(ಪುಷ್ಯ ಶುದ್ಧ ಅಷ್ಟಮೀ ರಾತ್ರಿ ೧೩-೧-೪೪) ಹರಿವ ಮುಗಿಲ ನೌಕೆಯೇರಿ ಬರುವ ಚಂದ್ರ ಗಗನ ಸಾರಿ ಅರ್ಧ ಮುಳುಗಿ ಅರ್ಧ ಬೆಳಗಿ ನಗುವ ರಜನಿಗೂಡೆಯನಾಗಿ ಕಳೆಯ ಕೊಟ್ಟು ಬೆಳಕನುಟ್ಟು ಉಡುಗಣಂಗಳೊಂದಿಗಿಟ್ಟು ಜಗವನಪ್ಪಿ ನಭವನೊಪ್ಪಿ ಜೀವಕೊಂದು...
ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ ಓ ಜಗತ್ಸಂಹಿನೀಂ - ಭಾರತತಪಸ್ವಿನೀ ಮಲ್ಲಿಕಾಸ್ಮಿತವದನಿ - ಸುತ್ಯಾಗದರ್ಶಿನೀ ಲೋಕದಾಸೆಯ ಬಿಟ್ಟು - ಪ್ರೇಮಸೂರೆಯ ಕೊಟ್ಟು ಸರ್ವಾತ್ಮ ಲೀಲೆಯೊಳು - ಧರ್ಮ ಕವಚವ ತೊಟ್ಟು ಸತ್ಯದರ್ಶನಮಾದ ತಾಯೇ ಸೆರೆ...
ಚಲುವ ಕನ್ನಡ ನಾಡ ಮಣ್ಣೊಳಾದೀ ದೇಹ ಬೆಳೆದು ಕನ್ನಡ ತಾಯ ತೊಡೆಯಮೇಲೆ ಇಂಬಾಗಿ ಮಲಗಿರಲು ಹಾಡಿ ಕನ್ನಡಗಬ್ಬ ಹೃದಯದಲಿ ತುಂಬಿದಳು ರಸದ ಹಬ್ಬ. ಕನ್ನಡಿಗನಾನೆಂಬ ವಜ್ರಕವಚವ ತೊಡಿಸಿ ರಾಗರಸಭಾವಗಳ ಮನದೊಳಿಡಿಸಿ ಕನ್ನಡದ ಹಿರಿಮೆಗಳ ಹಾಡೆಂದು...