ಬೇಕಿಲ್ಲವೆಮ್ಮಾರೈಕೆ ಪೂರೈಕೆಯೆಮ್ಮನ್ನದಾ ಮರಕೆ
ಬೇರೆಲ್ಲದಕು ಮೂಲ ಬಲವದುವೆ ಸಾಕದಕೆ
ಬೇಕೆಲ್ಲ ಮರಕದರ ತರಗೆಲೆಯ ಹೊದಿಕೆ
ಭಾರಿ ಕೃಷಿ ಎನಲು ಬೊಕ್ಕತಲೆ ಬಂದೀತು ಜೋಕೆ
ಬಾಳ ಕೃಷಿಗೊಂದು ಪೇಟೆ ಶಾಲೆಯದ್ಯಾಕೆ? – ವಿಜ್ಞಾನೇಶ್ವರಾ
*****