ಬೇಕಿಲ್ಲವೆಮ್ಮಾರೈಕೆ ಪೂರೈಕೆಯೆಮ್ಮನ್ನದಾ ಮರಕೆ ಬೇರೆಲ್ಲದಕು ಮೂಲ ಬಲವದುವೆ ಸಾಕದಕೆ ಬೇಕೆಲ್ಲ ಮರಕದರ ತರಗೆಲೆಯ ಹೊದಿಕೆ ಭಾರಿ ಕೃಷಿ ಎನಲು ಬೊಕ್ಕತಲೆ ಬಂದೀತು ಜೋಕೆ ಬಾಳ ಕೃಷಿಗೊಂದು ಪೇಟೆ ಶಾಲೆಯದ್ಯಾಕೆ? – ವಿಜ್ಞಾನೇಶ್ವರಾ *****...
ಡಾ|| ಸೂರಿ ಶೀಲಾಳಿಗೆ ಫೋನ್ ಮಾಡಿದರು – “ಶೀಲಾ ರವರೇ ನೀವು ಕೊಟ್ಟ ಚೆಕ್ ವಾಪಾಸ್ ಬಂದಿದೆ.” ಅದಕ್ಕೆ ಶೀಲಾ ಹೇಳಿದ್ಲು – “ನೀವು ವಾಸಿ ಮಾಡಿದ ಜ್ವರ ಸಹ ವಾಪಾಉ ಬಂದಿದೆ” *****...
ಮಾನವನ ಮೂರನೇ ಹಂತವೇ ಮುಪ್ಪು ಮುಪ್ಪು ಬಂದಾಗ ಬೆಪ್ಪು ಎನ್ನುವವರೇ ಹೆಚ್ಚು ಬಾಲ್ಯ ಕಳೆದು ಯೌವ್ವನ ಮಾಗಿದಂತೆ ಮುಪ್ಪು ಮೆಲ್ಲಗೆ ಅಡಿಯಿಡುವುದಂತೆ ಮುಪ್ಪಿನ ಕಲ್ಪನೆಯೇ ಭೀಕರ ಊರಿಗೆ ದೂರ ಸಾವಿಗೆ ಹತ್ತಿರ ರಾಜ ಮಹಾರಾಜ ಜಗದೇಕಸುಂದರಿ ಪಕ್ಷಪಾತವಿಲ್ಲ...
ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ ಬಾರದಯ್ಯಾ ಕೂಡಲಸಂಗಮದೇವಾ [ಕರಿ-ಆನೆ, ಘನ-ದೊಡ್ಡದು, ತಮಂಧ-ಕತ್ತಲು] ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನ...
-ಹಸ್ತಿನಾಪುರದರಮನೆಯಲ್ಲಿ ಪಾಂಡುಪುತ್ರರಿಗೂ ಧೃತರಾಷ್ಟ್ರಸುತರಿಗೂ ಹೊಂದಿಕೆಯಾಗದೆ ಅವರಲ್ಲಿ ದ್ವೇಷದ ಭಾವನೆ ಬೆಳೆದು, ಬಲಿಯುತ್ತಲೇ ಇತ್ತು. ಇದಕ್ಕೆ ಇಂಬು ನೀಡುವಂತೆ ಶಕುನಿಯು ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯುತ್ತಿದ್ದ. ಹಾಗಾಗಿ...
ದಂಡೆಗೆ ಅಪ್ಪಳಿಸುವ ಅಲೆಗಳಲಿ ನಿನ್ನ ನೆರಳು ಹರಡಿ ಗಾಳಿಯಲಿ, ರಹಸ್ಯದ ಅಮಲೇರಿಸುವ ಘಮ. ಬದುಕಿನ ಕನಸುಗಳೆಲ್ಲಾ ಖಾಸಗೀ ಮೂಲೆಯಲ್ಲಿ ಅರಳಿ, ತುಯ್ಯುತ್ತಿರುವ ಹಡಗುಗಳ ಪುಟಗಳು. ನನ್ನ ಕೋಣೆಯಲಿ ಸುಮ್ಮನೇ ಒಬ್ಬಳೆ ಕುಳಿತು ನಿನ್ನ ಬಗ್ಗೆ ಧ್ಯಾನಿಸುವುದ...
ಪುಟಿದೇಳುವರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಸದ್ ವಿಚಾರ ತಾಣದಗಲ ಮಾನಾಭಿಮಾನ ಮೆರೆದ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಕಲೆಯದನುರಾಗಲತೆಯಲಿ ಅರಳಿ ...
ಬಾಳಿನ ದೇಗುಲದಲ್ಲಿ ದೇವರಿಲ್ಲವೇ ಹಾಗಿದ್ದರೆ ಆ ಮಂಟಪವೇಕೆ! ಬದುಕಿನ ದಾರಿಯಲಿ ಗುರಿಯಿಲ್ಲವೆ ಹಾಗಿದ್ದರೆ ಆ ಜೀವನ ವೇಕೆ ಆಸ್ತಿ ಅಂತಸ್ತುಗಳಿಗೆ ನೀನೆ ಹಕ್ಕುದಾರನೆ! ಇದು ನಿನ್ನಗೊಂದು ಭ್ರಮೆ ಹೌದು ಹೀಗೆಯೇ ಯುಗಯುಗದಲ್ಲೂ ಸ್ವಾರ್ಥ ನಿನ್ನ ದೇಹವೇ ...
ವಿಶ್ವನಾಥನಿಗೂ ರಮಾಬಾಯಿಗೂ ಬಹು ಯೋಚನಿಗಿಟ್ಟಿತು. ಸುಭದ್ರೆ ಗಾದರೂ ವಯಸ್ಸು ಮೀರುತ್ತಾಬಂದಿತು. ಇದುವರೆಗೆ ವಿವಾಹವು ಸಾವಕಾಶವಾದುದೇ ಊರಿನವರಿಗೆಲ್ಲರೂ ನಾನಾ ವಿಧವಾಗಿ ಆಡಿಕೊಳ್ಳಲು ಮಾರ್ಗವನ್ನುಂಟುಮಾಡಿದ್ದಿತು. ಇನ್ನೂ ಸಾವಕಾಶಮಾಡಿದ ಪಕ ದಲ್ಲಿ ...
೧ ಮೌನ ಮೌನಾ, ಮೌನಾ, ಮೌನಾ ಮೌನ-ವಿಮಾನಾರೂಢಾ ಅಮೃತಾತ್ಮಾ, ತರ! ಉತ್ತರ! ಭೋ ಉಧ್ವ್ರೋಧ್ವ್ರೋ, ಭೋ ಈ ಮಾಯಾಮಂಡಲ ಮುರಿಯೋ, ದಾಟೈ ಆ ತಿರ್ರನ ಚಕ್ರ ಏರೈ, ಏಕಾ, ಏಕೈಕಾ ಮರಣೋತ್ತೀರ್ಣಾ ಫೂಃ! ಪಿಸುಪಿಸು ಮಾತೋ ಮಾತು, ಇರುಳಿರುಳಿನ ಭುಂಭೋದ್ಗಾರಾ ಕರೆ,...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







