ಪಾಕಶಾಸ್ತ್ರದ ಪಾಠಶಾಲೆ

ಈಗಂತೂ ಎಲ್ಲ ದೇಶಗಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕೆನ್ನುವರಿಗೆಂದು ಪಾಠಶಾಲೆಗಳಿವೆ. ಅಲ್ಲಿ ಅಡುಗೆಮನೆಯ ತಿಂಡಿ ತಿನಿಸುಗಳನ್ನು ತಯಾರಿಸುವುದರಿಂದ ಹಿಡಿದು ಅವನ್ನು ಒಪ್ಪ ಓರಣವಾಗಿ ಹೊ೦ದಿಸುವ ಕುಶಲತೆಯವರೆಗೆ ಎಲ್ಲವನ್ನೂ ಕಲಿಸುವರು. ಇಂತಹ ಕ್ಲಾಸುಗಳಲ್ಲಿ ಕೇವಲ ಮನೆಯ ಅಡುಗೆಗಾಗಿ ಕಲಿಸುವದಷ್ಟೇ ಅಲ್ಲ. ಒಳ್ಳೆಯ ಪ್ರವೀಣರಾಗಿ ದೊಡ್ಡ ಹೋಟೆಲ್‌ಗಳಲ್ಲಿ ಒಳ್ಳೆಯ ವ್ಯವಸ್ಥಾಪಕನ ಹುದ್ದೆ ಕೂಡಾ ಪಡೆದು ಒಳ್ಳೆಯ ಉದ್ಯೋಗ ನಡೆಸುವುದಕ್ಕೂ ತರಬೇತಿ ನೀಡುತ್ತಾರೆ.

ನನಗೂ ಕೂಡಾ ಒ೦ದು ಕಾಲದಲ್ಲಿ ಒಳ್ಳೆ ಅಡುಗೆ-ತಿ೦ಡಿ ಕಲಿತು ಪ್ರವೀಣಳಾ ಗಬೇಕೆಂದು ಬಹಳ ಅಸೆಯಿತ್ತು. ಉಳಿದದ್ದಾವುದರಲ್ಲೂ ಪ್ರವೀಣಳಾಗಲಿಲ್ಲ, ಕೊನೆಗೆ ಇದನ್ನಾದರೂ ಕಲಿತು ನನ್ನವರಿಗೆ ಆಗೀಗ ಸರ್‌ಪ್ರೈಸ್‌ ಮಾಡಬೇಕೆಂದು ಕನಸು ಕಂಡೆ. ಆದರೆ ಕನಸೆಲ್ಲಾ ತಲೆಕೆಳಗಾಯಿತು. ಕಲಿಯಲು ಸಮಯವೇ ಸಿಗಲಿಲ್ಲ. ಬೇಗ ಮದುವೆ ಯಾಯ್ತು. ಮಾಮೂಲಿಯಂತೆ ಈಗ ಅಡುಗೆಮಾಡುವದಾಗಿದೆ. ಕೊನೆ ಪಕ್ಷ ಒಮ್ಮೆ ಯಾದರೂ ಈ ಪಾಕಪಾಠಶಾಲೆಗೆ ಭೆಟ್ಟಿಯಾಗಿ ಒಳಗಿನ ಚಟುವಟಿಕೆ ನೋಡಬೇಕೆನಿಸುತ್ತಿತ್ತು. ಬಾಂಬೆಯಲ್ಲಿ ಇದ್ದಾಗಲ೦ತೂ ಆಗಲೇ ಇಲ್ಲ. ಸೌದಿಯಲ್ಲಿ ಎಲ್ಲಿಯೋ, ಏನೋ ಎಂದು ಮರೆತೂಬಿಟ್ಟಿದ್ದೆ.

