ಮರಗಳು ಹೇಳಿದವು-ನಾವು ಭೂಮಿ ತಾಯಿಯ ಮಹಾ ಕಾವ್ಯವನ್ನು ಆಕಾಶದ ಎತ್ತರಕ್ಕೆ ಬರೆಯುತ್ತೇವೆ. ಬೇರಿನ ಕೈಗಳಿಂದ ಭೂಮಿಯನ್ನು ಬಿಗಿದಪ್ಪುತ್ತೇವೆ. ಅರಳಿದ ಹೂಗಳನ್ನು ಉದರಿಸಿ ಪೂಜಿಸುತ್ತೇವೆ. ಮಾನವರಾದ ನೀವು ಮರಗಳನ್ನು ಕಡೆದು ಭೂಮಿ ತಾಯಿಯ ಹೃದಯವನ್ನು ಶೂನ್ಯ ಮಾಡುತ್ತೀರಿ, ಭೂಮಿ ತಾಯಿಗೆ ಪ್ರೀತಿಯ ಸಂತಾನ ಯಾರು? ಮರಗಳೇ? ಮಾನವರೆ? ನಿಮ್ಮ ಹೃದಯ ಉತ್ತರ ಕೊಡಬಲ್ಲದಾ?
*****