ಮೊಳಕೆ ಬಂದ ಬೀಜವೊಂದು
ಹುಳುವು ಹತ್ತಿ ಬೆಳೆಯದಾತು
ಒಳಗೆ ಒಳಗೆ ಅಳುಕುತಳುತ ಕೊಳೆಯತೊಡಗಿತು.
ಮಳೆಯು ಭರನೆ ಬಂದಿತೊಮ್ಮೆ
ಹುಳುವು ಅದುರಿ ಬಿದ್ದು ಹೋತು ;
ಹಳೆಯ ಜಾಡ್ಯ ಕೊಡವಿ ಬೀಜ ಬೆಳೆಯಲೆಸಗಿತು.
ಬೆಳೆಯುತಿದ್ದ ಬೀಜ ಕಂಡು
ಹುಳುವು ಹೆದರಿ ಗದರಿಕೊಂಡು
ಗಳನೆ ನುಂಗಲೆಂದು ತನ್ನ ಕೈಯ ಚಾಚಿತು.
ಬೆಳೆವ ಭರದಲಿದ್ದ ಬೀಜ
ಬೆಳೆದ ಶಕ್ತಿಯಿಂದಲೊದೆದು
‘ ಬೆಳೆವೆ ನೋಡು; ಗಳುಹಬೇಡ ತಿಳಿಯೋ ‘ ಎಂದಿತು.
*****
೦೨-೦೩-೧೯೪೨