ಆದರೆ ಬಹಳ ದಿವಸಗಳ ನಂತರ ಒಮ್ಶೆ ಅವಕಾಶ ಬಂದೇ ಬಿಟ್ತು. ಇಲ್ಲಿಯ ವಿಮಾನ ನಿಲ್ದಾಣದ ಒ೦ದು ಬದಿಗೆ, ಅಂದರೆ ಈ ಮೊದಲು ಹೇಳಿದಂತೆ ಸೌದಿಯಾ ಟರ್ಮಿನಲ್‌ಗೆ ಹತ್ತಿರವೇ ಸೌದಿಯಾ ಪಾಕಪಾಠಶಾಲೆ ಇದೆ. ಗುತ್ತಿಯವರು ಆಗೀಗ ಅಲ್ಲಿಂದ ಏನಾದರೂ ವಿಶೇಷ ಇದ್ದರೆ ತಿಂಡಿ ತೆಗೆದುಕೊಂಡು ಬರುತ್ತಿದ್ದರು. ಹೀಗೆ ಕ್ಯಾಂಪಸ್ಸಿನ ಜನರಿಗೆ ಅಲ್ಲಿಯ ರುಚಿ ಹತ್ತಿತ್ತು.

ಪ್ರತಿ ರವಿವಾರ ಬೆಳಗ್ಗೆ ನಮ್ಮ ಕ್ಯಾಂಪಸ್ಸಿನ ಮಹಿಳಾ ಕ್ಲಬ್‌ದ ಚಟುವಟಿಕೆಗಳೂ ಬಹಳ ತಾಜಾತನದಿಂದಲೇ ಶುರು ಆಗುತ್ತವೆ. ಮಿಸೆಸ್-ವಿಲ್ಸನ್ ಕ್ಲಬ್ಬಿನ ಅಧ್ಯಕ್ಷೆ. ಬಹಳ ವಾಚಾಳಿ. ಅಷ್ಟೇರುಚಿಗಾರ್ತಿ. ಆ ಪಾಕಶಾಲೆಯ ರುಚಿಶುಚಿಗಳ ಬಗ್ಗೆ ಆಗೀಗ ಪ್ರಶಂಸೆ ನಡೆದೇ ಇದ್ದಿತ್ತು. ಹೀಗಿರುವಾಗ ಒಮ್ಮೆ ಹೋಗಿ ನೋಡಿ ಬರಬಾರದೇಕೆ ಎಂದು ಎಲ್ಲರ ವಿಚಾರ. ಅವಳಿಗೆ ಈ ವಿಚಾರ ಬ೦ದದ್ದೇ ಸಾಕು, ಕೇಟರಿಂಗ್ ಹೌಸ್‌ದವರೊಂದಿಗೆ ಚರ್ಚಿಸಿ ಸಮಯ ಹೊಂದಿಸಿಕೊಂಡೇ ಬಿಟ್ಟಳು. ಒ೦ದು ರವಿವಾರ ಹುರುಪಿನಿಂದಲೇ ಹೊರಡಲು ತಯಾರಾದೆವು. ಸುಮಾರು 35 ಮಹಿಳೆಯರು. ನಾವೆಲ್ಲ ವಿಮಾನ ನಿಲ್ದಾಣದ ಜನ. ಹೀಗಾಗಿ ಯಾವ ಮ೦ತ್ರಿಯ ಕಡೆಯಿಂದಲೂ ಪರವಾನಿಗೆ ಬೇಕಿರಲಿಲ್ಲ.

ಇಲ್ಲಿಯ ಈ ಕೇಟರಿಂಗ್ ಹೌಸ್. ರಾಷ್ಟ್ರೀಯ-ಅ೦ತರಾಷ್ಟ್ರೀಯ ವಿಮಾನ ಪ್ರವಾಸಿಗರಿಗೆ ಒಳ್ಳೆಯ ಊಟ-ತಿ೦ಡಿ ಒದಗಿಸುವ ಪಾಕಶಾಲೆ. ಇದು 1984ರಲ್ಲಿ ಆರಂಭವಾಯಿತು. ಹೀಗಾಗಿ ಒಳಹೊರಗೆಲ್ಲ ಹೊಸದು. ಸುಮಾರು 16,400 ಚದರ ಮೀಟರ್‌ಗಳಲ್ಲಿರುವ ಈ ಕಟ್ಟಡ ಹೊರನೋಟದಲ್ಲಿ ಅ೦ತಹ ಆಕರ್ಷಕವೇನಲ್ಲ. ಒಳಗೆ ಮಾತ್ರ-ಮುಟ್ಟಿದರೆ ಮಾಸುವಂತಹ ಚೆಲುವೆ.

