ಲಕ್ಷ್ಮಣನ ನಗು

ರತ್ನಸಿಂಹಾಸನದಿ ಮಣಿ ಕಿರೀಟವನಿಟ್ಟು ತುಂಬಿದೊಡ್ಡೋಲಗದಿ ರಘುವೀರ ಶೋಭಿಸಲು ಪಕ್ಕದಲಿ ಶ್ರೀಸೀತೆ ಮಂಡಿಸಿರೆ ನಸುನಗುತ ಸರುವರುಂ ಕಣ್ತುಂಬ ನೋಡುತ್ತ ಸೇವಿಪರು. ಭರತ ಶತ್ರುಘ್ನರುಂ ಚಾಮರವನಿಕ್ಕುತಿರೆ ಸುಗ್ರೀವ ಮಾರುತಿ ವಿಭೀಷಣರ್ ಮೊದಲಾಗಿ ರಘುಪತಿಯನೋಲಗಿಸುತ್ತಿರುವಾಗ ಲಕ್ಷ್ಮಣಂ ಘೋಳ್ಳೆಂದು ನಕ್ಕನದ...

ಮಣ್ಣಿನ ಒಲವು

ಮಣ್ಣು ಹೊನ್ನಿನ ಗೂಡು ಮಣ್ಣು ಜೀವದ ಸೂಡು ಮಣ್ಣು ಹೆಣ್ಣಿನ ಬೀಡು ಮಣ್ಣು ಗಂಡಿನ ನಾಡು. ಮಣ್ಣು ಪಾವನಮೆದು ತುಳಸಿ ಮೈತ್ರಿಕೆಯಾಯ್ತು ಬಣ್ಣ ಬಣ್ಣದ ಮಣ್ಣು ಮೈಗೆ ಪೂಸುವ ಗಂಧ. ಉಪ್ಪು ಸಿಹಿಕಾರಗಳ ಷಡ್ರಸಾಹಾರಗಳ...

ಕೃಷ್ಣಗಿರಿ ಕೃಷ್ಣರಾಯರಿಗೆ

ಕುಮಾರವ್ಯಾಸನ ವಾಣಿಯ ನುಡಿಯುವ ವೀಣೆಯು- ಗಮಕದ ಶಾಸ್ತ್ರಜ್ಞಾನ ಆ ಕವಿಕಾವ್ಯದ ದಿವ್ಯ ಧ್ವನಿಯಿಾ ಕೃಷ್ಣನ ಹೃದಯದ ಗಾನದ ತಾನ- ಕುವರವ್ಯಾಸನ ದೇಗುಲ ಕೃಷ್ಣನ ಹಾಡುವ ಸೊಬಗಿನ ಹೃದಯ ನವೀನ ಆ ಕವಿಯಗ್ಗಳಿಕೆಗಳಂ ಸಾಧಿಸಿ ಶೋಧಿಸುತುಣಿಸುವ...

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು

ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು ಇರುಳಿನಲಿ ಭಯವೆರಸಿ ದಾರಿ ಮರೆದಿಹುದು ಹೊರಗೆ ಚಳಿ ಮಳೆ ಗಾಳಿ ಜಗವ ಭಯಗೊಳಿಸುವುದು ಸೊರಗಿ ಮೌನದಿ ನಡುಗಿ ಭೀತಿಗೊಳುತಿಹುದು. ಒಳ ದನಿಯು ಅಡಗಿಹುದು ಎದೆಯೊಳಗೆ ಉಸಿರಿಲ್ಲ ಕಳೆದೊಗೆದ...

ತಾಯಿಯ ಒಲವು

ಜಗದ ತೇಜಮಿದೆಂದು ಇದ ಸಲಹಬೇಕೆಂದು ಜನನಿಯಾದಳು ತಾಯಿ ನೋವು ಹಲವನು ತಿಂದು ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ. ಗೇಣುದ್ದ ದೇಹದಿಂ ಬಂದ ಶಿಶುವಂ ಹಾಡಿ ಬೇನೆಗಳ ಲೆಕ್ಕಿಸದೆ...

ಪರಮಹಂಸರಿಗೆ

ತನ್ನ ತನ್ನೊಳಗರಿದು ತೋರಿಸಿ ತನ್ನನೆಲ್ಲರೊಳರಿದು ಸರ್ವರ ನನ್ನಿಯಂ ಕಂಡಿಹನು ದೈವವ ಹಿರಿಮೆಯೆಂತೆಂದು. ಅನ್ಯರಾವುಟಮಿಲ್ಲ ದೇವರು ತನ್ನ ಹೊರತಿನ್ನಿಲ್ಲ-ಎಲ್ಲರ ನನ್ಯಭಾವವ ತಳೆಯೆ ಹೊಳೆವುದು ಸಕಲಮೇಕತ್ವಂ- ಸರ್ವಸಂಗ ತ್ಯಾಗ, ತನ್ನಿಂ ದುರ್ವರೆಯ ಹಿತಮೆಂಬ ಪೆರ್ಮೆಯ ಗರ್ವ ಬಾರದು...

ಗೀತಾಚಾರ್‍ಯ

ಅರ್‍ಜುನನ ಹೃದಯದಲಿ ಪ್ರತಿಬಿಂಬಿಸಿದ ದೇವ ಪರ್ಜನ್ಯನೊಲು ಆತ್ಮ ಸುಜ್ಞಾನಗಳ ತಿಳಿವ ನಿರ್ಜೀವರಾದೆಮಗೆ ಧಾರೆಯೆರೆದೀ ಜಳವ ವರ್ಜಿಸಿದೆ ಬೋಧಿಸುತ ನಿನ್ನ ವಚನಾಮೃತವ. ಸೌಜನ್ಯ ಬೆಳೆ ಬಿತ್ತಿ ಬೆಳೆದೇರಿ ಪೂಫಲವ ನಾರ್ಜಿಸಿದೆವಾವಿಂದು ನಿನ್ನ ಕೃಪೆಯಿಂದೋಲವ ಪೂಜ್ಯಮಾದುದು ಸವಿದು...

ದರ್‍ಶನ

ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ ಜಾನಕಿಯು ರಘುವರನ ಸಂಜ್ಞೆಯರಿತು. ಹನುಮಂತನಿಂದಾಯ್ತು ರಾಮದರ್ಶನಮೆಂದು ನವರತ್ನಹಾರಮಂ ಕೊರಳಿಗಿತ್ತು ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ ರಾಮರತ್ನವ ಧರಿಸಿ ನುಡಿಯ ಮರೆತು. ಒಂದೊಂದೆ ರತ್ನಮಂ ಪರಿಕಿಸುತ ಕಡಿಯುತ್ತ ಪುಡಿಗೈಯುತುಗುಳಿದಂ ರುಚಿಯನರಿತು. ಆ...

ನೇಗಿಲು

ನೆಲದ ರಸವನ ಹಿಂಡಿ ನೇಗಿಲಿನ ಮೊನೆಯಿಂದ ಅನ್ನಮಂ ಪಡಯುವರು ಮಣ್ಣಿನಿಂದ- ಜೋಡೆತ್ತುಗಳ ಕಟ್ಟಿ ಜೀವದೆಳೆಗಳ ತಂದು ಲೋಕಮಂ ಸಲಹುವುದು ಮೋದದಿಂದ- ಕೆರೆದೆಳೆದು ಸಾರಮಂ ಸಾಲಿನಲಿ ನಿಲಿಸುವುದು ಹಸನೆಸಗಿ ಸವಿಯೂಡಿ ಸುಲಭದಿಂದ- ತೆರೆದು ಬೇರಿಗೆ ದಾರಿ...

ಏಕನಾದ

ಕೇಳುತ್ತಿರುವುದೊಂದು ದನಿಯು ಏಕನಾದದಿಂದ ನುಡಿಯು ನೇತಿ ನೇತಿ ಎಂಬ ನಿಗಮ ನೀತಿ ಕೇಳುತಿರುವದಮ್ಮ ಮಿಡಿವುದೇಕೊ ಏಕನಾದ ನುಡಿವುದೇನೊ ಹಲವು ವಾದ. ಒಂದು ತಂತಿಯಿಂದ ಹಲವು ನಾದವೊಡೆದು ರಾಗರಸವು ಹಳೆಯದನ್ನು ಹೊಸದು ಮಾಡಿ ಹೂಸದ ಹಳಯದಾಗಿ...