ಒಂದಾನೊಂದು ಕಾಡಿನಲ್ಲಿ ಮದೋತ್ಕಟವೆಂಬ ಸಿಂಹವಿತ್ತು. ಅದಕ್ಕೆ ಹುಲಿ, ನರಿ, ಕಾಗೆಗಳು ಮಂತ್ರಿಗಳಾಗಿದ್ದುವು. ಅವು ಅಲ್ಲಲ್ಲಿ ತಿರುಗುತ್ತಿರುವಾಗ ಕ್ರಥನಕ ಎಂಬ ಒಂಟೆಯನ್ನು ಕಂಡುವು. ಸಿಂಹವು “ಇದೇನು ಈ ವಿಚಿತ್ರ ಮೃಗ! ಇದೇನು ಗ್ರಾಮದ ಮೃಗವೋ? ಅರಣ್ಯದ ಮೃಗವೋ? ತಿಳಿದು ಬನ್ನಿ? ಎಂದು ಅಪ್ಪಣೆ ಮಾಡಿತು. ...

ಮನುಜ ಮಾನವ ಜನ್ಮ ದುರ್ಲಭ ಎಂದು ಕೇಳಿರುವೆ ನಾನು| ಈ ಮಾನವ ಜನ್ಮದಲಿ ಹುಟ್ಟಿರುವುದೇ ಪುಣ್ಯವೆಂದು ತಿಳಿದವನೊಬ್ಬನಲಿ ನಾನು|| ಮುನಿಜನೋತ್ತಮರು ಹೇಳಿರುವುದನೇ ಪಾಲಿಸುವೆನು ನಾನು| ಏನೇ ಬಂದರೂ ಹರಿಯಚರಣವ ನಂಬಿ ಬದುಕ ಸಾಗಿಸುವೆ ನಾನು|| ಸಕಲ ಪ್ರಾಣ...

ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ “ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?” ಎಂದ. “ಹುಂ, ಸುಲಭವಾಗಿರುತ್ತೆ” ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ “ನಿನಗೆ ಗಡ್ಡ ಮೀಸೆ ಹೆರದುಕೊಳ...

ಅಮಟೆ ಅಮಟೆ ಎಂದು ಕುಂಟೆಬಿಲ್ಲೆ ಆಡುತ್ತ ಹತ್ತರತ್ತರ ಬಂದು ಕಡೇಮನೆ ಸೇರಿ ಕಿಸಕ್ಕೆಂದು ಹನಿಯುತ್ತಾಳೆ. ಹಳ್ಳತಿಟ್ಟು ಸರಿಮಾಡಿ ನನ್ನ ಹದ ಮಾಡಿ ಕೂರಿಗೆ ಹೂಡಿ ಕಾಡುತ್ತಾಳೆ. ದಾರಿ ಬಿದ್ದಲ್ಲಿ ಬೀಜ ಬಿತ್ತುತ್ತ ಬುಸುಗುಡುತ್ತ ಬೆವರಿಸುತ್ತಾಳೆ. ವಾಸ...

ಪ್ರಸ್ತುತ ಲೇಖನವನ್ನು ದೇವನೂರು ಅವರ ಮಾತಿನೊಂದಿಗೆ ಆರಂಭಿಸುತ್ತೇನೆ. ಇಂದು ಒಬ್ಬ ಆದಿ ಜನಾಂಗದೋನು ಅಲ್ಪ ಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳುವಳಿಕೆ ಬರುತ್ತೆ. ಅವನಿಗೆ ಕಾಣುತ್...

ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು ನನ್ನ ಪುಣ್ಯ ಪುಣ್ಯ ಎಂಥ ಸುಕೃತುವೋ ಇದನು ಸವಿಯುವುದು ನಾನೆ ಧನ್ಯ ಧನ್ಯ || ೧ || ಎತ್ತ ನೋಡಿದರು ಪ್ರಕೃತಿ ಮಾತೆಯ ಭವ್ಯ ದಿವ್ಯ ರೂಪಾ ಅವಳ ಮಡಿಲಿನಲಿ ನಲ್ಮೆವಡೆಯುವಾ ಮಗುವಿನಾ ಕಲಾಪ || ೨ || ಕಣ್ಣು ಹಾಯಿಸುಲ...