ನಾವು ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ಪಾಕಶಾಲೆಯ ಮುಖ್ಯಸ್ಥ ಮಿಸ್ಟರ್‌ ವ್ಯಾಟ್ ಸ್ವತಃ ಬಂದು ಎಲ್ಲರಿಗೂ ಸ್ವಾಗತಿಸಿದರು. ಒಳಗೆ ಹೋಗುವಾಗ ಎಲ್ಲರಿಗೂ ಕಡ್ಡಾಯವಾಗಿ ಶುಭ್ರವಾದ ಉದ್ದನೆಯ ಕೋಟು. ತಲೆಗೆ ನೆಹರೂ ಟೊಪ್ಪಿಗೆಯ೦ತಹ ವಲ್ಪ ಎತ್ತರವಿರುವ ಟೊಪ್ಪಿಗೆ ಕೊಡುವರು. ಹಾಕಿಕೊಳ್ಳಲೇಬೇಕು. ಪಾಕಶಾಲೆಗೆ ಹೆಜ್ಜೆ ಇಡುತ್ತಿದ್ದಂತೆ ತಲೆ ಕೂದಲು ಉದುರಬಾರದೆಂದಾಗಲೀ, ಹಾಗೂ ನೈಲಾನ್ ಬಟ್ಟೆಗಳು ಬೆಂಕಿಯ ಝಳಕ್ಕೆ ಸಿಗಬಾರದೆಂದಾಗಲೀ ಅಥವಾ ಬಟ್ಟೆಗಳು ಹೊಲಸಾಗಬಾರ ದೆ೦ದಾಗಲೀ ಈ ಮುನ್ನೆಚ್ಚರಿಕೆ.

ಸುಮಾರು 35-40 ಅಂತರಾಷ್ಟ್ರೀಯ ವಿಮಾನ ಖಾತೆಗಳು ಇದರೊ೦ದಿಗೆ (ಸೌದಿ ಕೇಟರಿಂಗ್‌ದೊಂದಿಗೆ) ಸಂಪರ್ಕ ಬೆಳೆಸಿಕೊಂಡಿವೆ. ಎಲ್ಲ ದೇಶಗಳ ವಿಮಾನಗಳು ಬ೦ದು ಮತ್ತೆ ಪ್ರವಾಸಿಗರನ್ನು ತೆಗೆದುಕೊಂಡು ಮರಳಿ ಹೋಗುವಾಗ ಆಯಾ ದೇಶಗಳಿಗೆ ಹೊ೦ದುವ೦ತಹ ಒಳ್ಳೆ ರುಚಿ ಶುಚಿಗಳಿಂದ ಕೂಡಿದ ಊಟ-ತಿ೦ಡಿ ಒದಗಿಸುವ ಮುಖ್ಯ ಕರ್ತವ್ಯ ಇಲ್ಲಿಯದು. ಪ್ರತಿ ದಿನ ಇಲ್ಲಿಂದ 15,000 ಊಟದ ತಟ್ಟೆಗಳು ವಿಮಾನ ಪ್ರವಾಸಿಗರಿಗೆ ಒದಗಿಸುವರು. ಹಾಜ್ ಸಮಯದಲ್ಲಿ 25ರಿ೦ದ 30 ಸಾವಿರ ಸಿದ್ಧ ಊಟದ ಕ್ಯಾರಿಯರ್‌ಗಳನ್ನು ಒದಗಿಸುವರೆಂದು ಹೇಳಿದರು.

