ನಗುವ ಚಿಮ್ಮಿಸಿ
ನೋವ ಮರೆಸಿ
ಮೊಗವರಳಿಸಿತು
ನಗೆ ಹನಿ.
ನೂರು ಮಾತನು
ಮೂರು ಮಾತಲೇ
ಹೇಳಿ ಮುಗಿಸಿತು
ಹನಿಗವನ.
ನಗುವ ತರಿಸಿತು
ಮನವ ಮುಟ್ಟಿತು
ಬುದ್ಧಿ ಹೇಳಿತು
ನಗೆ ಹನಿಗವನ.
*****