ಕಟ್ಟುತ್ತಿರುವೆನು ಮಂದಿರವನ್ನು

ಕಟ್ಟುತ್ತಿರುವೆನು ಮಂದಿರವನ್ನು
ಎದೆಯ ಗೂಡಿನಲ್ಲಿ
ರಾಮ ರಹೀಮ ಕ್ರಿಸ್ತ ಅಲ್ಲಮ
ಎಲ್ಲರಿರುವರಲ್ಲಿ

ಆಂಜನೇಯನಿಗೂ ಏಸುಕ್ರಿಸ್ತನಿಗೂ
ಬಹಳ ನ್ಯಾಸ್ತವಿಲ್ಲಿ
ಬುದ್ಧ ನಾನಕ ಮಹಾವೀರರು
ಇವರ ಸ್ನೇಹದಲ್ಲಿ

ರಾಮ ಪವಡಿಸಿಹ ಮಸೀದಿಯಲ್ಲಿ
ಕ್ರಿಸ್ತನಾ ಕೋಣೆಯಲ್ಲಿ
ಇದಕೆ ಹೆಸರುಗಳು ಇಗರ್ಜಿ ಬಸದಿ
ನೂರು ಭಾಷೆಯಲ್ಲಿ

ಇಲ್ಲಿಯ ರಾಮ ನುಡಿವನು ಉರ್‍ದು
ಅಲ್ಲಾ ಸಂಸ್ಕೃತ ಬಲ್ಲ
ಕ್ರಿಸ್ತನಿಗೋ ತೆಲುಗೆಂದರೆ ಪ್ರೀತಿ
ಕನ್ನಡವಿಲ್ಲದೆ ಇಲ್ಲ

ಎಲ್ಲಾ ದೇವರು ಕ್ರಿಕೇಟಾಡುವರು
ಸೋಲು ಗೆಲುವು ಕ್ಷಣಿಕ
ಕಡೆಗೆ ಮಬ್ಬಲಿ ಒಂದೆ ಕ್ಲಬ್ಬಲಿ
ತೋರ್‍ವರೆಲ್ಲ ಪುಳಕ

ಅವನು ಹೇಳುವನು ಕಿರೀಟ ಭಾರ
ಇವನಿಗೊ ಟೋಪಿಯು ಭಾರ
ಎಲ್ಲರು ಹಾರೈಸಿಹರು ಕ್ರಿಸ್ತಗೆ
ಶಿಲುಬೆಯಿಂದ ಪರಿಹಾರ

ಜುಟ್ಟುಗಳಿದ್ದರೆ ಜುಟ್ಟೆಳೆದಾಟ
ಗಡ್ಡಗಳಿದ್ದರೆ ಮುಂಭಾರ
ದೇಹಕೆ ಭಾರ ಆ ಶಿವದಾರ
ಕಡಿಮೆಯಲ್ಲ ಜನಿವಾರ!

ಎಲ್ಲ ಚಾನಲಲಿ ಮತ ಮೌಢ್ಯಗಳು
ವಿಜ್ಞಾನಕೆ ಇದು ಥರವೇ
ಕಡೆಗೆ ನಮ್ಮನೂ ಎಳೆದು ತರುವಿರಿ
ನಿಮಗೆ ಇದು ಭೂಷಣವೇ

ಎದೆಯ ಗೂಡಿನಲಿ ರಾಮ ಅಳುವನು
ಪರಿವಾರದ ಜೊತೆಗೂಡಿ
ತಾಯಿಯ ಗರ್‍ಭವ ದಾಟಿದ ತಪ್ಪಿಗೆ
ಪ್ರಾಣಿಪಕ್ಷಿಗಳ ಕೂಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಳತೋಟಿ
Next post ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…