ಒಳಗೆ ಕಾಲಿಟ್ಟ ಕೂಡಲೇ ಘಮ ಘಮ ಬೇಕರಿ ವಾಸನೆ ನಮ್ಮ ಕಡೆ ಉಡುಪಿ ಹೋಟಲ್ ಹೊಕ್ಕರೆ ದೋಸಾ- ಸಾ೦ಬಾರ್ ವಾಸನೆ ಬಂದಂತೆ. ಇಲ್ಲಿಯ ಒಂದೊಂದು ಕೋಣೆಗಳು ಹಿಡಂಬಾ ಜಾತಿಯವು. ಏನೆಲ್ಲ ತು೦ಬಿಕೊ೦ಡಿವೆ. ಇವೆಲ್ಲ ಕೋಲ್ಡ್‌ ಸ್ಟೋರೇಜ್ (ಶೀತಾಗಾರ)ಗಳು. ಒ೦ದು ದೊಡ್ಡ ಕೋಣೆಯಂತೂ ಪೂರ್ತಿ ಬರ್ಫಿನ
(Ice) ಹೊದಿಕೆಯಿಂದ ತು೦ಬಿದೆ. ಸ್ವಲ್ಪ ಬಾಗಿಲು ತೆಗೆದು ತೋರಿಸಿದರು. ಒಳಗಿನಿಂದ ಬರ್ಫಿನ ಹೊಗೆ ತೆರೆಯ೦ತೆ ಬ೦ದು ಮುಖಕ್ಕೆ ಅಪ್ಪಳಿಸಿತು. ಉಸಿರು ಕಟ್ಟಿದಹಾಗಾಗಿ ಎಲ್ಲರೂ ಆಚೀಚೆ ಸರಿದೆವು. ಒಳಗೆ ಯಾರಿಗೂ ಒ೦ದು ನಿಮಿಷ ನಿಲ್ಲಲಾಗುವುದಿಲ್ಡ. ಅಲ್ಲೆಲ್ಲ ಹೆಚ್ಚಾಗಿ ಮಾಂಸಾಹಾರಿ ವಸ್ತುಗಳೇ, ಕೆಲವು ತರಕಾರಿಗಳಿಂದ ತುಂಬಿರುವವು.

ಮುಂದೆ ಮುಖ್ಯ ಅಡುಗೆ ಮನೆ. ಬಾಯಿ ನೀರೂರಿಸುವ ತಿ೦ಡಿಗಳು. ಕೇಕ್, ಡೆಸರ್ಟ್, ಗರಿಗರಿಯಾದ ಹಗುರು ಬಿಸ್ಕಟುಗಳು, ಬ್ರೆಡ್‌ಗಳು, ಚೀಸ್‌ದಿಂದ ತಯಾರಿಸಿದ ದಿನಸಿಗಳು. ಮುಂದ ಮತ್ತೊಂದೆಡಗೆ ಕಬಾಬ್, ಸ್ಟೀಕ್, ಕೆವಿಯರ್‌ಗಳು. ನಮ್ಮ ಈ ಮಹಿಳಾ ವರ್ಗವಂತೂ ಮಾಂಸಾಹಾರಿ ಊಟ-ತಿಂಡಿಗಳನ್ನು ನೋಡಿ ಅಹಾಹಾ ಮಾಡುತ್ತಿದ್ದರು. ಮಿಸೆಸ್ ವಿಲ್‌ಸನ್ ಹಾಗೂ ಮಿಸೆಸ್ ಬ್ರಾಟನ್ ಅ೦ತೂ ಜೊಲ್ಲು ಸುರಿಸುತ್ತ ಮಿಸ್ಟರ್‌  ವ್ಯಾಟ್‌ನೊಂದಿಗೆ ಕೆಲವು ಅಡುಗೆಯ ಮಿಶ್ರಣಗಳ ವಿಚಾರಣೆಯಲ್ಲಿದ್ದರು.

