೧ ಬಂದಿರುವೆನಿದೊ ಮಾಯಿ ಧಾರವಾಡದ ತಾಯಿ ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ; ಜನುಮ ಜನುಮದ ಬಯಕೆ ತುಂಬಿ ನಿಂದಿಹುದಿಂದು ಕನಸಿನಲಿ ಕಂಡ ದಿನ ಬಂತು ಕೊನೆಗೆ. ೨ ಕೈಚಾಚಿ ಕರೆದಪ್ಪಿ ಎದೆ ತೆರೆದು ಕುಳಿತಿರಲು ಜೀವದಲಿ ಜೀವವೇ ಇಳಿಯುತಿಹುದು; ಎದೆಯ ಬಟ್ಟ...