ವಾಗ್ದೇವಿ – ೩೮

ವಾಗ್ದೇವಿ – ೩೮

ಕುಮುದಪುರದಲ್ಲಿರುವ ವೈಷ್ಣವ ಮಂಡಳಿಯು ಸಣ್ಣದಲ್ಲ. ಆ ಮತದ ಪ್ರಮುಖ ಗೃಹಸ್ತರಲ್ಲಿ ಮತಸಂಬಂಧವಾದ ವಿಚಾರಗಳಿಗೆ ಹೆಚ್ಚು ತಾತ್ಪರ್ಯ ಕೊಡುವ ರಂಗಾಚಾರ್ಯ, ಲಕ್ಷ್ಮಿಲೋಲಾಚಾರ್ಯ ಶಾರ್ಜ್ಗಧರೆ ಉಪಾಧ್ಯ, ಗರುಡಾಚಾರ್ಯ, ಖಗವಾಹನ ಭಟ್ಟ, ಜ್ಞಾನಸಾಗರರಾಯ, ಮೀನಾಕ್ಷಯ್ಯ, ಉಪೇಂದ್ರ, ವರುಣ ಇವರ ಸಮಯವನ್ನು ಕಾದು ಅವ ರೆಲ್ಲರ ಕೂಡೆಯೂ ಸೂರ್ಯನಾರಾಯಣನ ಆಶ್ರಮಕ್ಕೆ ವಿಘೃತಾರದಿದ್ದರೆ ಇಡೀ ಬ್ರಹ್ಮ ಸಭೆಗೆ ಕಲ್ಮಷ ತಗಲುವುದೇ ಸರಿ ಎಂದು ಅವರಿಗೆ ದುರ್ಬೋ ಧನೆ ಕೊಟ್ಟು ಶೀಘ್ರ ಒಂದು ದೊಡ್ಡ ಸಭೆಯ ಮೂಲಕ ಆಶ್ರಮವಾಗದಂತೆ ಉಪಾಯ ಹುಡುಕುವುದಕ್ಕೆ ಅವರ ಸಾನುಮತಿಯನ್ನು ವೇದವ್ಯಾಸನು ಅಪೇಕ್ಷಿಸಿದನು. ಅವರೆಲ್ಲರೂ ಒಡಂಬಟ್ಟರು. ಸಭೆಯು ಯಾವನಲ್ಲಿ ಕೂಡಿಬರ ಬೇಕೆಂಬುದನ್ನು ಕುರಿತು ಆಲೋಚನೆಯಾಯಿತು. ಆಂಜನೇಯಾಲಯದಲ್ಲಿ ಹಿಂದೆ ವೇದವ್ಯಾಸನ ಮುಖಕ್ಕೆ ಮಸಿತಗಲಿದ ನೆನಪು ಎಲ್ಲರಿಗೂ ಇತ್ತು. ಆದುದರಿಂದ ಅಲ್ಲಿ ಬೇಡವೆಂದು ನಿರ್ಣಯವಾಗಿ ಪದ್ಮನಾಭ ಘನಪಾಠಿಯ ಮಠವನ್ನು ಆರಿಸೋಣಾಯಿತು. ಪಟ್ಟಣವಾಸಿ ಬ್ರಾಹ್ಮಣರಿಗೆಲ್ಲಾ ಹೇಳಿಕೆ ಮಾಡುವುವದಕ್ಕೆ ಮಾಧವ ಭಟ್ಟನೆಂಬವನನ್ನು ನೇಮಿಸಿತು. ಅವನು ಅವ ರೆಲ್ಲರಿಗೂ ಹೇಳಿಬಿಟ್ಟು ಮರಳಿ ಬರುವಾಗ, ಭೀಮಾಜಿಯಿಂದ ಮುಂದಾಗಿ ಎಚ್ಚರಿಸಲ್ಪಟ್ಟ ಯಾಕೂಬಖಾನನು ಅವನನ್ನು ಕಂಡು, ಕೊಂಚಸಮಯ ಅವನ ಸಂಗಡ ವಾಗ್ದೇವಿಯನ್ನು ದೂರಿ ಸಂಭಾಷಣೆ ಮಾಡುತ್ತಾ ಸಭೆಯ ಉದ್ದೇಶವನ್ನು ತಿಳಿದು ಕೊತ್ವಾಲಗೆ ವರ್ತಮಾನಕೊಟ್ಟನು. ಸಭೆಯು ಕೂಡಿ ಬಂದ ಪಕ್ಷದಲ್ಲಿ ಸಭಾಸದರಿಂದ ಮಾಡಲ್ಪಡಬಹುದಾದ ನಿರ್ಣಯವು ವೇದವ್ಯಾಸೆನೆ ಹಟಸಾಧನೆಗೆ ಉಪಯುಕ್ತವಾಗಿ ಸೂರ್ಯನಾರಾಯಣನ ಅಭ್ಯುದ ಯಕ್ಕೆ ವಿಷತ್ತುಂಟುಮಾಡುವ ಸ್ವಭಾವದ್ದಾಗುವ ಕಾರಣ ಸಭೆಯೇ ಕೂಡ ದಂತೆ ಕೃತ್ರಿಮೋಪಾಯ ನಡೆಸುವದು ಉತ್ತಮವೆಂದು ಶಾಬಯ್ಯನ ಅನು ಮತಿಯಿಂದ ಭೀಮಾಜಿಯು ನಿಶ್ಷೈಸಿ ವಾಗ್ದೇವಿಗೆ ಬರಲಿಕ್ಕಿರುವ ಈ ಅನಿಷ್ಠ ನಿವಾರಣೆಯ ಯತ್ನವನ್ನು ಮಾಡಲುದುಕ್ತನಾದನು.