ಇಲ್ಲಿ ಆಮ್ಲೆಟ್‌ ಮಾಡುವುದು ನೋಡಿ ಬಹಳ ಆಶ್ಚರ್ಯಪಟ್ಟೆ. ಸುಮಾರು 8 ಬರ್ನರ್‌ಗಳು. ಇವುಗಳ ಮೇಲೆ ಒಂದೇ ಆಯತಾಕಾರದ ತವ (ಪ್ಯಾನ್) ಅಮ್‌ಲೆಟ್ ಮಾಡುವವನ ಎಡಗಡೆ ದೊಡ್ಡ ಸ್ಟೀಲ್ ಪಾತ್ರೆಯಲ್ಲಿ ಮೊಟ್ಟೆಗಳ ಮಿಶ್ರಣ.
ಸೌಟದ ತರಹ ಇರುವ ಚಮಚದಿಂದ ತಿರುಗಿಸುತ್ತಾ ತುಂಬಿಕೊಂಡು ಒಂದೇ ಸಲಕ್ಕೆ 8 ಅಮ್ಲೆಟ್‌ಗಳನ್ನು ಹಾಕುವನು. ಕೊನೆಯದು ಹಾಕಿ ಮುಗಿಸುವಷ್ಟರಲ್ಲಿ ಮೊದಲನೆಯನದಕ್ಕೆ ಬಂದು  ತಿರುವಿ ಹಾಕುತ್ತ ಹೋಗಿ ಮತ್ತೆ ಕೊನೆಗೆ
ಮುಟ್ಟುವಷ್ಟರಲ್ಲಿ ಮತ್ತೆ ಮೊದಲಿನಿಂದ ಹಿಡಿದು ಆಕಾರಕೊಟ್ಟು (ದೋಸೆಯಂತೆ ಮಡಚಿ) ಪ್ಲೇಟ್‌ಗಳಿಗೆ ಹಾಕುವನು.  ಚಳಕ ನೋಡುವ೦ಥದು. ಇದೇ ತರಹ ಬೇರೆ ಬೇರೆ ಖಾದ್ಯಗಳ ತಯಾರಿಕೆಯೂ ಬೆರಗಾಗಿಸುವಂಥದು.

ಹೀಗೆ ಬಿಸಿ ಬಿಸಿಯಾದ ಊಟ-ತಿಂಡಿ ತಯಾರಾದ ನ೦ತರ ತಕ್ಷಣ ಊಟದ ಟ್ರೇಯಲ್ಲಿ ನೀಟಾಗಿ ಹೊ೦ದಿಸುವರು. 5-6 ದಿನಸಿಗಳಿದ್ದರೆ ಪ್ರತಿಯೊಂದಕ್ಕೂ ಒಬ್ಬೊಬ್ಬರ ಜವಾಬ್ದಾರಿ. ಯಾವುದೂ ಯಾವ ತಟ್ಟೆಗೂ ತಪ್ಪದಂತೆ ಎಚ್ಚರಿಕೆಯಿಂದ ಹೊಂದಿಸು ತ್ತಾರೆ. ತಂಪು ತಿಂಡಿಗಳನ್ನು (ಐಸ್‌ಕ್ರೀಮ್, ಸಾಲಡ್, ಫ್ರೂಟ್ಸ್, ಸ್ವೀಟ್ಸ್ ) ಶೀತಾಗಾರದಿ೦ದ ನೇರವಾಗಿ ವಿಮಾನದ ಶೀತಾಗಾರಕ್ಕೆ ಹೋಗುವ ತಕ್ಷಣ ವ್ಯವಸ್ಥೆ ಮಾಡಿರುವರು. ಅವನ್ನು ಯಾವಾಗಲೂ ಕೊಠಡಿಯ ಉಷ್ಣತೆಗೆ ತರುವದಿಲ್ಲ.

