ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು…

ಒಬ್ಬ ಮನುಷ್ಯ ಹಸಿವೆಯಂದ
ಎಷ್ಟು ನರಳಬಹುದೋ
ಅಷ್ಟು ದಾರುಣವಾಗಿ ಅವನು ನರಳಿದ್ದ.

ಒಂದು ತುಂಡು ರೊಟ್ಟಿಗಾಗಿ
ಎಷ್ಟು ಹೋರಾಡಬಹುದೋ
ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ.

ಅವನ ಒಡಲಾಗ್ನಿ ಯಾರನ್ನೂ ಸುಡಲಿಲ್ಲ.

ದುಃಖ ದುಮ್ಮಾನಗಳಿಂದ
ಒಬ್ಬ ಮನುಷ್ಯ ಎಷ್ಟು ನೋಯಬಹುದೋ
ಅಷ್ಟೂ ತೀವ್ರವಾಗಿ ಅವನು ನೊಂದಿದ್ದ

ನೋವು ಅವಮಾನಗಳಿಗೀಡಾಗಿ ಜರ್ಝರಿತನಾಗಿದ್ದ.

ಅವನೆದೆ ಎಂದೂ ಕಲ್ಲಂತೆ ಪೆಡಸಾಗಲಿಲ್ಲ.

ಈ ಹೊತ್ತಿಗೂ ಅವನಿರುವನಿಲ್ಲೇ ನಮ್ಮ ನಡುವೆ
ಒಂದಾಗಿ ಗಿಡ ಮರ ಹಳ್ಳ-ಕೊಳ್ಳದಂತೆ ತೂಗಿ ಬಾಗಿ.

ಹೌದು….
ಕೋವಿ ಹಿಡಿಯದ ಕೈಗಳೇ
ಕಂಬನಿ ಒರೆಸಬೇಕು!
ಸಾವಿನೊಡನೆ ಸೆಣಸಾಡಿದರೂ
ಘನತೆಯಿಂದ….

ಗೆಳೆಯಾ….
ಕೋವಿ, ಗುಂಡು, ರಕ್ತ, ಚೀತ್ಕಾರ
ಈ ಭುವಿಗೆ ತುಂಬ ಹಳತು.

ಬದುಕ ಬೆಳಗಿಸಲು ಹೊಸ ಅಸ್ತ್ರಗಳೇನಾದರೂ
ನಿನ್ನ ಬಳಿ ಇವೆಯಾ, ಹೇಳು….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕಾಂತದ ಆಲಾಪ
Next post ಒಳತೋಟಿ

ಸಣ್ಣ ಕತೆ

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…