ಕಡಲಿನಾವಿಯನೆತ್ತಿ ತಿರೆಗದನು ಮರೆಮಾಡಿ ಮುಗಿಲ ಮೇಲೆಯೆ ಬೆಳಗುವಿನತೇಜದಂತೆ ಭವಕವಿದ ದುರ್ದಿನದೊಳದರ ಮೇಲಾಡುತಿಹ ರಸದ ತೇಜಕೆ ಜೀವ ಹಂಬಲಿಪುದಿಂತೆ. ಆ ಮುಗಿಲ ಬಿಡಿಸುತಾ ಕಿರಣಗಳಿಗೆಳೆಸೋ೦ಕ ತಂದು ಕತ್ತಲ ಕಳೆವ ಶುಭಕಲ್ಪಗಳನು ಸುಂದರಾಗಮಕಲಿತ ದೇವೋತ್ಸವಂಗಳನು ಸರಸಸಜ್ಜನಗೋಷ್ಠಿ ಸಲ್ಲಾಪಗಳನು ಆದರಿಸದೀ ನೆಲದ ಮನದ...

ನಿನ್ನ ನೆನಪು ನಿನ್ನ ಕರುಣೆ ನಿನ್ನ ಪ್ರೀತಿ ನಿನ್ನ ಭಾವ ನನಗೆ ಮುದವ ನೀಡಿದೆ || ನಿನ್ನ ಬಾಳು ನಿನ್ನ ಬವಣೆ ನಿನ್ನ ಮನಸು ನಿನ್ನ ಹೊಸತು ಮಾದರಿಯಾಗುಳಿದಿದೆ || ನಿನ್ನ ಸ್ನೇಹ ನಿನ್ನ ಘನತೆ ನಿನ್ನ ರೀತಿ ನಿನ್ನ ನೀತಿ ನನ್ನ ಸರ್ವಸ್ವ ಎನಿಸಿದೆ || ...

ಮುಕ್ಕಣ್ಣಶೆಟ್ಟಿ ದಯವಿಟ್ಟು ಕೊಟ್ಟ ಅಕ್ಕಿಯಲ್ಲಿ ಚಿಕ್ಕ ಚಿಕ್ಕ ಸಹಸ್ರ ಲಿಂಗಗಳು; ಅಕ್ಕಿಯಷ್ಟೆ ಬಿಳಿ ಉಕ್ಕಿನಷ್ಟು ಭಾರ ಬಿಕ್ಕಿದರೆ ಹೇಗೆ ಚಿಕ್ಕ ಆಲಿಕಲ್ಲನ್ನು ಮುಗಿಲು ಹಾಗೆ ಮಣಿಹರಳು! ಶೆಟ್ಟಿ ಶಿವಭಕ್ತ ಜೊತೆಗೆ ಕವಿರಕ್ತ ಈಗ ಸರ್ಕಾರವೂ ಕುಲುಕ...

ಆನೆ ಬಂತೊಂದಾನೆ ಆನೆ ಬಂತೇನೆ ಆನೆಯಷ್ಟೇ ದೊಡ್ಡ ಆನೆ ಸರಿ ತಾನೆ ಭಾರಿ ಕಂಭಗಳಂತೆ ಅದರ ಕೈಕಾಲು ಸೊಂಡಿಲೆಂದರೆ ತೂಗಿ ತೊನೆವ ಬಿಳಲು ದೊರಗು ಮೈ ಗೆರಸೆ ಕಿವಿ ಅದರಂತೆ ಗೋಣು ಏನೊ ಹೇಳಲು ಬಯಸುವಂಥ ಕಿರುಗಣ್ಣು ನೋಡಿದರೆ ಎಲ್ಲರೂ ಹೊರಬೀದಿಗಿಳಿದು ಎಂದಿ...

ಹಗಲು ರಾತ್ರಿಯನ್ನದೇ ಮಳೆ ಸುರಿಯಿತು ನಾನು ನೀನು ಮಾತಾಡಿಕೊಂಡಾಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿ ಮಾತಾಡುತ್ತಲೇ ನಾವು ನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ ಆಕೆ ನ...