ಈ ಅಡುಗೆ ಮಾಡುವವರ ಜೊತೆಗೆ ಸಹಕರಿಸುವ ಸಿಬ್ಬಂದಿ ವರ್ಗವೆಲ್ಲ ಆಯಾ ವಿಮಾನದ ಆಯಾ ದೇಶದವರೇ ಇರುವರು. ಅ೦ತೆಯೇ ತಮ್ಮ ದೇಶದ ಪ್ರವಾಸಿಗರಿಗೆ ಹೊ೦ದುವ೦ತಹ ವ್ಯವಸ್ಥೆ ಮಾಡುತ್ತಾರೆ. ನಾವು ಒಳಗಡೆ ಇದ್ದಾಗ ಜಪಾನೀಸ್, ಸ್ಪ್ಯಾನಿಷ್ ಮತ್ತು ಜರ್ಮನ್ ಪರಿಣಿತ ಅಡುಗೆಯವರಿದ್ದರು.

ಮಾಡಿದ ಅಡುಗೆಯನ್ನು ಮೊದಲು ಪರೀಕ್ಷೆಗೆಂದು ಪ್ರಯೋಗಶಾಲೆಗೆ ಕಳಿಸುತ್ತಾರೆ. ಅಲ್ಲಿ ಬ್ಯಾಕ್ವೇರಿಯಾ ನಿರೋಧಕ ಅಥವಾ ತಡೆಗಟ್ಟುವಿಕೆ ವಿಧಾನ ಮಾಡುವುದು ಪ್ರಮುಖ ಹೊಣೆ. ಇದೆಲ್ಲ ಗ್ಯಾರಂಟಿ ಆದ ನಂತರ ಹೊಂದಿಸುವ
ಕಲೆ, ಹೊ೦ದಿಸಿಯಾದ ಮೇಲೆ ಆಲ್ಯೂಮಿನಿಯಂದ ತೆಳು ಹಾಳೆಯಿ೦ದ ಆಟೋಮೆಟಕ್ ಆಗಿ ಭದ್ರಪಡಿಸಿ ಮುಂದೆ ಕಳಿಸುವರು. ಹೀಗೆ ತಯಾರಾದ ಊಟದ ಪ್ಲೇಟ್‌ಗಳಲ್ಲೆಲ್ಲ ಬಿಸಿಯಾಗಿಡುವ ಕಪಾಟುಗಳಲ್ಲಿ ಹೊಂದಿಸಿಟ್ಟು ವಿಮಾನ ಬಂದಾಗ ಈ ಕಪಾಟಿನ ಸಮೇತವಾಗಿಯೇ ವಿಮಾನಿಗೆ ಸಾಗಿಸುವರು.

ಒಟ್ಬಾರೆ ಇಲ್ಲಿ ಸುಮಾರು 800 ಜನರನ್ನೊಳಗೊಂಡ ಸಿಬ್ಬ೦ದಿ ನೀಟಾಗಿ ಕಾರ್ಯಮಗ್ನರಾಗಿದ್ದರು. ಕಾಳು ಕಡ್ಡಿ, ಹಣ್ಣು ಹ೦ಪಲ ಸ್ವಚ್ಛಮಾಡುವವರು, ಸ್ಟೋರ್ ನೋಡಿಕೊಳ್ಳುವವರು. ತಟ್ಟೆ ಹೊಂದಿಸುವವರು, ತೊಳೆಯುವವರು, ಪ್ರಯೋಗ ಶಾಲೆಯಲ್ಲಿರುವವರು, ಲಾ೦ಡ್ರಿಯಲ್ಲಿರುವವರು, ವಿಮಾನದವರೆಗೆ ಸಾಗಿಸುವವರು ಎಂದು ವರ್ಗೀಕರಿಸಬುಹುದು..

