ಅವನು ಐವತ್ತು ಲಕ್ಷದ ಬಂಗಲೆಯ ಒಡೆಯನಾಗಿದ್ದ. ಅವನಲ್ಲಿ ಷೇರು, ಕಾರು ಎಲ್ಲಾ ಇದ್ದಿತು. ಮಡದಿ ಸತ್ತಮೇಲೆ ಮರುಮದುವೆ ಮಾಡಿಕೊಳ್ಳಲು ಇಷ್ಟ ಪಟ್ಟು ತನಗೆ ೫೮ ವರ್ಷವೆಂದು ಸುಳ್ಳು ಹೇಳಿ ಮದುವೆಯಾದ. ನಂತರ ಅವಳಿಗೆ ತಿಳಿದ ಸತ್ಯ ಅವನು ರೋಗಗ್ರಸ್ಥ ಮುದುಕನೆಂದು, ಕೆಲವೇ ತಿಂಗಳಲ್ಲಿ ಅವಳಿಗೆ ಮಾಂಗಲ್ಯ ಭಾಗ್ಯ ಹೋಗಿ ಬಂಗಲೆಯ ಭಾಗ್ಯ ಮಾತ್ರ ಉಳಿಯಿತು. ಬಂಗಲೆಯಲ್ಲಿ ನೆಮ್ಮದಿ ಸಿಕ್ಕೀತೇ ಎಂದು ಹುಡುಕುತ್ತಲೇಯಿದ್ದಳು.
*****