ಸೂರಿಗೆ ಎರಡು ಮದುವೆಯಾಗಿದ್ದಾನೆಂದು ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ನ್ಯಾಯಾಧೀಶರು :- “ನೀನು ಎರಡು ಮದ್ವೆ ಆಗಿರುವ ಬಗ್ಗೆ ಸಾಕ್ಷಾಧಾರ ಕೊರತೆಯಿಂದ ಸಾಬೀತಾಗಿಲ್ಲ, ನೀ ಇನ್ನು ಮನೆಗೆ ಹೋಗಬಹುದು…” ಸೂರಿ ಕೇಳಿದ :...

ಆಡು ಬಾಬಾ ಕೂಡು ಬಾಬಾ ಬೆಳಗಿನಂಗಳ ಹೊಳೆಯಲಿ ಹಾಡು ಬಾಬಾ ನೀಡು ಬಾಬಾ ನಿಜದ ನಿರ್‍ಮಲ ಕೊಳದಲಿ ||೧|| ಎತ್ತ ನೋಡಲಿ ಸುತ್ತ ಓಡಲಿ ಒಲವಿನಮೃತ ಮಿಲನಜಂ ಸತ್ಯ ಸೋಂಸೋಂ ತೋಂತೋಂ ತನನ ತಂತನ ತನನ ಓಂ ||೨|| ಗಾಳಿ ಬಿಂಗರಿ ಮುಗಿಲ ಸಿಂಗರಿ ತುಂಬಿ ತಿರುಗಿದ...

ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವನೊಬ್ಬ ಕಾಲೇಜ್ ಹುಡುಗ, ಷೇಕ್ಸ್ ಪಿಯರಿನ ರೋಮಿಯೋ ಜೂಲಿಯೆಟ್ ಕೂಲಂಕುಷವಾಗಿ ಓದಿದ. ಈಗ ಅವನ ಮನಸ್ಸು ಪ್ರೀತಿ ಪ್ರೇಮದಿಂದ ತುಂಬಿ ವಿಶಿಷ್ಟ ಪ್ರೇಮ ಪತ್ರ ಬರೆಯಲಾರಂಭಿಸಿದ. ಅದು ಪುಟ ಗಟ್ಟಲೆ ಆಯಿತು. ಅದನ್ನು ಒಮ್...

ಯಾರು ಕೊಯ್ದರೊ ಬೆಳೆಯ ನೆನ್ನೆ ನಗುತ್ತಿದ್ದ ನವಿಲುಗದ್ದೆಯಲ್ಲಿ? ರೆಪ್ಪೆ ಮುಚ್ಚಿದರಿಲ್ಲಿ ಕಪ್ಪೆ ತುಂಬಿದ ಬಾವಿ ಸಿಪ್ಪೆ ಸುಲಿಯುತ್ತಿದೆ ನೆನಪು ನಿದ್ದೆಯಲ್ಲಿ. ಕನಸುಗೊಬ್ಬರದಲ್ಲಿ ತೆನೆಯೊಡೆದ ಮನಸನ್ನು ನೆತ್ತರಲಿ ತೊಯ್ದವರು ಯಾರೊ ಕಾಣೆ ಬೆವರು ...

ಹೆಂಡತಿಯ ಮಾತ ಕೇಳಿದರೆ ಒಮ್ಮೊಮ್ಮೆ ಒಳ್ಳೆಯದೇ ಆಗುವುದು| ಅಗಾಗ ಅವಳಿಗೂ ಗಂಡ ನಾ ಹೇಳಿದಮಾತ ಕೇಳುವನೆಂಬ ನಂಬಿಕೆಯಲೆ ಜೀವನ ಸಾಗುವುದು|| ವಾರಕ್ಕೊಮ್ಮೆ ಸಂತೆ ಮಾಡೆಂದರೆ ಜೇಬಿಗೆ ಲಾಭವೇ ತಾನೆ| ತಿಂಗಳಿಗೊಮ್ಮೆ ಮನೆ ಸಾಮಾನು ತರಬೇಕೆಂದರೆ ಒಳ್ಳೆಯದೇ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...