ಸಭೆಗೆ ನೇಮಿಸಿದ ದಿನಕ್ಕೆ ಎರಡು ದಿವಸಗಳ ಮುಂಚೆ ಭೀಮಾಜಿಯು ಯಾಕುಬಖಾನನಿಂದ ಒಂದು ವರ್ತಮಾನ ಸಂಗ್ರಹದ ವಾಙ್ಮೂಲವನ್ನು ಬರೆಸಿಕೊಂಡು ರಾಮದಾಸರಾಯನ ದುರ್ಭೋಧನೆಯಿಂದ ವೇದವ್ಯಾಸ ಉಪಾಧ್ಯನು ಕುಮುದಪುರದ ಆಢ್ಯಬ್ರಾಹ್ಮಣರನ್ನು ಒಟ್ಟುಗೂಡಿಸಿ ಚಂಚಲ ನೇತ್ರರ ಮೇಲಿನ ದ್ವೇಷವನ್ನು ಪೂರೈಸಿಕೊಳ್ಳು ವುದಕ್ಕೋಸ್ಟರ ದೊಂಬಿ ಯನ್ನು ಮಾಡುವ ದುರಾಲೋಚನೆಯಲ್ಲಿರುವದಾಗಿ ಒಂದು ಮನವಿಯನ್ನು ಬರೆದುಕಳುಹಿಸಿ, ತಾನು ನಡೆಸಿರುವ ವೈನದ ಸಮಾಚಾರವನ್ನು ವಾಗ್ದೇವಿಯ ತಿಳುವಳಿಕೆಗೆ ತಂದನು. ಶಾಬಯ್ಯಗೆ ಆ ಮನವಿ ತಲಪಿದೊಡನೆ ಅಂಧಾ ದ್ದ್ಯಾವಾವದೊಂದು ಕೂಟದ ದೆಸೆಯಿಂದ ನೆಮ್ಮದಿಗೆ ಭಂಗಬಾರದಂತೆ ಮುಂದಾಗಿ ಯೋಚನೆ ಮಾಡುವ ಹಾಗೂ ಅಂಧಾ ಸಂಭವ ಒದಗಿದರೆ ಅಪ ರಾಧಿಗಳನ್ನು ಒಡನೆ ಕೈದುಮಾಡಿ ನ್ಯಾಯಕ್ಕೆ ಗುರಿಪಡಿಸುವ ಹಾಗೂ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಕೊತ್ವಾಲಗೆ ಅವನು ಅಂತರಂಗದಲ್ಲಿ ನಿರೂಪಿಸಿದರು. ಶಾಬಯ್ಯನ ಕಚೇರಿಯಲ್ಲಿ ವ್ಯವಹರಿಸುವ ವಕೀಲರ ಸಂಘ ದಲ್ಲಿ ಅವನ ಆಪ್ತನಾದ ಅನಂತಮೇನವನೆಂಬ ಹೆಸರುಹೋದ ವಕೀಲಗೆ ಐದು ಸಾವಿರ ರೂಪಾಯಿ ರುಸುಂ ಮುಂಗಡಕೊಟ್ಟು ನೇಮಿಸಿ ಅವನ ಅನುಜ್ಞೆಗಳಂತೆ ಮಾಡಬೇಕಾದ ಕ್ರಮವನ್ನು ಚಂಚಲನೇತ್ರರ ಕಡೆಯಿಂದ ಅನುಸರಿಸೋಣಾಯಿತು.

