ಯಾಕ ಬುದ್ದಿ ಬಾರದ ಹರ ಹರ ನಮಾ ದೇವರಿಗೆ ಯಾಕ ನಿದ್ರಿ ತೋರದ ಪ ಯಾಕ ಬುದ್ದಿ ಬಾರದ, ಶಿವ ನಿಮಗ್ಯಾಕ ನಿದ್ರಿ ತೋರದ ಲೋಕದವರ ಮುಂದ ಮಾರಿತೋರಬಾರದಮ್ಮ ||ಯಾ || ೧ ಔರಂಗದಲ್ಲಿದ್ದಾರು, ಮರಾತರ ಮನೆಯ ಕದ್ದಾರು ನಾರೀಗೊಬ್ಬಳಿಗೆ ಮೆಚ್ಚಿ ಬಳಿಗೆ ಬಾರದಿದ್ದಾರಮ್ಮ || ಯಾ || ೨ ಕಟ್ಟಿಗಿ ಮಣ್ಣ ಹೊಕ್ಕಾರು, ತಾ ಹುಟ್ಟ...

ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮಗಳ ಭಾವೈಕ್ಯತೆಯ ಗೂಡು ನಮ್ಮದು ಜನನಿ ಜನುಮ ಭೂಮಿ ಸ್ವರ್‍ಗ ತಾಣ ಮುಗಿಲ ಕಾನನದೊಳಗಣ ಸಮೃದ್ಧಿ ಚೆಂದ ಗಂಧ ಮೆರೆದ ಸಂಪದ್ಭರಿತ ನಾಡು ನಮ್ಮದು ಕನಕ ವೃಷ್ಟಿವನಿತ ಭಾವ ನಿತ್...

ದೇಹವೆಂಬುದು ಆತ್ಮ ದೇವಾಲಯ ದೇವಾಲಯದಲ್ಲಿ ಸದಾ ಭಕ್ತಿ ಇರಲಿ ಸತ್ಯವೆಂಬ ರಂಗವಲಿ ಬರೆಯಬೇಕು ನಾಮ ಸ್ಮರಣೆಯ ಗಂಟೆ ಬಾರಿಸಲಿ ವಿಶ್ವಾಸವೆಂಬ ಪೂಜೆ ಇರಲಿ ಧ್ಯಾನವೆಂಬ ಮಂತ್ರ ಪಠಿಸಲಿ ಸತ್ಕರ್ಮವೆಂಬ ಗಂಧವ ಹರಡಲಿ ಯೋಗವೆಂಬ ದೀಪವಲ್ಲಿ ಬೆಳಗಲಿ ನಿರಾಡಂಬರ...

ಕುಮುದಪುರದಲ್ಲಿರುವ ವೈಷ್ಣವ ಮಂಡಳಿಯು ಸಣ್ಣದಲ್ಲ. ಆ ಮತದ ಪ್ರಮುಖ ಗೃಹಸ್ತರಲ್ಲಿ ಮತಸಂಬಂಧವಾದ ವಿಚಾರಗಳಿಗೆ ಹೆಚ್ಚು ತಾತ್ಪರ್ಯ ಕೊಡುವ ರಂಗಾಚಾರ್ಯ, ಲಕ್ಷ್ಮಿಲೋಲಾಚಾರ್ಯ ಶಾರ್ಜ್ಗಧರೆ ಉಪಾಧ್ಯ, ಗರುಡಾಚಾರ್ಯ, ಖಗವಾಹನ ಭಟ್ಟ, ಜ್ಞಾನಸಾಗರರಾಯ, ಮೀನ...

ನನ್ನ ಜೀವ ಮನ ಹಿಗ್ಗಿ ಹಿಗ್ಗಿ ಆಕಾಶಕಿಂತ ಅಗಲ ಆವರಣರಹಿತದಾಕಾಲ ಮುಳುಗಿ ಉಂಡಿತ್ತು ಹರ್ಷ ಮಿಗಿಲ ಮೈಯ ಪಿಂಡ ಉಡುಗಿತ್ತು ಉಳಿದು ಜಲಲಿಪಿಯ ರೇಷೆಯಾಗಿ ಆತ್ಮದೇಕಾಂತ ಚಿಂತೆಯಲ್ಲಿ ಸ್ಮೃತಿ ಮಾತ್ರ ಶೇಷವಾಗಿ. ಬಣ್ಣ ಹಾರಿ ಅಡಗಿತ್ತು ವಿಶ್ವ ಸುತ್ತೆಲ್ಲ...

