ಕಡಲಿನಾವಿಯನೆತ್ತಿ ತಿರೆಗದನು ಮರೆಮಾಡಿ ಮುಗಿಲ ಮೇಲೆಯೆ ಬೆಳಗುವಿನತೇಜದಂತೆ ಭವಕವಿದ ದುರ್ದಿನದೊಳದರ ಮೇಲಾಡುತಿಹ ರಸದ ತೇಜಕೆ ಜೀವ ಹಂಬಲಿಪುದಿಂತೆ. ಆ ಮುಗಿಲ ಬಿಡಿಸುತಾ ಕಿರಣಗಳಿಗೆಳೆಸೋ೦ಕ ತಂದು ಕತ್ತಲ ಕಳೆವ ಶುಭಕಲ್ಪಗಳನು ಸುಂದರಾಗಮಕಲಿತ ದೇವೋತ್ಸವಂಗಳನು ಸರಸಸಜ್ಜನಗೋಷ್ಠಿ ಸಲ್ಲಾಪಗಳನು ಆದರಿಸದೀ ನೆಲದ ಮನದ...

ಬರಲಿರುವ ಕಾಲದ ಯುವಕರೇ, ಇನ್ನೂ ಕಟ್ಟದಿರುವ ನಗರಗಳಲ್ಲಿ ಹುಟ್ಟದಿರುವ ಎಳೆಯ ಜೀವಗಳೇ, ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ. ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ. ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ ಬಿಟ್ಟು ಓಡಿದ...

ಜೀವ ಭಾವ ಬೆರೆತಗಾನ ನನ್ನ ಎದೆಯ ತುಂಬಿತು ಅದರ ಭಾವ ನನಗೆ ಒಲಿದು ಬಾಳು ಧನ್ಯವೆನಿಸಿತು || ಎನ್ನ ಬದುಕು ಭವ್ಯವಾಯ್ತು ಮನದ ಹೂವು ಅರಳಿತು ಮುದುಡಿದ ಮನ ಮಿಡಿದು ಹರುಷ ತುಂಬಿ ಗೆಲುವು ತಂದಿತು || ನೂರು ಆಸೆ ನೂರು ಭಾವ ಚೈತನ್ಯವ ನೀಡಿತು ಭರವಸೆಗಳ ...

ವಿಂಧ್ಯಗಿರಿ ದೇವರು ಕಂದರ್ಪನ ಅವತಾರ ಪಾದಕ್ಕೆ ಕಮಲ ನೆತ್ತಿಗೆ ಚಂದ್ರ, ನಿಂತ ನಿಲುವು ರಾಗವೋ ವಿರಾಗವೋ ರವಿಯೇ ತಾರ ಬುವಿಯೇ ಮಂದ್ರ, ಕೆಳೆಗೆ ಬೆಳೆದ ಗಿಡಮರಗಳ ನಡುವೆ ಊಳುವ ಗಾಳಿಯ ಕರುಣಾಕ್ರಂದ, ಕೊಂಚ ಗದ್ಯ ಇನ್ನೆಲ್ಲ ಪದ್ಯ ಮರ ಹಿಡಿದ ಫಲವಲ್ಲ ಅ...

ಮಿರಿಯಾಲ್ ಮಂಡಿ ಮಿರಿಯಾಲ್ ಮಂಡಿ ಏನೇನ್ ಕಂಡಿ ಮಿರಿಯಾಲ್ ಮಂಡಿ ಕುರುಕಾಯ್ಲ ಬಂಡಿ ಸಾವಿರ ಕಂಡಿ ಬಾಣಲೆ ತಿಂಡಿ ಕರಿಯೋದ್ ಕಂಡಿ ಬಡವನ ಭಾಂಡಿ ಒಡೆಯೋದ್ ಕಂಡಿ ತಿರುಕನ ಥಂಡಿ ಕೊರೆಯೋದ್ ಕಂಡಿ ಸೆಟ್ಟಿಯ ಹುಂಡಿ ಕಟ್ಟೋದ್ ಕಂಡಿ ಹೆಂಡತಿ ಚಂಡಿ ಹಿಡಿಯೋದ...

೧೯೭೨ನೇ ಇಸವಿ ಯಲ್ಲಿ ಬಾಗಲಕೋಟೆಯಲ್ಲಿ ನಾನು ಬಿ.ಎ ಓದುತ್ತಿದ್ದಾಗ, ಒಂದು ಶಾಸ್ತ್ರೀ ಚಾಳದಲ್ಲಿ ರೂಮ್ ಮಾಡಿಕೊಂಡಿದ್ದೆ. ಪರೀಕ್ಷೆ ಹತ್ತಿರ ಬಂದಿದೆ ಎಂದು ಗಾಢವಾಗಿ ಓದುತ್ತಿದ್ದೆ. ದಿಢೀರನೆ ನಮ್ಮ ಕೋಣೆಯ ಬಾಗಿಲು ಶಬ್ಬವಾಯಿತು. ಏನು? ಎಂದು ಬಾಗಿಲ...

ಸಾಮೇರ ಮಠದಾಗ ಚಪ್ಪಲ್ಲು ಮಠಮಾಯಾ ಅಯವತ್ತು ರೂಪಾಯಿ ಗಪ್ಪಗಾರಾ ||ಪಲ್ಲ|| ಬ್ಹಾಳ್ಬಾಳ ಭಕ್ತೀಲಿ ಕೈ ಮುಗುದು ಹೋಗಿದ್ದೆ ಜೋರ್‍ಜೋರು ಚಪ್ಪಲ್ಲು ಮಂಗಮಾಯಾ ಹುಳ್ಳುಳ್ಳ ಹುಣಿಸೆಣ್ಣು ಹಲ್ಲೆಲ್ಲ ಚಳ್ಳಣ್ಣು ಚಂದುಳ್ಳ ನನಭಕುತಿ ಚೂರುಚಾರಾ ||೧|| ಸಾಮೇರ...

“ವೆಂಕಟರಮಣ! ನನಗೆ ಪದ್ಮಾವತಿ ಯಂತಹ ಹೆಂಡತಿ ಕೊಡು” ಎಂದು ಬೇಡಿಕೊಂಡ ಒಬ್ಬ ಯುವ ಭಕ್ತ. “ಯಾಕೆ ನಿನ್ನ ಹೆಂಡತಿ ಕೂಡ ನಿನ್ನ ವಕ್ಷಸ್ಥಳದಲ್ಲಿ ಕೂತಿರಬೇಕಾ?” ಎಂದ ದೇವ. “ಬೇಡ, ದೇವ, ದೇವ! ಅವಳು ನನ್ನ ವಕ್ಷಸ್ಥಲ...

ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ. ಉರಳುವ ಚಕ್ರದಲ್ಲಿ ನರಳುವ ಕರುಳು- ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ; ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ ಬರಿತಲೆಯ ಬರಿಗಾಲ ನಿಜ ಮಾನವ! ಮತ್ತೊ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...