ಸಭೆಯು ಕೂಡಿಬರುವದಕ್ಕೆ ನಿರ್ಣಯಿಸಿದ ಕಾಲಕ್ಕೆ ಮುಂಚಿತವಾಗಿ ಸಭಾಸದರ ಸವಾರಿಯು ಘನಸಪಾಠಿಯ ಮಠಕ್ಕೆ ಬರುವ ವೇಳೆ ದಾರಿಯಲ್ಲಿ ಕೆಲವು ಪೋಕರಿಜನರು ನಗುತ್ತಾ–ಇಂದೇನು ವಿಶೇಷವಪ್ಪ? ಎಂದು ಒಬ್ಬನು ಇನ್ನೊಬ್ಬನಿಗೆ-ಪ್ರಶ್ನೆಮಾಡುವುದಕ್ಕೆ ತೊಡಗಲು; ಅದಕ್ಕೆ ಪ್ರತ್ಯುತ್ತರ ವಾಗಿ-ಇಂದೋ! ವೇದವ್ಯಾಸ ಉಪಾಧ್ಯನ ತಲೆ ಬೋಳಿಸುವ ಹಬ್ಬವೆಂದು ಒಬ್ಬನೂ, ರಾಮದಾಸರಾಯತ ಮಾತೃದಿನವೆಂದು ಇನ್ನೊಬ್ಬನೂ, ಅಷ್ಟೆಯೋ ಪದ್ಮನಾಭಘನಪಾಠಿಯ ಮಠಕ್ಕೆ ಯಜ್ಞೇಶ್ವರನ ಪ್ರತಿಷ್ಠೆ ಪ್ರಸ್ತವೆಂದು ಇನ್ನೊಬ್ಬನೂ ಹೀಗೆ ಬಾಯಿಗೆ ಬಂದಂತ ಗೇಲಿಮಾಡುವ ಲೀಲೆಯನ್ನು ನೋಡಿ ಸಹಿಸಕೂಡದೆ ವೇದವ್ಯಾಸನೂ ರಾಮದಾಸರಾಯನೂ ಮಣ್ಣು ಗದ್ಜೆಗಳನ್ನು ಬಿಸುಡುವದರ ದ್ವಾರ ಆ ಶರರನ್ನು ಓಡಿಸಿಬಿಡುವದಕ್ಕೆ ನೋಡಿ ದರು. ದೂರ ಒತ್ತಟ್ಟು ನಿಂತುಕೊಂಡಿದ್ದ ಯಾಕುಬಖಾನನು ಪದ್ಮನಾಭ ಘನವಾಠಿಗೆ ನೇತ್ರ ಸಂಕೇತ ಮಾಡಿದನು. ಅವನು ಒಳಗಿನಿಂದ ಒಂದು ಕತ್ತಿ ಯನ್ನು ಹಿಡುಕೊಂಡು ಒಂದು-“ಬಾಯಿ ಮುಚ್ಚಿ ನಡದು ಬಿಟ್ಟರೆ ಒಳ್ಳೇದು; ಇಲ್ಲವಾದರೆ ಕಡಿದು ಬಿಡುತ್ತೇನೆ” ಎಂದು ಬೆದರಿಸಿದನು. ಇಷ್ಟೆಲ್ಲಾ ಹೊರಗೆ ನಡಿಯುವ ಸಮಯದಲ್ಲಿ ಮರದೊಳಗೆ ಸಭಾನಾಯಕನಾಗಿ ಆರಿಸಲ್ಪಟ್ಟ ರುವ ಗರುಡಾಚಾರ್ಯನು ಕುದುರೆಗೆ ಹೊಡಿಯುವ ಚಬುಕನ್ನು ಹಿಡು ಕೊಂಡು ಬೀದಿಗೆ ಇಳಿದು ಇಬ್ಬರು ಮೂವರಿಗೆ ಏಟುಕೊಟ್ಟನು. ಆಗ ಹಿಂದಿನಿಂದ ಆ ಪೋಕರಿಗಳ ಕೂಟದವರು ಹಲವರು ಒಮ್ಮೇಲೇ ಸಭಾನಾ ಯಕನನ್ನು ಮುತ್ತಿ ಚಬುಕನ್ನು ಕ್ಷಣದಲ್ಲಿ ಅವನ ಕೈಯಿಂದೆಳೆದುಬಿಟ್ಟು ಅದರ ಬುಡದಿಂದ ಅವನ ಪೃಷ್ಟಕ್ಕೆ ಚನ್ನಾಗಿ ಬಡಿದರು.

