ತಾಯಿ ಭಿಕ್ಷಾ ನೀಡವ್ವ ಮಂದಿ ಭಂಗಾ ನೋಡವ್ವ. ತೊಗಲು ಚೀಲದ ಬದುಕು ಕೆಟ್ಟೆ ಎಷ್ಟು ಕೊಟ್ಟರು ತುಂಬದ ಹೊಟ್ಟೆ ಅಲೆದು ಬೇಡಿ ಬಣ್ಣಗೆಟ್ಟೆ ನಾಯಿಗಿಂತ ಗೋಳುಪಟ್ಟೆ – ತಾಯಿ ಭಿಕ್ಷಾ ನೀಡವ್ವ. ಇಲ್ಲೆನಬೇಡವ್ವ, ಮುಂದಕ್ಕೆ ಹೋಗೆನಲೇಕವ್ವ ಒಂದು ಮಾತು, ಒಂದ...
ಚೂರಾದ ಕನ್ನಡಿ ಜೋಡಿಸಿ ಪ್ರತಿಬಿಂಬ ಕಾಣುವ ತವಕ ಹರಡಿದ ತುಂಡು ಕನಸುಗಳ ಹರಿದ ಚಿಂದಿಗಳ ಹೊಂದಿಸಿ ಎಲೆ ಚಂಚಿ ಹೊಲಿಯುವಾಸೆ ಬಿರಿದ ಹಾಳು ಗೋಡೆಗಳಲ್ಲಿ ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು ಬೆಳದಿಂಗಳ ಆ ಬಯಲಿನಲಿ ಲಾಂದ್ರದ ಮಂದ್ರ ಬೆಳಕು ಚಂದ್ರನಿಗ...
ಮೂಡಲ ಗಿರಿಯಪ್ಪ ಮೂಡಿ ಬಂದಾಗ ಬೆಟ್ಟದ ಬಣ್ಣವೆ ಬಂಗಾರ ಬೆಟ್ಟದ ಬಣ್ಣ ಬಂಗಾರ ಎಂದಾನ ತಾನ ತಂದನಾ ತಂದನಾನ ಕೋಲೂ ಕೋಲೆನ್ನ ಕೋಲೇ ರನ್ನದಾ ಚಿನ್ನದಾ ಕೋಲೂ ಕೋಲೆನ್ನ ಕೋಲೇ ಆ ಬಣ್ಣದಾ ಕೋಲೂಕೋಲೆನ್ನ ಕೋಲೇ ಮೂಡಲ ಗಿರಿಯಪ್ಪ ಮೂಡಿ ಬಂದಾಗ ಮೋಡದ ಬಣ್ಣವೆ ...
ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ...
ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು | ಮಣ್ಣಾಗಿ ಹೋದರು ಮಳಿರಾಜಾ || ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು ಅನ್ಯದ ದಿನ ಬಂದು ಮಳಿರಾಜಾ ||೧|| ಒಕ್ಕಲಗೇರ್ಯಾಗ ಮಕಿರಾಜಾ | ಅವರು | ಮಕ್ಕಳು ಮಾರ್ಯಾರ ಮಳಿರಾಜಾ || ಮಕ್ಕಳ ಮಾರೀಽ ರೊಕ್ಕಾ ಹಿಡಕೊಂ...
ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ ಚಪ್ಪಾಳೆ ಇದೇ ನಿತ್ಯದಾಟ ಅಲ್ಲವೇ ಹೇಳಿ ನಾನೆ ...
ದ್ವಾ ಸುಸರ್ಣಾ ಯುಯುಜಾ….. ಉಪನಿಷತ್ತಿನ ಶ್ಲೋಕದ ಅವಿನಾಭಾವದ ಹಕ್ಕಿಗಳೇ ಈ ಸಾಹಿತ್ಯ ಮತ್ತು ಧರ್ಮ ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ ಬೀಜ ವೃಕ್ಷ ನ್ಯಾಯದಂತೆ ಗುದ್ದಾಡಲಿಲ್ಲ ಇವು ಒಂದನ್ನೊಂದು ಒರಗಿ ನಿಂತವು ಗುದಮುರಿಗೆ ...
ಏನೆ? ಏನೆ? ಏನದು? ಬಾತಿದೆ? ಕೊಳೆತಿದೆ? ಮೇಗಡೆ ಹಾರುತ್ತಿದೆ ಡೇಗೆ ನರಿಯೊಂದು ಊಳಿಡುತ್ತಿದೆ ನಾಯೊಂದು ಹೊಂಚು ಹಾಕಿದೆ ಕಾಗೆಗಳು ತಾರಾಡುತ್ತಿವೆ ಇರುವೆಗಳು ದಂಡೆತ್ತಿವೆ ನೊಣಗಳು ಗುಂಯ್ ಗುಡುತ್ತಿವೆ ಮಿಜಿ ಮಿಜಿ ಮಿಜಿ ಮಿಜಿ ಮೂಗು ಮುಚ್ಚಿಕೊಂಡರ...
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? “ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು” ಅಂತ. “ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ ಬೇಡ” ಅಂತು. ಆದ್ರೂ ಕೇಳದಿದ್ದೆ ...
ಎಂಥ ಚಂದದ ಬಳ್ಳಿ ಬೆಳೆದಿಹುದಿಲ್ಲಿ ಮೊಗ್ಗರಳಿ ಕನ್ನಡ ಕಂಪು ಸೂಸುತಿಹುದಿಲ್ಲಿ ತೊದಲು ನುಡಿಯಲಿ ಪ್ರೀತಿಯೆಲ್ಲೆ ಮೀರಿಹುದಿಲ್ಲಿ ಅವ್ವ ಅಪ್ಪ ಎಂದ್ಹೇಳಲು ಬಿಡದೆ ಮಮ್ಮಿ ಡ್ಯಾಡಿ ಗೋ ಕಮ್ ಕಲಿಸಿ ಚಿಗುರಿನ ಗೋಣ ಮುರಿವವರಿಲ್ಲಿ ನಾಡು ನುಡಿಯ ಮೊಗ್ಗು ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