ಆಗಮನ ಬಾಲ್ತಸ್ಹಾರ್ ! ಬಾಲ್ತಸ್ಹಾರ್ ! ಬೇಸಿಗೆಯ ಸೂಟಿಯಲ್ವೆ ನಿನಗೆ- ಕೊಲರಾಡೋ ರಾಂಚಿನಲ್ಲಿ ಅಷ್ಟು ದಿನ ಇದ್ದು ಹೋಗು ಪಕ್ಕದಲ್ಲೆ ನದಿ ಅದರ ಸುತ್ತ ಬಯಲು ಕುದುರೆ ಮೇಲೆ ಏರಿ ಎಲ್ಲಿ ಬೇಕೋ ಅಲ್ಲಿಗೆ ಊರಾಚೆ ಸೇರುವಂಥ ಶನಿವಾರ ಸಂತೆಗೂ ಅದರಂಚಿಗಿರು...

‘ಸಿಡಿಲು’ ಎಂದಾಕ್ಷಣ ಯಾರಿಗೆ ತಾನೆ ಹೆದರಿಕೆ ಇಲ್ಲ. ಇದರ ಅಬ್ಬರ, ಶಬ್ದ ಬೆಂಕಿಯ ವೇಗಗಳನ್ನು ಕಂಡರೆ ಪ್ರಾಣಭಯ ಪಡುವವರೇ ಹೆಚ್ಚು. ಈಗಾಗಲೇ ಸಹಸ್ರಾರು ಜನ ಸತ್ತಿರುವ, ನೂರಾರು ಕಟ್ಟಡಗಳು ನೆಲಕ್ಕುರುಳಿರುವ, ಅಸಂಖ್ಯಾತ ಮರಗಳು ಸೀಳಿಕೊಂಡಿರುವ ಉದಾಹ...

ಕಾರಂಜಿಗಳಲ್ಲಿ ಪುಟಿಯುತ್ತೆ ನಡಿಗಳಲ್ಲಿ ಹರಿಯುತ್ತೆ ಜಲಪಾತಗಳಲ್ಲಿ ಧುಮುಕುತ್ತೆ ಜಲಾಶಯಗಳಲ್ಲಿ ನಿಲ್ಲುತ್ತೆ ಚರಂಡಿಗಳಲ್ಲಿ ನಾರುತ್ತೆ ನೀರು ಆವಿಯಾಗಿ ಆಕಾಶಕ್ಕೆ ಹಾರಿ ಮುಗಿಲಾಗಿ ಪರಿಶುದ್ಧ ಮಗುವಾಗಿ ಮರುಜನ್ಮ ತಾಳಿ ಮಳೆಯಾಗಿ ಭೂಮಿಯ ಮಡಿಲಿಗೆ ಬ...

ನಿನ್ನ ಕೆನ್ನೆ ಕುಳಿ ನಾನು ಬಿದ್ದ ಸುಳಿ ಹೇಗೆ ಹೊರ ಬರಲಿ? ಈಜಬಲ್ಲೆನೆ ಅಲ್ಲಿ! ನಿನ್ನ ಕಣ್ಣ ಕೊಳ ಕೊಳಕಿಂತ ಅದು ಆಳ ಮುಟ್ಟುವೆನೆ ಅದರ ತಳ ಆಗುವೆನೆ ನಾ ನಿರಾಳ! ಮಾತು ಮೂಡುತಿಲ್ಲ ಮೌನವೆ ಹಾಡಿದೆ ಹಾಡದು ಕಾಡಿದೆ ಬಿಡದೆ ಎಲ್ಲ ಮರೆಸಿದೆ ಇನ್ನಿಲ್ಲ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...