೆ ನಿಂತಿಹಳು ಹರಿಸುತ್ತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೧
Next post ರಂಗಣ್ಣನ ಕನಸಿನ ದಿನಗಳು – ೧೬

ಸಣ್ಣ ಕತೆ

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…