ಅಥೆಲೋ ನಾಟಕ ಓದಿ

ಬಾಳ ಬಣವೆಯ ಕೆಳಗೆ
ಮತ್ಸರದ ಕಿಡಿ ಹೊತ್ತಿ!
ಸುಟ್ಟು ಹಾಕುವುದಯ್ಯೋ!
ನಿರ್ಬುದ್ದ ಕಿಡಿಗೇಡಿ
ದೌರ್‍ಮನಸ್ಯವು ಒಂದು
ದುಡಿಯುತಿದೆ ಸಂತತವು

ಆನಂದವನು ಕೆಡಿಸಿ
ದುಮ್ಮಾನವನು ಬೆಳೆಸಿ
ಸೈತಾನ ನೃತ್ಯವನು
ಹಾಕುತಿದೆ ಧೀಂಕಿಟ್ಟು

ಋತವೆಲ್ಲ ಕಾಲ್ದೆಗೆದು
ಹಾಳಾಗಿ ಹೋಗುತಿದೆ

ದಿನದಿನಕು ಜೀವನದಿ
ವಿಷಮತೆಯು ಹೆಚ್ಚುತಿದೆ
ಸಂತಾಪತಾಪಗಳ
ಕೋಟಲೆಯ ಮಡುವಿನಲಿ
ನರನರಳಿ ಸಾಯುತಿವೆ
ನೂರಾರು ಜೀವಿಗಳು!

ಜಗವ ನಾಳುವಕೈಯ
ನರವು ಸತ್ತಿಹುದೇನೊ
ಎಂಬ ಸಂಶಯದಿಂದ
ತತ್ತರಿಸುತಿದೆ ಬುದ್ಧಿ

ಕೊನೆಯು ಬರುವದೆ ಇಂಥ
ರಕ್ಕಸರ ಹೂಟಕ್ಕೆ?
ಎಂದು ತಲೆತುರಿಸುವದೆ
ಉದ್ಯೋಗವಾಗಿಹುದು

ಮಾನವನ ಮಿದುಳೆಲ್ಲ
ಕೈಯೂರಿ ನಿಂತಿಹುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವಗೀತೆ
Next post ರಾವಣಾಂತರಂಗ – ೧೧

ಸಣ್ಣ ಕತೆ

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…