ಹಾರಯ ಗರುಡಾ ಹಾರಯ
ಬಾರಯ ಕುರುಬಾ ಬಾರಯ
ತೋರಯ ಮೋರೆಯ ತೋರಯ
ಸೇರಯ ಬಾನವ ಸೇರಯ

ಹೀಗೆಂದು ಹಾಡಿ ಅವನನ್ನು ಹೀಯಾಳಿಸಿ ಅವನ ಸೊಂಟದಲ್ಲರುವ ಜೋಡೆಳೆ ಉಡಿದಾರವನ್ನು ಕೈಬೆರಳುಗಳಲ್ಲಿರುವ ನವರತ್ನದ ಉಂಗುರಗಳನ್ನೂ ಕಸುಕೊಂಡು ಕೈಕಟ್ಟಿ ಕುಣಿಯಲಿಕ್ಕೆ ಉಪಕ್ರಮಿಸಿದರು. ಸಭಾನಾ ಯಕನ ವಾಪವನ್ನು ಕಂಡು ಸಭಾಸದರಲ್ಲಿ ಒಬ್ಬನಾದರೂ ಆ ಶುಂಠರ ಕಣ್ಣೆದುರುಬೀಳದೆ ಅಸ್ತವ್ಯಸ್ತವಾಗಿ ಹಿಂಬಾಗಲಿನಿಂದ ಪಲಾಯನ ಮಾಡಿದರು.

ವೇದವ್ಯಾಸ ಉಪಾಧ್ಯನು–“ಅಹಾ! ನನಗಿನ್ನೆಂಥಾ ದುರ್ದಶೆಹಿಡಿ ಯಿತು. ಜಯಹೀನನಾದ ನಾನು ಯಾಕೆ ಈ ಪೃಥ್ವಿಯಲ್ಲಿ ಜನನಕ್ಕೆ ಬಂದೆ? ಎಂದು ಎರಡು ಕೈಗಳನ್ನು ತಲೆಯ ಮೇಲೆ ಮಡಗಿ ರೋಧನ ಮಾಡುವದಕ್ಕೆ ಆರಂಭಿಸಿದನು. ಈ ವೇಳೆಯಲ್ಲಿ ರಾಮದಾಸರಾಯನು ಅವನನ್ನು ಬಹು ಚಂದದಿಂದ ಸಮಾಧಾನ ಪಡಿಸಿದನು. “ಸಭೆಯು ನಿರ್ವಿಘ್ನವಾಗಿ ನಡೆಯು ತ್ತಿದ್ದ ಪಕ್ಷದಲ್ಲಿ ನಮ್ಮ ಕೋರಿಕೆಯು ನೆರವೇರಲಿಕ್ಕೆ ಅನುಕೂಲವಿರುವದರ ನೂರುಮಡಿ ಪ್ರಯೋಜನ ಈಗ ದೊರೆಯುವದಕ್ಕೆ ಸಂದರ್ಭವಾಯಿತು. ನಮ್ಮ ಅಹಿತರು ಕೇವಲ ಅಪಾವೋಲಿ ಜನರನ್ನು ಕೂಡಿಸಿ ಮಾಡಿಸಿದ ಲೂಟಿಯು ಅವರನ್ನು ಕಾರಾಗೃಹದ ಬಾಗಲಿಗೆ ಸ್ವತೇವ ಎಳಕೊಂಡು ಹೋಗುವದು. ಗರುಡಾಚಾರ್ಯರ ಮೈಮೇಲೆ ಇದ್ದ ಆಭರಣಗಳನ್ನು ಕಸು ಕೊಂಡ ಅಪರಾಧಕ್ಕೆ ‘ಚೋರಿ’ ಎಂಬ ಹೆಸರು ಕಾನೂನು ಪುಸ್ತಕದಲ್ಲಿ ಹಾಕಿದೆ. ಅದು ಸಣ್ಣ ತಪ್ಪಲ್ಲ. ಒಡನೆ ಕೊತ್ವಾಲನ ಮುಂದಿ ಫಿರ್ಯಾದು ಬಾಯಿದೆರೆಯಿಂದ ಹೇಳಿಬಿಟ್ಟರೆ ಸಾಕ್ಕು ಜವಾನರನ್ನು ಕಳುಹಿಸಿ ಅಪರಾಧಿ ಗಳನ್ನು ಎಳತರಿಸದೆ ಇರುವನೇನು? ಫಿರ್ಯಾದು