ಭೂಮಿಯ ತಾಪದಿಂದ ತಟ್ಟಿಲಿರುವ ಅನಾಹುತಗಳು

‘ಭೂಮಿ’ ಬಿಸಿಯಾಗುತ್ತಲಿದೆ, ಭೂಮಿಯ ತಾಪಾಮಾನ ಹೆಚ್ಚುತ್ತಲಿದೆ. ಇದಕ್ಕೆ ಕಾರಣಗಳೆಂದರೆ ಬಿಸಿಮಾರುತಗಳು, ಚಂಡಮಾರುತಗಳು, ಬರಗಾಲ, ಭೀಕರ ಪ್ರವಾಹ, ಭೂಕಂಪ, ಕೈಗಾರಿಕೆಗಳು, ಇನ್ನು ಮುಂತಾದ ಕಾರಣಗಳನ್ನು ಹೇಳಬಹುದು. ನಾವಿಂದು ಕಾಣುತ್ತಿರುವ ತಾಪಮಾನಕ್ಕೆ ಅನಿಲಗಳು, ಇಂಗಾಲದ ಡೈ‌ಆಕ್ಸೈಡ್, ಮಿಥೇನ್, ಕ್ಲೋರೋಫ್ಲೋರೊ, ಕಾರ್ಬನ್ಗಳು ನೈಟ್ರಾಸ್ ಆಕ್ಸೈಡ್ ಇವೇ ಮೊದಲಾದವುಗಳ ಹೆಚ್ಚಳವು ಕೂಡ ಭೂಮಿ ಕಾಯ್ದು ಕೆಂಡವಾಗುವಂತೆ ಮಾಡುತ್ತವೆ. ಈ ಅನಿಲಗಳ ಪ್ರಮಾಣ ವಾತಾವರಣದಲ್ಲಿ ೮೦ ರ ದಶಕಕ್ಕಿಂತಲೂ ಹೆಚ್ಚಾದುದು ದೃಢಪಟ್ಟಿದೆ. ಪ್ರತಿವರ್ಷ ಏಳುಶತಕೋಟಿ ಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್‌ನ್ನು ವಾತಾವರಣಕ್ಕೆ ಸೇರಿಸುತ್ತೇವೆ. ಈ ಅನಿಲಗಳ ಏರಿಕೆಯಿಂದ ಜಗತ್ತಿನ ಸರಾಸರಿ ಉಷ್ಣತೆ ಸು. ೩.೫ ಸೆಲ್ಷಿಯಸ್‌ನಷ್ಟು ಹೆಚ್ಚಾಗುತ್ತದೆ. ಇದು ತುಂಬ ಕಡಿಮೆ ಎನಿಸಿದರೂ ಇದರ ಪರಿಣಾಮ ಭಯಂಕರವಾಗಿದೆ.

ಈ ಉಷ್ಣತೆ ಹಿಮಪರ್ವತಗಳನ್ನೆಲ್ಲ ಕರಗಿಸಬಹುದು. ಸಮುದ್ರದ ನೀರು ಕಾದ ತನ್ನ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ತಗ್ಗುಪ್ರದೇಶಗಳಲ್ಲಿ ನೀರು ತುಂಬ ಹಾನಿಮಾಡಬಹುದು. ತಾಪಮಾನದ ವ್ಯತ್ಯಾಸದಿಂದ ಸಸ್ಯ ಹಾಗೂ ಪ್ರಾಣಿಗಳು ನಶಿಸಿ ಅಪಾಯದ ಅಂಚಿನಲ್ಲಿ ಬೀಳಬಹುದು, ಸಸ್ಯಗಳಿಗೆ ಭಾರಿ ಪೆಟ್ಟು, ಮಲೇರಿಯಾ ಹರಡುವ ಸೊಳ್ಳೆಗಳು ಅತಿಯಾಗುವು ದಲ್ಲದೇ ನೀರು ನುಗ್ಗಿ ಫಲವತ್ತಾದ ಕೃಷಿ ಭೂಮಿಗಳು ನಿಸ್ಪ್ರಯೋಜಕವಾಗಬಹುದು, ಹೀಗಾಗಿ ಕೃಷಿ ಉತ್ಪಾದನೆ ಕುಗ್ಗಿ ಆಹಾರದ ಅಭಾವ ತಲೆದೋರಬಹುದು ಎಂದು ಈಗಾಗಲೇ ಪತ್ರಿಕೆಗಳು ವರದಿಮಾಡಿವೆ. ವಿಜ್ಞಾನಿಗಳ ಪ್ರಕಾರ ವಾತಾವರಣಕ್ಕೆ ಹೊರದೂಡುವ ಇಂಗಾಲ ಡೈ ಆಕ್ಸ್ಟೈಡ್ ಪ್ರಮಾಣವನ್ನು ನಾವು ಇನ್ನು ಏಳಂಟು ವರ್ಷಗಳಲ್ಲಿ ಶೇ. ೫ ರಷ್ಟು ಕಡಿಮೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವಿನಾಶಕಾರಿ ಸಮಯ ಬರಬಹುದೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಅಮೇರಿಕಾ ಹಾಗೂ ಮುಂದುವರಿದ ರಾಷ್ಟ್ರಗಳು ಕೈಗಾರಿಕೆ ಮತ್ತು ವಾಹನಗಳಿಂದ ಅನವಶ್ಯಕ ಹಾಗೂ ಪರಿಸರ ಹಾನಿಕಾರಕ ಇಂಧನವನ್ನು ಯತೇಚ್ಚವಾಗಿ ಹೊರದೂಡುತ್ತಿರುವುದು ಸರ್ವೆಯಿಂದ ತಿಳಿದು ಬಂದಿದೆ. ಭಾರತದ ಪ್ರಮುಖ ನಗರಗಳಾದ ಬಾಂಬೆ, ದೆಹಲಿ, ಕಲ್ಕಾತ್ತ, ಬೆಂಗಳೂರು, ಹೈದರಾಬಾದ್ ನಗರಗಳು ಸಹ ಇಂಥಹ ಪರಿಸರ ಹಾನಿಕಾರಕ ತಾಪಮಾನದ ಅನಿಲಗಳನ್ನು ಚೆಲ್ಲುತ್ತವೆ. ಭಾರತದ ಇಂಗಾಲ ಡೈ ಆಕ್ಸ್ಟೈಡ್‌ದ ಪ್ರಮಾಣ ತಲಾ ೬ ಟನ್‌ಗಳಷ್ಟಿದ್ದರೆ ಅಮೇರಿಕಾದ ವಾತಾವರಣದಲ್ಲಿ ಇಂಗಾಲದ ಡೈ ಆಕ್‌ಸೈಡ್ ಪ್ರಮಾಣ ತಲಾ ಪ್ರಮಾಣ ೨೬೦ ಟನ್‌ಗಳೆಂದರೆ ಆಶ್ಚರ್ಯವಾಗುತ್ತದೆ. ಈ ಜಾಗತಿಕ ದೇಶಗಳು ಮುಂದಿನ ದಿನಗಳಲ್ಲಿ ಈ ತಾಪಮಾನವನ್ನು ತಡೆಯದಿದ್ದರೆ ಜೀವನ ಅಸ್ತವ್ಯಸ್ತವಾಗಿ ವಾಯುಮಾಲಿನ್ಯ ಗರಿಷ್ಟ ಮಟ್ಟ ಮುಟ್ಟುತ್ತದೆ. ರಷಿಯಾ ಮತ್ತು ಪೂರ್‍ವ ಯುರೋಪಿನ ರಾಷ್ಟ್ರಗಳು ಕೆಲಮಟ್ಟಿಗೆ ಆರ್ಥಿಕ ಹಿನ್ನಡೆಯಿಂದಾಗಿ ಕೈಗಾರಿಕೆಗಳು ಸ್ವಾಭಾವಿಕವಾಗಿ ಕಡಿಮೆಯಾಗಿ ಇಂಧನವನ್ನು ಹೊರದೂಡುವುದು ಅಷ್ಟಾಗಿ ಆಗುತ್ತಿಲ್ಲ ಅದರೆ ಪ್ರಗತಿ ಹೊಂದಿದ ಬಲಿಷ್ಟ ರಾಷ್ಟ್ರವಾದ ಅಮೇರಿಕ ಮಾಲಿನ್ಯವನ್ನು ಹೆಚ್ಚಿಸುತ್ತದೆ ಎಂಬ ಕೂಗು ವಿಜ್ಞಾನಿಗಳಿಗೆ ಆತಂಕವನ್ನುಂಟು ಮಾಡಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಗೀ ಗೌರೀ ಹಾಡು – ೧
Next post ಎಷ್ಟೊಂದು ಚಳಿ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…