ಮಾನವನ ಮೂರನೇ ಹಂತವೇ ಮುಪ್ಪು
ಮುಪ್ಪು ಬಂದಾಗ ಬೆಪ್ಪು ಎನ್ನುವವರೇ ಹೆಚ್ಚು
ಬಾಲ್ಯ ಕಳೆದು ಯೌವ್ವನ ಮಾಗಿದಂತೆ
ಮುಪ್ಪು ಮೆಲ್ಲಗೆ ಅಡಿಯಿಡುವುದಂತೆ
ಮುಪ್ಪಿನ ಕಲ್ಪನೆಯೇ ಭೀಕರ
ಊರಿಗೆ ದೂರ ಸಾವಿಗೆ ಹತ್ತಿರ
ರಾಜ ಮಹಾರಾಜ ಜಗದೇಕಸುಂದರಿ
ಪಕ್ಷಪಾತವಿಲ್ಲದೆ ತಬ್ಬುವ ಮುಪ್ಪು
ಬಾಲ್ಯದ ಮುಗ್ಧರೂಪ, ಯೌವ್ವನದ ಮೈಮಾಟ
ಕಾಲನಾಟದಲ್ಲಿ ಬಣ್ಣ ಬಯಲು
ಬಿಸಿಲಿಗೆ ಮಂಜು ಕರಗಿದಂತೆ
ಕಬಳಿಸಿದೆ ಕಾಲ ಸೂರ್ಯ
ಯೌವ್ವನದ ಬಿಸಿ ಕರಗಿ ಹೆಪ್ಪಾಗಿ ಸುಕ್ಕಾಗಿ
ಹೊಸದೊಂದು ಮಾಯಾಲೋಕ
ಮುಪ್ಪು ಬರುವ ಮುನ್ನ ಸಾವೇ
ಶ್ರೇಷ್ಠ ಎನ್ನುವ ಮಂದಿ.
ಅರ್ವತ್ತಕ್ಕೆ ಅರಳು ಮರುಳೆಂದು
ಮಾಡುವರು ಮೂಲೆಗುಂಪು
ಮುಪ್ಪೆಂದರೆ ಪರವಾಲಂಬನೆಯ ಸ್ವೀಕಾರ
ಪರಿತಾಪ ಪಶ್ಚಾತ್ತಾಪಗಳ ಆಗರ.
*****



