ಹೇಳುವಾಗ ಅಲ್ಲಿ ಕೊಂಚ ಅಧರ್ವಣೋಪಾಯ ಮಾತ್ರ ಮಾಡಿಬಿಡಬೇಕು. ಇಲ್ಲವಾದರೆ ಗಾಯ ಒಂದುಕಡೆಯಲ್ಲಿ ಮದ್ದು ಇನ್ನೊಂದು ಕಡೆಯಲ್ಲಿ ಆಗಿಹೋಗದೆ ಚೋರಕೃತ್ಯ ನಡೆಯುವದಕ್ಕೆ ಸಹಕಾರಿಗಳಾದ ಮರಾಧಿಪತಿಗಳಿಗೂ ಅವರ ಪರಿವಾರದ ಮುಖ್ಯಸ್ಥರಿಗೂ ಅವೇ ಫಿರ್ಯಾದಿಯಲ್ಲಿ ಕೂಡಿಸಿಬಿಟ್ಟರೆ ಕಲಸ ಪರಿಷ್ಠಾರ ವಾಗುವುದು. ಕೊನೆಗೆ ನಾವು ಹೇಳಿದಂತೆ ಕೇಳಿದರೆ ಹ್ಯಾಗೂ ಸುಧಾರಿಸಿ ಬಿಡೋಣ ಇಲ್ಲವೇ ಅವರೆಲ್ಲರೂ ಸೆರೆಮನೆಯಲ್ಲಿ ಬಿದ್ದಿರಲಿ. ಏವಂಚ “ಆಶ್ರ ಮವು ಸ್ವಪ್ನದಲ್ಲಿ ಬಾಳೆಹಣ್ಣು ತಿಂದಂತಾಗುವುದು. ವಕೀಲನು ಹೀಗಂಬೋಣ, ವೇದವ್ಯಾಸ ಉಪಾಧ್ಯನು ಅಳುತ್ತಿರುವ ಬಾಯಿಯಿಂದಲೇ ನಗಲಿಕ್ಕೆ ತೊಡಗಿ ಆ ಕುನ್ನಿಗಳ ಬಿಸಾತೇನೆಂದು ಕುಣಿದಾಡಿದನು.

ವಿಳಂಬಮಾಡದೆ ಗರುಡಾಚಾರ್ಯನೊಬ್ಬನನ್ನೇ ಕರೆದು ಕೊಂಡು ರಾಮದಾಸನು ಕೊತ್ವಾಲನ ಕಚೇರಿಗೆ ಹೋದನು. ಮತ್ತು ಚಂಚಲನೇತ್ರ ರಿಗೂ ವಾಗ್ದೇವಿಗೂ ಮಠದ ಪಾರುಪತ್ಯಗಾರರಿತ್ಯಾದಿ ಪರಿವಾರ ಸಂಘಕ್ಕೆ ಕೂಡಿಸಿ ಜೋರಿ ಫಿರ್ಯಾದು ಬರಸಿ ಭೀಮಾಜಿಯ ಮುಂದೆ ಇಟ್ಟನು. ಈ ದೂರು ಕೊತ್ವಾಲನ ಮುಂದೆ ಬರುವದರ ಮುಂಚಿತವಾಗಿಯೇ ಎದುರು ಪಕ್ಷದ ಪ್ರಧಾನಪುರುಷ ದಾಮೋದರಭಟ್ಟನು ತಾನು ಕಸುಕೊಂಡ ನಗ ಗಳಲ್ಲಿ ನೇವಳವನ್ನು ಬಚ್ಚಿಟ್ಟು ಉಂಗುರಗಳನ್ನೂ ಚಬುಕನ್ನೂ ಕೊತ್ವಾಲ ನಿಗೆ ತೋರಿಸಿ ನಡೆದ ವೃತ್ತಾಂತವನ್ನು ತಿಳಿಸಿದ್ದುದರಿಂದ ಅವನ ವಾಗ್ಮೂಲ ಮೊದಲೇ ಅವನು ಬರಕೊಂಡಿದ್ದನು. “ಅಯ್ಯಾ ಗರುಡಾಚಾರ್ಯರೇ। ನಿಮ್ಮ ಮತ್ತು ಬೇರೆ ಹಲವು ಜನರ ಮೇಲೆ ದಾಮೋದರಭಟ್ಟನು ನಮ್ಮ ಮುಂದೆ ದೂರುಕೊಟ್ಟು