ಜನಜಂಗುಳಿಯಲ್ಲಿ ಕಳೆದಿರುವ
ಬದುಕಿನ ಜೊತೆಗಾರನಿಗೆ
ಮತ್ತೆ ಮತ್ತೆ ಹುಡುಕುತ್ತೇನೆ,
ಕೀವು ಸೋರುವ ಗಾಯಗಳಿಗೆ
ಮತ್ತೆ ಮತ್ತೆ ತೊಳೆಯುತ್ತೇನೆ,
ಮುಲಾಮು ಸವರುತ್ತೇನೆ,
ಎಂದಿಗೂ ಒಂದಾಗದ
ರೈಲು ಹಳಿಗಳಂತೆ
ಕ್ಷಿತಿಜದಲ್ಲಿ ಎಂದಿಗೂ ಸೇರದ
ನದಿಯ ಎರಡು ದಡಗಳಂತೆ
ನಡೆದಿರುವೆವು ನಾವು ನಿರಂತರ,
ಘನ-ಘೋರ ಕಾಡಿನಲ್ಲಿ ನೇರ
ದಾರಿಯಿಲ್ಲ ಕಲ್ಲು-ಮುಳ್ಳುಗಳ
ತುಂಬಿದ – ಹಾಳು ಹೊಡೆವ
ಕ್ಷಣಗಳನ್ನು – ತುಂಬಿಕೊಳ್ಳೋಣ,
ಬದುಕಿನ – ಜೀವಂತ ಬಣ್ಣಗಳಿಂದ
ಪ್ರತೀಕ್ಷೆ – ನಿರೀಕ್ಷೆಗಳಿಂದ.
*****


















