ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು

-ಪಾಂಚಾಲರ ನಾಡಿನಲ್ಲಿ ನಡೆದ ದ್ರೌಪದಿ ಸ್ವಯಂವರದ ಬಳಿಕ ಹಸ್ತಿನಾಪುರದ ಅರಮನೆಯಲ್ಲಿ ಸಭೆ ನಡೆಸಿದ ದುರ್ಯೋಧನನು, ಪಾಂಡವರು ಬದುಕಿ ಬಂದಿರುವ ಸಂಗತಿಯನ್ನೂ ಸ್ವಯಂವರದಲ್ಲಿ ದ್ರೌಪದಿಯನ್ನು ಅರ್ಜುನ ಜಯಿಸಿದ್ದನ್ನೂ ತಿಳಿಸಿದನು. ದುರ್ಯೋಧನ ದುಶ್ಯಾಸನರಿಗಂತೂ ಪಾಂಡವರುಳಿವು ನುಂಗಲಾರದ ತುತ್ತಾಗಿತ್ತು....

ದ್ರೌಪದಿ ಸ್ವಯಂವರ

-ಬ್ರಾಹ್ಮಣ ವೇಷಧಾರಿಗಳಾಗಿ ಭಿಕ್ಷೆ ಬೇಡುತ್ತ ಏಕಚಕ್ರನಗರದಲ್ಲಿ ಕೆಲವು ದಿನಗಳಿದ್ದಂತಹ ಪಾಂಡವರು, ಅಲ್ಲಿ ಪ್ರಜಾಪೀಡಕನಾಗಿದ್ದ ಬಕಾಸುರನನ್ನು ಕೊಂದು ಪ್ರಜೆಗಳ ಕಷ್ಟ ನಿವಾರಣೆ ಮಾಡಿದ ಬಳಿಕ, ಇನ್ನು ಅಲ್ಲಿರುವುದು ಒಳಿತಲ್ಲವೆಂದು ಭಾವಿಸಿ, ಅಗ್ನಿಪೂಜಕನೂ ಪಾಂಚಾಲದರಸನೂ ಆದಂತಹ ದ್ರುಪದನು...

ಬಕಾಸುರ ಸಂಹಾರ

-ಅರಗಿನಮನೆಯ ಅವಘಡದಿಂದ ಪಾರಾಗಿ ಕಾಡಿಗೆ ಬಂದ ಪಾಂಡವರು ಹಿಡಿಂಬವನವನು ತಲುಪಿದರು. ಅಲ್ಲಿ ಭೀಮನು ಹಿಡಿಂಬನನ್ನು ವಧಿಸಿ ರಾಕ್ಷಸಕನ್ಯೆಯಾದ ಹಿಡಿಂಬೆಯನ್ನು ಮದುವೆಯಾದ. ಒಂದು ವರ್ಷ ಕಾಲ ಕಳೆಯುವಷ್ಟರಲ್ಲಿ ಭೀಮನಿಗೆ ಪುತ್ರೋತ್ಸವವಾಗಲು, ಅವನಿಗೆ ಘಟೋತ್ಕಚನೆಂದು ನಾಮಕರಣ ಮಾಡಿ...

ಭೀಮನ ಮದುವೆ

-ತಂದೆಯ ಸ್ಥಾನದಲ್ಲಿದ್ದ ಧೃತರಾಷ್ಟ್ರನ ಅಪ್ಪಣೆಯಂತೆ ದೈವಕಾರ್ಯಕ್ಕೆಂದು ವಾರಣಾವತಕ್ಕೆ ಹೊರಟ ಪಾಂಡವರು ದುಷ್ಟಕೂಟದ ಸಂಚನ್ನು ಭೇದಿಸಿ ಅರಗಿನಮನೆಯಲ್ಲಿನ ಸಾವಿನ ದವಡೆಯಿಂದ ಪಾರಾದರು. ತಮ್ಮನ್ನು ಸುಡಲು ನೇಮಕಗೊಂಡಿದ್ದ ದುಷ್ಟ ಪುರೋಚನನನ್ನು ಒಳಗೆ ಕೂಡಿಹಾಕಿ ಅರಗಿನಮನೆಗೆ ತಾವೇ ಬೆಂಕಿಯಿಕ್ಕಿ,...

ಅರಗಿನಮನೆಯಲ್ಲಿ ಪಾಂಡವರು

-ಪಾಂಡವರನ್ನು ನಾಶ ಮಾಡಲು ಶಕುನಿಯೊಂದಿಗೆ ಸೇರಿ ಸಂಚು ರೂಪಿಸಿದ ದುರ್ಯೋಧನನು, ಕುರುಡು ಪ್ರೇಮದ ತನ್ನ ತಂದೆಯ ಸಹಾಯದಿಂದ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾದ. ಅಲ್ಲಿ ಪುರೋಚನನ ಸಹಕಾರದಿಂದ ನಿರ್ಮಿಸಲ್ಪಟ್ಟಿದ್ದ ಅರಗಿನಮನೆಯಲ್ಲಿ ಇಳಿದುಕೊಳ್ಳುವಂತೆ ಮಾಡಿ, ಅವರಿಗೆ...

ವಾರಣಾವತಕ್ಕೆ ಹೊರಟ ಪಾಂಡವರು

-ದ್ರೋಣನು ಹಸ್ತಿನಾಪುರದ ಅರಸುಮಕ್ಕಳಿಗೆ ಶಸ್ತ್ರವಿದ್ಯಾಪ್ರದರ್ಶನವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಅರ್ಜುನನಿಗೆ ಸವಾಲಾಗಿ ಸಭೆಯ ಮಧ್ಯದಿಂದ ಎದ್ದು ಬಂದ ಸೂತಪುತ್ರನೆನಿಸಿದ್ದ ಧೀರನಾದ ಕರ್ಣನನ್ನು ಹೀನಕುಲದವನೆಂಬ ನೆಪದಲ್ಲಿ ದೂರವಿಡಲೆತ್ನಿಸಿದ ದ್ರೋಣನ ಮಾತಿಗೆ, ದುರ್ಯೋಧನನು, ಕರ್ಣನನ್ನು ಅಂಗರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಿ...

ಅರಸು ಮಕ್ಕಳ ಶಸ್ತ್ರವಿದ್ಯಾ ಪ್ರದರ್ಶನ

-ದ್ರೋಣನು ಅರಸುಮಕ್ಕಳಿಗೆ ವಿವಿಧ ವಿದ್ಯೆಗಳನ್ನು ಕಲಿಸಿ, ಅವರಲ್ಲಿ ಅರ್ಜುನನನ್ನು ಅಗ್ರಗಣ್ಯನನ್ನಾಗಿಸಿದನು. ತಾನು ರಾಜಕುಮಾರರಿಗೆ ಕಲಿಸಿದ ವಿದ್ಯೆಗಳನ್ನು ಅವರಿಂದ ಪ್ರದರ್ಶಿಸಿ ಕುರುಕುಲ ಹಿರಿಯರ ಮತ್ತು ಜನತೆಯ ಮೆಚ್ಚುಗೆ ಗಳಿಸುವ ಸಲುವಾಗಿ ಭೀಷ್ಮನ ಅನುಮತಿ ಪಡೆದು, ತನ್ನ...

ದ್ರುಪದನ ಗರ್ವಭಂಗ

-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರಾಸ್ತ್ರವಿದ್ಯೆಗಳ ಕಲಿಸುವ ಭರದಲ್ಲಿ ಏಕಲವ್ಯನ ಭವಿಷ್ಯವನ್ನು ಬಲಿ ತೆಗೆದುಕೊಂಡ ದ್ರೋಣನು ಕೆಲವು ದಿನ ಖಿನ್ನಮನಸ್ಕನಾಗಿದ್ದು, ಬಳಿಕ ತನಗೆ ತಾನೇ ಸಮಾಧಾನ ತಂದುಕೊಂಡು ಶಿಷ್ಯರಿಗೆ ವಿದ್ಯೆ ಕಲಿಸುವಲ್ಲಿ ಮಗ್ನನಾದನು. ತನ್ನ ಶಿಷ್ಯರಲ್ಲಿ ಎಲ್ಲರಿಗಿಂತ...

ಏಕಲವ್ಯನ ಗುರುದಕ್ಷಿಣೆ

-ಕುರುಸಾಮ್ರಾಜ್ಯದ ಅರಸುಮಕ್ಕಳಿಗೆ ಶಸ್ತ್ರವಿದ್ಯೆಗಳ ಬೋಧಿಸಲು ಕುರುಕುಲ ಪಿತಾಮಹ ಭೀಷ್ಮನಿಂದ ನೇಮಿಸಲ್ಪಟ್ಟ ದ್ರೋಣನು, ಸಕಲ ವಿದ್ಯೆಗಳನ್ನು ಅವರಿಗೆ ಕಲಿಸುತ್ತಿರಲು, ದ್ರೋಣನ ಮಗನಾದ ಅಶ್ವತ್ಥಾಮನೂ ಅವರೊಟ್ಟಿಗಿದ್ದು ತಾನೂ ವಿದ್ಯಾಪಾರಂಗತನಾದ. ಬಡತನದಲ್ಲಿ ಬೆಂದು ಬಳಲಿದ್ದ ತಂದೆ, ಮಕ್ಕಳಿಬ್ಬರೂ ಆಶ್ರಯ...

ಕೌರವ-ಪಾಂಡವರ ವಿದ್ಯಾಭ್ಯಾಸ

-ಹಸ್ತಿನಾಪುರದರಮನೆಯಲ್ಲಿ ಪಾಂಡುಪುತ್ರರಿಗೂ ಧೃತರಾಷ್ಟ್ರಸುತರಿಗೂ ಹೊಂದಿಕೆಯಾಗದೆ ಅವರಲ್ಲಿ ದ್ವೇಷದ ಭಾವನೆ ಬೆಳೆದು, ಬಲಿಯುತ್ತಲೇ ಇತ್ತು. ಇದಕ್ಕೆ ಇಂಬು ನೀಡುವಂತೆ ಶಕುನಿಯು ದ್ವೇಷದ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯುತ್ತಿದ್ದ. ಹಾಗಾಗಿ ಅವರಲ್ಲಿ ದ್ವೇಷವು ಇನ್ನಷ್ಟು ಹೆಚ್ಚಾಗಿ ಬೆಳೆಯಲಾರಂಭಿಸಿತು....