ಇಲ್ಲಿ ಪಾತ್ರೆ ತೊಳೆಯುವ ವಿಧಾನ ಒಂದಿಷ್ಟು ಹೇಳಿದರೆ ಸರಿ. ಪಾತ್ರೆ  ತೊಳೆಯಲು ದೊಡ್ಡ ದೊಡ್ಡ ಮಿಶೀನುಗಳಿವೆ. ಒಂದೆಡೆಗೆ ಕೆಳಗೆ ಕುದಿಯುವ ನೀರು ಕಾಲುವೆಯ ತರಹ ಹರಿಯುತ್ತಲೇ ಇರುತ್ತದೆ ಅದರೊಳಗೆ  ಅಗಲ ಚೈನುಗಳ ಮೇಲೆ ಪಾತ್ರೆಗಳನ್ನು ಇಡುತ್ತಿದ೦ತೆಯೇ ಇದಕ್ಕೆ ಹೊಂದಿಕೊಂಡೇ ಬೇರೆ ಬೇರೆ ಆಟೋಮ್ಯಾಟಿಕ್ ಮೆಷಿನ್‌ಗಳು ಸ್ವಚ್ಛಮಾಡಿ ನೀಟಾಗಿ ಸರಿಸಿಬಿಡುವವು. ಸ್ವಚ್ಛಗೊ೦ಡ ಪಾತ್ರೆಗಳು ಪುನಃ ಈ ಸ್ವಯಂ ಚಾಲಿತ ಬೆಲ್ಟಿನ ಮೇಲೆ ಇಡಲ್ಪಡುವುವು.

ಮೇಲೆ ದೊಡ್ಡ ಅತಿಥಿಗೃಹ ಇದೆ. ಮಿಸ್ಟರ್ ವ್ಯಾಟ್ ನಮ್ಮನ್ನೆಲ್ಲ ಮೇಲೆ ಕರೆದೊಯ್ದು ವಿಶ್ರಾಂತಿ ತೆಗೆದುಕೊಳ್ಳಲಿಕ್ಕೆ ಹೇಳಿಹೋದರು. ಮು೦ದಿನ ಹತ್ತು ನಿಮಿಷಗಳಲ್ಲಿ ಬದಾಮ್ ಹಾಗೂ ಅಪಲ್‌ಕೇಕ್, ಚಹಾ, ಕಾಫಿ, ಕೊಲ್ಡ್‌ಡ್ರಿಂಕ್ಸ್
ತೆಗೆದುಕೊಂಡು ಬಂದು ನಿಮಗೇನು ಬೇಕು, ತಿನ್ನಿರಿ’ ಎಂದಾಗ ಎಲ್ಲರೂ ವಾಹ್ ಎಂದು ಗಡಬಡಿಸಿ ಎದ್ದು ತಟ್ಟೆಗೆ ಮುತ್ತಿಗೆ ಹಾಕಿದ ಮಜ ಈಗ ನೆನಸಿಕೊಂಡರೆ ನಗುಬರುತ್ತದೆ ನನಗೆ.

ಒಂದೆರಡು ದಿನ ಮೊದಲೇ ಆರ್ಡರ್ ಕೊಟ್ಟರೆ ಮನೆಯಲ್ಲಿಯ ಪಾರ್ಟಿಗಳಿಗೆ ನೀಟಾಗಿ ಖಾದ್ಯ ಒದಗಿಸುವರು. ಒಂದು ವಾರದ ಊಟ-ತಿ೦ಡಿಗಳ list  ಅವರಲ್ಲಿ ಸದಾ ಸಿದ್ಧವಿರುತ್ತದೆ. ಅದನ್ನು ನೋಡಿಕೊಂಡು ಬೇಕಾದವರು ತಮಗೆ ಬೇಕೆನಿಸಿದ ತಿಂಡಿ ತರಿಸಿ ತಿನ್ನಬಹುದು.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರಂಕುಶಮಿಟ್ಟೊಡಂ
Next post ಒಬ್ಬೊಬ್ಬ ಸೂರ್ಯನ ಕೊಡಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys