ಒಮ್ಮೆ ಒಂದು ನಾಯಿ ಯೋಚಿಸಿತು. ಇದೇನು? ನಾನು ಸರ್ವ ವಿಧದಲ್ಲಿ ನನ್ನ ಒಡೆಯನನ್ನು ಪ್ರೀತಿಸುವೆ, ಆದರೆ ನನ್ನ ಬಾಲ ನನ್ನ ದೇಹಕ್ಕೆ ತೊಟ್ಟಿನಂತೆ ಅಂಟಿಕೊಂಡು ನನ್ನ ಹೃದಯದ ಪ್ರೀತಿಗಿಂತ ತಾನು ಅಳ್ಳಾಡಿಸುವ ಬಾಲದ ಪ್ರೀತಿಯೇ ಹೆಚ್ಚು ಎಂದು ತಿಳಿಯುತ್ತಿದೆ. ಪುಟಗೋಸಿ ಬಾಲಕ್ಕೆ ಅದೆಷ್ಟು ಜಂಭ! ಸೊಟ್ಟಗಿದ್ದರು ತನ್...

ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ ಪ್ರತಿ ವರ್ಷ ಪ್ರತಿ ಹಬ್ಬಕೂ ಆದರೂ ಹೆಚ್ಚುತ್ತಿದೆ ಯಾಕೆ ಇದಕೆ...

ಶಾಂತ ರಸವನ್ನು ರಸವೇ ಅಲ್ಲ ಅಂದರಂತೆ ಕೆಲ ಮೀಮಾಂಸಕರು ರಸಗಳಲ್ಲಿ ಶಾಂತರಸವೇ ಶ್ರೇಷ್ಠ ಅಂದರು ಅಭಿನವಗುಪ್ತ ಆನಂದ ವರ್ಧನರು ಶಾಂತ ರಸ ಅನ್ನಿ ಶಾಂತಿಯ ಅರಸ ಅನ್ನಿ ಏನೆಂದರೂ ಅದೇ ಮಂದಸ್ಮಿತ ಹಸನ್ಮುಖ ಹುಡುಕು ನೋಟ ಚುರುಕು ನಡಿಗೆ ಹೈದರಾಬಾದಿನ ಬಾಡಿ...

ಎಲ್ಲಿದೆಯೋ ಬೇರು? ಚಿಗುರು ನೂರಾರು… ಯಾರು ಬಿತ್ತಿದರೋ… ಯಾರು ಬೆಳೆದರೋ… ಫಲವನ್ನಂತು ಉಣ್ಣುತಿರುವೆವು ಎಲ್ಲರೂ…. ಬೀಸಿ ಬಂದೊಮ್ಮೆ ಬಿರುಗಾಳಿ ಬುಡ ಕಡಿದು ಹೋದರೆ ಹೋಗಲಿ… ಕನಸಹುದೇ? ಹೂಂ…. ಏಳಿ ಎದ್ದೇ...

ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು ಸರಿದಂತೆ ಕವಿದು ಮೇಲೇರಿ ಬರುವ ಬೆಟ್ಟದ ಕರಿನೆರಳು, ಸಂಜೆಯಲಿ ಪಿಸ...

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ ಇದು ಬರಿ ನಾಡಲ್ಲೋ…|| ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು ಹಲವು ಪ್ರಥಮಗಳ ವೈಭವದ ನಾಡು ಕ್ರಾಂತಿಕಾರಕ ರೈತ ಚಳುವಳಿಗಳ ನಾಡು ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು|| ಕುವೆಂಪು ಹಾಮಾನಾ ಮೂರ್...

ಧರ್ಮರಾಯ, ನೀನು ನಡೆದದ್ದು ಧರ್ಮದ ಹಾದಿಯಲ್ಲಿ ಎಲ್ಲ ಹೊಗಳುತ್ತಾರೆ ನಿನ್ನನ್ನು. ಆದರೆ ದ್ರೌಪದಿಗೆ ನೀನು ಮಾಡಿದ್ದು ಮೋಸ? ಅರ್ಜುನ ಜಯಸಿ ತಂದವಳ ಅವನಿಗೇ ಬಿಡದೆ ತಾಯಿ ಅರಿವಿಲ್ಲದೇ ಆಡಿದ ಮಾತಿನ ನೆವದಿಂದ ಐವರ ಪತ್ನಿಯಾಗಿಸಿದೆ- ಅವಳ ಕನಸುಗಳ ಒಡೆ...

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು ರತಿಗೀಳು; ಅತಿಕೀಳು ಕ್ರಿಯೆಗೆ ಹಾಯುವವರೆಗೆ, ಘಾತಕ ಮೃಗೀಯ ವಂಚಕ ಹೇಯ ಎನಿಸುವುದು, ಸುಖಿಸಿ ಮುಗಿಯಿತೊ ‘ಇಸ್ಸಿ’ ಎನಿಸುವುದು ಅದೆ ಗಳಿಗೆ ; ಹುಚ್ಚಿನಲಿ ಬೆನ್ನಟ್ಟಿ ಓಡಿ ಹಾರಿದ ಹೊತ್ತೆ ಪೆಚ್ಚಾಗಿ ಮತ್...

ಪೀಠಿಕೆ “ಅರ್ಜುನ ಜೋಗಿ” ಎಂದು ಹಸರಿನಿದ ಕಥನಗೀತದಲ್ಲಿ ಅರ್ಜುನ ಮತ್ತು ಆತ ಜಾಲಗುನ್ನಿಯನ್ನು ಮಾಡಿ ಕದ್ದುಕೊಂಡು ಹೋದ ಹೆಂಗಸು ಸುಭದ್ರೆ ಎಂದು ತಿಳಿಸಿದ್ದರು. ಇವರು ಮಹಾಭಾರತದ ಅರ್ಜುನ ಸುಭದ್ರೆ ಅಲ್ಲ. ಮಹಾಭಾರತದ ಕಥೆಯ ಪಾಠಗಳಲ್ಲಿ ಅರ್ಜುನನು ಜೋ...

ಹಗಲೆಲ್ಲ ದೃಶ್ಯಕಾವ್ಯ ಮುಖಾಮುಖಿ ಮಾತು ಚಲಾವಣೆ ಮನೆ ಸಂತೆಪೇಟೆ ರಾಜಕೀಯ ಕಾಡುಮೇಡು ಆಕಾಶ ಸಮುದ್ರದವರೆಗೆ ದುಡಿದು ಬೆವರಿಳಿಸಿದವರ ಅರೆಹೊಟ್ಟೆಮಾತು ಬಿರಿದ ಹೊಟ್ಟೆಯವರ ಭ್ರಷ್ಟಾಚಾರದ ಮಾತು ಹೃದಯಮಾತಿಗೆಲ್ಲಿ ದೃಶ್ಯಕಾವ್ಯ. ರಾತ್ರಿಗೆ ಕತ್ತಲೆಕಾವ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...