ಅಮ್ಮ

ಕಳೆದುಕೊಂಡ ಅಮ್ಮ ನಿನ್ನ
ಎಲ್ಲಿ ಹುಡುಕಲಿ
ಮತ್ತೆ ಪಡೆವ ಭಾಗ್ಯ ಉಂಟೆ
ನನ್ನ ಹಣೆಯಲಿ ||

ಧರೆಗೆ ತಂದೆ ನೀನೆ ಧರಣಿ
ನೀನೆ ಮೊದಲ ಅಕ್ಷರ
ಮತ್ತೆ ಬೇರೆ ಬೇಕೆ ಹೇಳು
ಇಟ್ಟಿಗೆಗಳ ಮಂದಿರ!

ಜಗವ ತೋರಿ ಜಗವೆ ಆದೆ
ಇದು ನಿನ್ನ ವಿಲಾಸ
ಕಡೆಗೆ ಕರುಣೆ ತೋರದಾದೆ
ಕೊಡದೆ ನಿನ್ನ ವಿಳಾಸ!

ಪ್ರೀತಿ ಮಮತೆ ಕರುಣೆ ಮರುಕ
ಕಂಡ ನಿನ್ನ ಕಣ್ಣಲಿ
ಅರ್‍ಥ ಹುಡುಕಿ ಕುಬ್ಜನಾದೆ
ನಾವು ಬರೆದ ನಿಘಂಟಲಿ!

ಅಮ್ಮ ನಿನಗೆ ಕವಿತೆ ಕೋಟಿ
ಕವಿಗಳಾದರೆಲ್ಲ
ಕೋಟಿಯಲ್ಲಿ ಒಬ್ಬರೂ
ಮಕ್ಕಳಾಗಲಿಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸಹಾಯಕತೆ
Next post ತಿಳಿದಿರಲಿಲ್ಲ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…