ಅವನ ದೂರಿಗೆ ಆಧಾರವಾಗಿ ಕೊಂಚ ಸಂಗತ್ಯಾನುಸಾರ ವಾದ ತಾರ್ಕಣೆ ತಂದಿರುತ್ತಾನೆ. ನಿಮ್ಮ ಫಿರ್ಯಾದು ಸಹಾ ಈಗ ಬಂತಲ್ಲ. ಈ ಎರಡು ಮೊಕದ್ದಮೆಗಳಲ್ಲಿ ನಾನು ನಡೆಸಬೇಕಾದ ವಿಚಾರಣೆಯನ್ನು ಮಾಡಿಬಿಟ್ಟು ಕಾರ್ಭಾರಿಗಳಿಗೆ ಮನವಿ ಬರಕೊಂಡು ಅವರ ಅಜ್ಞೆಯಂತೆ ನಡಕೊಳ್ಳುವೆನು. ಈಗ ನೀವೆಬ್ಬರೂ ನಿಮ್ಮ ನಿಮ್ಮ ಮನೆಗಳಿಗಭಿಮುಖರಾಗ ಬಹುದು” ಎಂದು ಕೊತ್ವಾಲನ ಅಪ್ಪಣೆಯಾಯಿತು. “ಇದೇನಪ್ಪ, ದುರ್ವಾ ರ್ತೆ ನಮ್ಮ ಒಡವೆಗಳನ್ನೇ ಎಳಕೊಂಡು, ನಮ್ಮ ಮೇಲೆಯೇ ಮುಂದಾಗಿ ದೂರು ಕೊಟ್ಟಿರುವರೇನು? ಪೂರ್ವಾಪರ ನಾವು ಚಂದಾಗಿ ಆಲೋಚಿಸದೆ ಪತಂಗ ಬೆಂಕಿಗೆ ಹಾರಿದಂತಾಗುವದೋ ಏನೊ? ನಾವು ಸ್ವಲ್ಪ ಅವಸರ ಮಾಡಿದೆವೆನ್ನಬೇಕು. ಇದೆಲ್ಲಾ ವೇದವ್ಯಾಸನ ಪ್ರಸಾದವಷ್ಟೇ. ತಕ್ಕೊಂಡ ನಕ ನಿವೃತ್ತಿಯಿಲ್ಲ. ಶ್ರೀಹರಿ ಇಟ್ಟಂತೆ ಆಗುವದು. ನಷ್ಟ ಭ್ರಷ್ಟ ಕಷ್ಟಕ್ಕೆ ಗುರಿಯಾದೆವಲ್ಲ! ಮ್ಲಾನವದನರಾಗಿ ಮನೆಗಳಿಗೆ ಮರಳುವಾ! ನಿನ್ನೆಯಿಂದ ಎಡಕಣ್ಣು ಹಾರುತ್ತದೆ. ದುರಿತ ಸೂಚನೆ ಆದಿಯಲ್ಲೇ ಇದ್ದು ನಾವು ಈ ದುರ್ವಾದದಲ್ಲಿ ಪ್ರವೇಶಿಸಿದ್ದ ಅನುಚಿತ” ಎಂದು ಗರುಡಾಚಾರ್ಯನು ಅತಿಶಯ ದುರ್ಮಾನದಿಂದ ಮನೆಗೆ ನಡೆದನು. ಅವನಂತೆ ಮರ್ಯಾದೆವಂತ ರಾದ ಬೇರೆ ಗೃಹಸ್ಟರು ಕೂಡಾ ಮುಖ ಸಣ್ಣದು ಮಾಡಿ ನೊಂಡು ಅವನ ಹಿಂದೆಯೇ ನಡೆದರು. ರಾಮದಾಸನು ಅವರಿಗೆಲ್ಲಾ ಧೈರ್ಯಹೇಳುವದಕ್ಕೋ ಸ್ಕರ ಬಡ ಬಡ ಮಾತನಾಡುತ್ತಾ ಇದ್ದರೂ ಅವರ್ಯಾರೂ ಅವನ ವನ್ನಿಗೆ ಕಿವಿಕೊಡಲಿಲ್ಲ. ವೇದವ್ಯಾಸನೊಬ್ಬನೇ ಬಸವನ ಹಿಂದೆ ಬಾಲವೆಂಬ ಗಾದೆ ಯಂತೆ ಅವನನ್ನು ಹಿಂಬಾಲಿಸಿದನು.

