ತಾಳಬೇಕು ಬಾಳಬೇಕು ದೇವಚಿತ್ತ ಎಲ್ಲವು
ದುಃಖವೇಕೆ ಬದುಕಿನಲ್ಲಿ ದೇವಲೀಲೆ ಎಲ್ಲವು
ನಿಂದೆ ಏಕೆ?; ನಿಂದ್ಯವೆಲ್ಲಿ? ಮಾತೃ ಸೃಷ್ಟಿ ಎಲ್ಲವು
ಈ ವಿಶಾಲ ವಿಶ್ವವೆಲ್ಲ ಅವನೆ ಬೇರೆ ಇಲ್ಲವು
“ಭಕ್ತಿ ಬೇಕು” “ಒಳಿತು ಆಗು, ಸಾಕು ನುಡಿ, ಕುಡಿ
ದಿವ್ಯನಾಮದಮೃತ” “ದ್ವೈತ ಸತ್ಯ” “ನೀದುಡಿ
ದೇವದಾಸನಾಗಿ; ಜಗಳ ಬೇಡ!” “ನಾನೇ ದೇವನು”
“ಸಾಧನೆಯನುಮಾಡು ನಿತ್ಯ ಪಡೆವೆ ಮೆಟ್ಟಿ ಸಾವನು
ಹಸುಳೆ ಹಾಲು ಎದೆಯ ಹಾಗೆ ಇರಲಿ ಅಂತರಂಗವು
ಬಾಳ ಹಗರಣಂಗಳಲ್ಲಿ ಇರಲಿ ದೇವಸಂಗವು
ಸಾಗು ನಿತ್ಯ ಸತ್ಯದೆಡೆಗೆ ಹಿಂದೆ ಅಡಿಯ ಕಿತ್ತದೆ
ದೃಢತೆಧೈರ್ಯ ಸಾಕು ಸಾಧಕನಿಗೆ ಧನವುಮತ್ತದೆ”
ನಿನ್ನವಾಣಿ ನೊಂದ ಜೀವಿಗಳಲಿ ಬಲವ ತುಂಬಿದೆ
ಪರಮಹಂಸ ದಿಕ್ಕುಗೆಟ್ಟು ನಿನ್ನ ಮಾತ ನಂಬಿದೆ
*****