ಜವಾಹರಲಾಲ ನೆಹರೂ

ಮೋತಿಲಾಲ್ ಕೈಮುತ್ತು ಭಾರತಿಯ ಪದಕಿತ್ತು
ಸ್ವಾತಂತ್ರ್ಯದೊಡವೆಯಂ ಮಾಡಿ ತೇಜಮನಿತ್ತು
ಪೋದನಾ ಸಾಹಸಿಗ ಸಗ್ಗಮಂ ಸಾರಿದನ್
ಸಾಧಿಸಿದ ರಾಜ್ಯಮನ್ ಕೆರ್ಚಾಳು ಕೊನೆಗರ್ದ
ಸತ್ಯಾಸಿಧಾರೆಯಿಂ ಧರ್ಮಕವಚವನುಟ್ಟು
ಭಾರತಿಯ ಬಿಡುಗಡೆಗೆ ವೀರಪಣಮಂ ತೊಟ್ಟು
ಧಾವಿಸಿದ ವೀರನದೊ ಸಿಂಹನಾದಂ ಗೆಯ್ದು
ಪಾವನದಹಿಂಸೆಯಿಂ ಜಯಸಿರ್ದ ಭುಜಹೊಯ್ದು.

ಭಾರತಿಯ ವಿಜಯದಲಿ ಮೆರೆಯಿಸುತ ಸಿಂಗರಿಸಿ
ಯೋಧನುಂ ತಾನಾಗಿ ಲೋಕಮನ್ನೇ ನಗಿಸಿ
ಇದಿರಿಸುವ ಶತ್ರುಗಳನೊಲುಮೆಯಿಂದಲೆ ಗೆಲಿದು
ಒದವಿರುವ ಕಷ್ಟಗಳ ಬಗೆಹಾಯ್ದು ಮುಂದರಿದು
ನಲವತ್ತು ಕೋಟಿ ಜನನಾಯಕಂ ತಾನೊದವಿ
ತೊಳಗುತಿಹನಾ ಜವಾಹರಲಾಲನಹರುರವಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗತ್ವ ಅಸಮಾನತೆ ಮತ್ತು ಭಾರತೀಯ ಸಮಾಜ
Next post ಸತ್ಯ ಸಾಕ್ಷಾತ್ಕಾರ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…