ಕಂದರ

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.

ಜಾತಿ ಮತ ಬೇರೆ ಬೇರ
ರೀತಿ ನೀತಿ ಬೇರೆ ಬೇರೆ
ಅಲ್ಲೆ ಇದೆ ಭೇದಭಾವ
ಒಬ್ಬರನ್ನೊಬ್ಬರು ದ್ವೇಷಿಸುವ ಮನೋಭಾವ

ಮಾತು ಬೇರೆ ಆಚಾರ ಬೇರೆ
ನಡೆಗೂ ನುಡಿಗೂ ನಡುವೆ ದೊಡ್ಡ ಕಂದರ.
ಅದಕ್ಕೇ ದ್ವೇಷ, ಮತ್ಸರ, ಒಳಜಗಳ
ಕೋಮುವಾದ, ಬಾಂಬು ದಾಳಿ.

ದೇವರೊಬ್ಬನೆ ರೂಪ ಹಲವು
ಮಂದಿರ ಮಸೀದಿ ಇಗರ್ಜಿ
ಪ್ರತಿಷ್ಠಾಪಿಸಿದ್ದೇವೆ ಒಬ್ಬೊಬ್ಬರ
ನಾವು ಕಟ್ಟಿದ ಗರ್ಭಗುಡಿಗಳಲ್ಲಿ!

ರಾಮ ಮ೦ದಿರ
ಬಾಬರಿ ಮಸೀದಿ ಜಗಳದಲ್ಲಿ
ವರುಷವರುಷವೂ ಕೊಡುತ್ತೇವೆ
ಪವಿತ್ರ ನೆಲಕೆ ರಕ್ತತರ್ಪಣ!

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ
Next post ಪೂರ್‍ಣ ಫಲ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…