ಸಾಯಂಕಾಲ ಸಮಯದಲ್ಲಿ ಭೀಮಾಜಿಯು ಅನಂತಪಂಡಿತನನ್ನು ಕಂಡು ಶಾಬಯ್ಯನ ಭೇಟಯನ್ನು ಮಾಡಿ, ಅಂದು ನಡದ ವಿನೋದಕಾರಕ ವಾದ ವಾರ್ತೆಯನ್ನು ತಿಳಿಸಿದ ಬಳಿಕ ಇಬ್ಬರೂ ಅಳ್ಳೆ ಬಿರಿಯುವ ಪರಿಯಂತ ನಕ್ಕರು. ಅಂತರಂಗದಲ್ಲಿ ಕಾರ್ಭಾರಿಯು ಕೊಟ್ಟ ಅನುಜ್ಞೆಗಳನ್ನನುಸರಿಸಿ ಭೀಮಾಜಿಯು ಮರುದಿವಸ ಉಭಯ ಪಕ್ಷದವರಿಗೂ ಕಚೇರಿಗೆ ಕರತರಿಸಿ ಅವರವರ ಕಡೆಯ ಸಾಕ್ಷಿಗಾರರನ್ನು ವಿಚಾರಿಸಿ ಅವರ ಹೇಳಿಕೆಗಳನೆಲ್ಲಾ ಸಂಕ್ಷೇಪವಾಗಿ ಬರಕೊಂಡನು. ರಾಮದಾಸನ ಆಲೋಚನೆಗನುಗುಣವಾಗಿ ಚಜುಕು ತನ್ನದಲ್ಲವೆಂದು ಗರುಡಾಚಾರ್ಯನು ತನ್ನ ಹೇಳಿಕೆಯಲ್ಲಿ ಬರ ಕೊಟ್ಟನು. ಉಂಗುರಗಳು ತನ್ನದೆಂದು ಒಪ್ಪಿಕೊಂಡನು. ನೇವಳ ತಾನು ಎಳಕೊಳ್ಳಲಿಲ್ಲವೆಂದು ದಾಮೋದರ ಭಟ್ಟನು ಖಂಡಿತವಾಗಿ ಹೇಳಿದ ಕಾರಣ ಅದರ ತಲಾಷಿಯನ್ನು ಮಾಡಿಸುವ ಅನಶ್ಯವಾಯಿತು. ಯಾಕುಬ ಖಾನನನ್ನು ಅದಕ್ಕೋಸ್ವರ ಕಳುಹಿಸೋಣಾಯಿತು. ಕೊತ್ವಾಲನೂ ಕಾರ್ಭಾರಿಯೂ-ಹೆಚ್ಚು ಸಂಬಳ ಸಿಕ್ಕುವ ಐಶ್ವರ್ಯವಂತರು, ಅವರಿಗೆ ಹಣದ ಬಿಸಾತಿಲ್ಲ. ತನಗೇನಾದರೂ ಈ ಸಮಯದಲ್ಲಿ ಕೈವಶವಾಗದೆ ಹೋದರೆ ವ್ಯರ್ಧವಾಗಿ ಒದ್ದಾಡುವದರಿಂದ ಮುಂದೆ ದೊಡ್ಡ ಬಡ್ತಿಯಾಗುವ ಪ್ರಯೋಜನ ಸಿಕ್ಕುವ ನಂಬಿಗೆಯಿಲ್ಲದೆ ಯಾಕೂಬಖಾನನು ನೇವಾಳವನ್ನು ಬಗಲಾಗೆ ಸೇರಿಸಿಕೊಳ್ಳ ಬೇಕೆಂಬ ಇಚ್ಛೆಯುಳ್ಳವನಾಗಿ ದಾಮೋದರ ಭಟ್ಟ ನನ್ನು ಒಂದು ಗೋಪ್ಯವಾದ ಸ್ಥಳಕ್ಕೆ ಕರತಂದು, “ಇಗೋ! ನೇವಳ ನೀನು ಕಸಕೊಂಡಿರುವದು ನನ್ನ ದೃಷ್ಟಿಗೆ ಬಿದ್ದದೆ. ವೃಧಾ ಸುಳ್ಳು ಹೇಳಿ ದಣಿಯ ಬೇಡ ತೋರಿಸಿಕೊಡು” ಎಂದು ಕೇಳಿದನು. “ಎಂಧಾ ಮಾತು! ಮಷ್ಠಿರಿ ಮಾಡುತ್ತೀರೇನು. ಸಾಹೇಬರೇ?” ಎಂಬ ಹಾಸ್ಯಕರವಾದ ಉತ್ತರವನ್ನು ಅವನು ಕೊಟ್ಟನು.

