ನಾವು ನೀವು ಎಲ್ಲರೊಂದೆ ಆ ದೇವರ ಮುಂದೆ ಆದರೆ ಎಲ್ಲರೂ ಬೇರೆ ಬೇರೆ ಕಾಣದಿರುವ ಅವನ ಹಿಂದೆ. ಜಾತಿ ಮತ ಬೇರೆ ಬೇರ ರೀತಿ ನೀತಿ ಬೇರೆ ಬೇರೆ ಅಲ್ಲೆ ಇದೆ ಭೇದಭಾವ ಒಬ್ಬರನ್ನೊಬ್ಬರು ದ್ವೇಷಿಸುವ ಮನೋಭಾವ ಮಾತು ಬೇರೆ ಆಚಾರ ಬೇರೆ ನಡೆಗೂ ನುಡಿಗೂ ನಡುವೆ ...

ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ ನಿನ್ನ ಬಲಸತ್ವಗಳ ಉದ್ದೀಪಿಸುವ ಮೂಲ? ಬೀಳುಕವಿತೆಗೆ ನೀಡಿ ರಸೋದ್ದೀಪನವನ್ನ, ಸಣ್ಣದಕೆ ಬಣ್ಣಗಳ ತೀಡಿ ಬಾರಿಸಿ ತಾಳ? ಮರಳಿ ಬಾ ಮರುಳೆ, ಮೈಗಳ್ಳತನದಲಿ ಕಳೆದ ಕಾಲಕ್ಕೆ ಸಮನಾಗಿ ಮಧುರ ಕವಿತೆಯ ನುಡಿಸು, ...

ಮುಯ್ಯಿಗೆ ಮುಯ್ಯಿ ಇಂದ್ರಜಿತುವು ಯಾಗವನ್ನು ಪೂರ್ಣಗೊಳಿಸಿ, ಅಮರತ್ವವನ್ನು ಪಡೆಯುತ್ತಾನೆಂದು ಕನಸು ಕಾಣತೊಡಗಿದೆ. ಎಡಗಣ್ಣು ಎಡಭುಜ ಹಾರತೊಡಗಿದವು. ಹಗಲಿನಲ್ಲಿ ಪ್ರಾಣಿಪಕ್ಷಿಗಳು ಬೇರಾಡ ತೊಡಗಿದವು. ಕಾಗೆಯೊಂದು ಹಾರಿಬಂದು ಮುಖಕ್ಕೆ ಹೊಡೆಯಿತು ಎಂ...

ಕರುಣೆಯ ಜೊನ್ನವಾಗಿ ತಾ ಸುರಿವುದು ತುಂಬಲು ಇಳೆಯ ಅಂಗಳ ಪಾವನಗೊಳಿಸಲೆಂದೇನೆ ನಿಂತಿದೆ ಮೂರ್ತಿಯು ಪರಮಮಂಗಳ ಮಳೆಬೆಳೆ ಎಲ್ಲ ಅವನ ದಯೆ ರವಿಶಶಿ ಎಲ್ಲರು ಅವನ ರೂಪವು ನಿಲಿಸುವ ನೆತ್ತಿ ವಿಶ್ವವನು ತಣಿವುದು ಜೀವಿಯ ಘೋರ ತಾಪವು ದಿವ್ಯನು ಪರಮ ಪುರುಷನವ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...