“ನಾನು ಒಂದು ಬಿಂದುವಾಗಿ ಬಾಳಿ ಸಾಕಾಗಿದೆ” ಎಂದಿತು ಬೇಸತ್ತ ನೀರಿನ ಬಿಂದು. “ನನಗೆ ಪುಟ್ಟ ಬೀಜವಾಗಿ ಬದುಕಲು ದುಸ್ತರವಾಗಿದೆ” ಎಂದಿತು ಬೀಜ. “ನಿನ್ನದು ಅಂತಹುದೇನು ಮಹದಾಕಾಂಕ್ಷೆ? ಎಂದು ಕೇಳಿತು ಬೀಜ. “ನಾನು ಬಿಂದುವಿನಿಂದ ಸಿಂಧುವಾಗಬೇಕು” ಎಂದಿತು. ಮತ್ತೇ ನಿನ್ನದೇನು ಮಹದಾಕಾಂಕ್ಷೆ?” ಎಂದು ಕೇಳಿತು ಬಿಂದು. “ನಾನು ಬೀಜದ ಕೋಟೆ ಒಡೆದು ಒಂದು ಹೆಮ್ಮರವಾಗ ಬೇಕು” ಎಂದಿತು. “ನಾನು ಸಿಂಧುವಿನಲ್ಲಿ ಧುಮುಕಿ ಒಂದಾಗುವೆ” ಎಂದಿತು ಬಿಂದು. “ನಾನು ಭೂಮಿಯನ್ನು ಅಪ್ಪುವೆ” ಎಂದಿತು ಬೀಜ. ಎರಡೂ ಶರಣಾಗತಿಯಲ್ಲಿ ತಮ್ಮಗುರಿಯನ್ನು ಮುಟ್ಟಿ ಸಂತಸಗೊಂಡವು.
*****