ಯಾಕುಬಖಾನನಿಗೆ ಕೋಪ ಬಂತು. ತಾಮಸವಿಲ್ಲದೆ ಅವನು ಭಟ್ಟನ ಎರಡು ದವದೆಗೆ ಅವಷ್ಟೆ ತಪರಾಖು ಕೊಟ್ಟ ಒಡನೆ ಅವನ ಕಣ್ಣಗಳ ಮುಂದೆ ತಾರಾಮಂಡಲ ಕುಣಿಯುವಂತೆ ತೋಚಿಶು’ ಹಾಗೆಯೇ ಪೃಷ್ಟದ ಮೇಲೆ ಎರಡು ಲತ್ತೆಗಳನ್ನು ಚಡಾಯಿಸುತ್ತಲೇ ಬ್ರಾಹ್ಮಣನ ಸೊಂಟದ ಕೀಲು ತಪ್ಪಿತು. “ದಮ್ಮಯ್ಯಾ! ಮಹಾರಾಯ! ತೋರಿಸಿಕೊಡುತ್ತೇನೆ, ಒಮ್ಮೆ ಪ್ರಾಣಮಾತ್ರ ಉಳಸೆ”ಂದು ಅಡ್ಡಬಿದ್ದ ದಾಮೋದರನನ್ನು ಯಾಕೂಬ ಖಾನನು ಶ್ವಾನದಂತೆ ದರದರನೆ ಎಳದು, ಬೇಗ ತೋರಿಸಿಕೊಡದಿದ್ದರೆ ಕೈ ಉಗುರುಗಳ ಸಂದಿನಲ್ಲಿ ಸೂಜಿಗಳನ್ನು ನಡಿಸುವೆನೆಂದನು. ಯಾಕುಬಖಾನನ ಅನುಮತಿಪಡಕೊಂಡು. ಅಲ್ಲಿ ಸಮಾಪವಿರುವ ಕೆರೆಗೆ ಇಳಿದು, ಎರಡು ಗುಟಕು ನೀರು ಕುಡದು ಕೊಂಚ ತಂಗಾಳಿಯನ್ನು ಉಶ್ವಾಸಿಸಿ ಧಾತು ಮಾಡಿಕೊಂಡ ಬಳಿಕ ಅವಸರದಲ್ಲಿರುವ ಯಾಕುಬಖಾನನನ್ನು ನೇವಳ ಬಚ್ಚಿಟ್ಟಲ್ಲಿಗೆ ಕರತಂದು, ಆ ನಗವನ್ನು ಅವನ ಕೈಯಲ್ಲಿಕೊಟ್ಟು –ಹ್ಯಾಗಾ ದರೂ ರಕ್ಷಿಸು, ನೀನು ಹೇಳಿದಂತೆ ಕೇಳುವೆನೆಂದು ದಾಮನೋದರಭಟ್ಟನು ಅವನ ಕಾಲಿಗೆ ಬಿದ್ದನು. “ಇದು ಕೊತ್ವಾಲನ ದೃಷ್ಟಿಗೆ ಬಿದ್ದರೆ ನಿನ್ನನ್ನು ಈಗಲೇ ಸೆರೆಮನೆಗೆ ದಬ್ಬದೆ ಇರಲಾರನು! ಏನು ಮಾಡಲಿ ಹೇಳು” ಎಂದು ಯಾಕೂಬಖಾನನು ಕೇಳಿದನು. ದಾಮೋದರಗೆ ಏನೊಂದು ಯುಕ್ತಿಯೂ ಸೂಚಿಸದೆ ಹೋಯಿತು. ಯಾಕುಬಖಾನನು ಅಭಯಕೊಟ್ಟು, ಸಂತೋಷ ದಿಂದ ಮನೆಗೆ ನಡೆದನು. ಮರುದಿವನ ಕೊತ್ವಾಲನು ಕೇಳಿದಾಗ ನೇವಳ ಕಸಕೊಂಡದ್ದೆಂಬ ಮಾತೇ ಸುಳ್ಳು; ಹಾಗೆ ನಡೆದಿರುತ್ತಿದ್ದರೆ ಆ ಠಾವಿನಲ್ಲಿದ್ದ ತನಗೆ ಆಗಲೇ ತಿಳಿಯದೆ ಹೋಗುತ್ತಿದ್ದಿಲ್ಲವೆಂದು ಕೊತ್ತಾಲನನ್ನು ಸಮಾ ಧಾನಪಡಿಸಿದನು. ಇಕ್ಕಡೆಯಿಂದಲೂ ಕೊತ್ವಾಲನ ಮುಂದೆ ತರಲ್ಪಟ್ಟ ಫಿರ್ಯಾದುಗಳನ್ನು ಭೀಮಾಜಿಯು ತನಿಖೆಮಾಡಿ ನೋಡಿ. ಕಾರ್ಭಾರಿಗೆ ತನ್ನ ಅಭಿಪ್ರಾಯವನ್ನು ಒಂದು ಬಿನ್ನವತ್ತಳೆಯ ಮೂಲಕವಾಗಿ ನಿವೇದಿಸಿ ದನು. ಅದರ ಮುಖ್ಯ ತಾತ್ಪರ್ಯವು ಮುಂದಿನ ಅಧ್ಯಾಯದಿಂದ ತೋರುವದು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕ್ತಿ
Next post ಆತ್ಮ ದೇವಾಲಯ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…