ಬೆಳ್ಳಿಗೆ

ಮೂಡದಿಸೆಯಲಿ ಮುಗುಳಿನಂದದಿ
ಅರಳಲಿಹ ಚಲು ಬೆಳ್ಳಿಯೆ
ಯಾವ ಸಿದ್ಧಿಗೆ ಯಾವ ಧ್ಯಾನದಿ
ಮಗ್ನಳಾಗಿಹೆ ಕಳ್ಳಿಯೆ

ಯಾವ ವೃತವಿದು ಏನು ನಿಯಮವು?
ಹೇಳಬಾರದೆ ಗೆಳತಿಯೆ?
ನಿನ್ನ ಶಾ೦ತಿಯು ನನಗೆ ಬೇಕಿದೆ
ಒಣದು ಬಾಳಲಿ ಬಳಲಿಹೆ

ಬೆರಳನೆಣಿಸಿದರೇನು ಕರುಳಿಗೆ
ಕಣ್ಣು ಒಡೆಯದೆ ನಿಂತಿಹೆ
ಎದೆಗೆ ಯಾವದೊ ಭಾರ ಬಿದ್ದಿದೆ
ನನ್ನ ಗತಿಯೋ ಇಂತಿದೆ

ನೀನು ಜೀವನಕಲೆಯನರಿತಿಹೆ
ನಿನ್ನ ಭಾಗ್ಯವೆ ಭಾಗ್ಯವು
ನಿನ್ನ ತಪಕಿದೆ ಸಿದ್ದಿ ನನಗೋ
ಇಲ್ಲ ಮನಕಾರೋಗ್ಯವು

ನೀಡು ಸಂದೇಶವನ್ನು ಬೆಳ್ಳಿಯೆ
ಬೇಡಿಕೊಳ್ಳುವೆ! ಎನ್ನನು
ದಿವ್ಯ ದೀಕ್ಷೆಯ ನೀಡಿ ಒಯ್ವೆಯ
ನಂಬಿ ನಿಂತಿಹೆ ನಿನ್ನನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಹನಿಗವನ
Next post ರಂಗಣ್ಣನ ಕನಸಿನ ದಿನಗಳು – ೧೭

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…