ಸಾವೇರಿ ೧ ನೀಕೊಡುವುದೆಂದು ಮನೆ- ಯಾಕೆಯಧಿಕಾರವನು? ಸಾಕಿದೇಕಾಕಿನಿಯ ಕಾಕುಬಾಳು! ಹಾಕುತಿದೆ ಬರೆಯ ಮೊದ- ಲೇ ಕೊರಗುತಿರುವೆದೆಗೆ ಲೋಕದಾ ಜನರ ಬಡತನದ ಗೋಳು. ೨ ನಿರುಕಿಸಿದರೆತ್ತಲೂ ತಿರಿವವರ ತಂಡಗಳು ಕುರುಡ-ಕುಂಟರು, ಕರುಣಗೀತದವರು! ಕೊರೆವ ಚಳಿ ಬಿ...

ಯಾರು ನಿನಗೆ ಸಮಯದಿ ಸಹಾಯ ಮಾಡುವರೋ ಅವರ ಸ್ನೇಹ ಮಾಡಿಕೊ| ಯಾರು ನಿನ್ನ ಹಿತವ ಕೋರುವರೋ ಅವರನೇ ಬಂಧು ಎಂದುಕೊ| ಎಲ್ಲೇ ಇರಲಿ ಹೇಗೇ ಇರಲಿ ಒಳ್ಳೆಯತನವ ಬೆಳೆಸಿಕೊ|| ನಿನ್ನ ಬಾಲ್ಯ ಗೆಳೆಯ ನಿನಗೆ ಸಮಯದಿ ಸಿಗದಿರಬಹುದು| ನಿನ್ನ ಆತ್ಮೀಯ ಬಂಧುಗಳು ತಟ್...

ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು. ಬೆವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು. ಅತ್ತ ಬೆಟ್ಟ ಇತ್ತ ನೀರು ನಡುವೆ ನಗಲು ಎದ್ದವು- ಮೂಳೆಗಳೇ ಮರಗಳಾಗಿ ಆಸೆ ಹಸಿರು ಎಲೆಗಳು. ಕನಸು ಬಿರಿವ ಹೂವು- ಕಾಯ...

ಭಕ್ತಿಯೆಂಬುದು ಅತ್ಯಂತ ಖಾಸಗಿ ಕಲ್ಪನೆ. ಇದು ದೈವದ ಬಗೆಗಿನ ಕಲ್ಪನೆ ಮಾತ್ರವಲ್ಲ; ವಿವಿಧ ವ್ಯಕ್ತಿಗಳ ನಡುವಿನ ಭಾವನೆಯ ಒಂದು ವಿಧವೂ ಹೌದು. ಆದರೆ ಇದನ್ನು ಪಾರಂಪರಿಕವಾಗಿ ಭಕ್ತ ಮತ್ತು ದೈವದ ನಡುವಿನ ಸಂಬಂಧದ ನೆಲೆಯಲ್ಲಿಯೇ ಸ್ಥಾಪಿಸುತ್ತಾ ಬರಲಾಗ...

ನಾಯಿ ಮರಿಯನೊಂದ ರಂಗನು ಕೊಂಡು ತಂದ ಟಾಮಿ ಅದರ ಹೆಸರು ಅದುವೆ ಅವನ ಉಸಿರು ಮೂರೂ ಹೊತ್ತು ಹಾಲು ಝೂಲು ಝೂಲು ಕೂದಲು ನಿತ್ಯ ಸೋಪಿನ ಸ್ನಾನ ಶುಭ್ರ ಬಿಳಿ ಬಟ್ಟೆ ಥಾನು ಬೆಳೆದು ದೊಡ್ಡದಾಯಿತು ಅವನ ರಕ್ಷಕನಾಯಿತು ರಂಗ ಕರೆದರೆ ಮಾತ್ರ ಬರುತ್ತಿತ್ತು ಓಡ...

ಜಗದ ತೇಜಮಿದೆಂದು ಇದ ಸಲಹಬೇಕೆಂದು ಜನನಿಯಾದಳು ತಾಯಿ ನೋವು ಹಲವನು ತಿಂದು ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ. ಗೇಣುದ್ದ ದೇಹದಿಂ ಬಂದ ಶಿಶುವಂ ಹಾಡಿ ಬೇನೆಗಳ ಲೆಕ್ಕಿಸದೆ ಬೆಳೆಸಿದಳು ಮೊಲೆಯೂಡಿ ಕುಲಕೋಟ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...