ಏಕೆ ಗೆಳತಿ ವಿರಹವೇದನೆ?

ಏಕೆ ಗೆಳತಿ ವಿರಹವೇದನೆಯ
ಸಹಿಸಲಾಗದೆ ತೊಳಲಾಡುತಿರುವೆ|
ಸಣ್ಣ ಸಣ್ಣ ವಿಷಯಗಳಿಗೇಕೆ
ನೀನೇ ಗಂಡನ ಮನೆಯ ತೊರೆದು
ಮನೆ ಮನಗಳ ಅಸಮಧಾನಕೆ ಎಡೆಮಾಡುವೆ|
ನಾನು ಸರಿಸಮನಾಗೆ ದುಡಿವೆ ಎಂಬ
ಹಮ್ಮಿನಿಂದೇಕೆ ನಿನ್ನ ಜೀವನ ಬರಡಾಗಿಸುವೆ||

ನಾನು ಸರಿಸಮನಾಗಿ ದುಡಿವೆ
ಎಂಬ ಹೆಮ್ಮೆ ಇರಲಿ,
ಸಂಸಾರ ನಡೆಸೆ ಸಹಾಯವಾಗುವೆನೆಂಬ
ಅಭಿಮಾನವಿರಲಿ|
ಬೇಡ ನಿನಗೆ ನಾನೇ, ನನ್ನಿಂದಲೇ
ಎಂಬ ಕುರುಡು ಹಮ್ಮಿನ ಸ್ವಭಾವ
ಬೆಳೆಸಿಕೊ ಎಲ್ಲರೂ ಸುಖಸಂಸಾರಕೆ
ಸಮಾನರೆಂಬ ಸತ್ಯಭಾವ||

ಇರುವುದು ನೀನಿಲ್ಲಿ ತರವಲ್ಲ ಎಂದು
ನಿನ್ನತ್ತಿಗೆ ಹೇಳುವುದೇ ಸರಿ ಇದೆ|
ಅಲ್ಲಿ ಗಂಡನೊಂದಿಗೆ ಹೊಂದಿ
ಬಾಳುವುದೇ ತರವು||
ಅಲ್ಲಿ ನೀನೇ ರಾಣಿ ನಿನ್ನದೇ ಅರಮನೆ
ಇದು ನಿನ್ನ ಪ್ರೀತಿಯ ತವರುಮನೆ
ಬಂದು ಹೋಗಲದುವಷ್ಟೇ ಚೆಂದ|
ಅಲ್ಲಿದೆ ನಿನ್ನ ಸ್ವಂತಿಕೆ
ಇಲ್ಲಿ ಸಿಗುವುದು ಅತಿಥಿ ಸತ್ಕಾರಿಕೆ||

ಹೊರಡು ತಡಮಾಡದೆ
ವಿಷಘಳಿಗೆ ಸಮೀಪಿಸುವ ಮುನ್ನ|
ನಿನ್ನ ವಿರಹವ ಸಹಿಸದೆ
ಪರಿತಪಿಸುತಿದೆ ಅಲ್ಲಿ ನಿನ್ನದೇ ಜೀವ|
ಕಣ್ಣಲೇ ಕ್ಷಮೆಯಾಚಿಸಿ ಪ್ರೀತಿಸೆ
ಕಾಯುತಿದೆ ನಿನ್ನ ಬಾಳದೈವ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಲಾಮ ಗೀತೆ
Next post ಹಾರಯ್ಕೆ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…