ಕಡಲಿನಾವಿಯನೆತ್ತಿ ತಿರೆಗದನು ಮರೆಮಾಡಿ ಮುಗಿಲ ಮೇಲೆಯೆ ಬೆಳಗುವಿನತೇಜದಂತೆ ಭವಕವಿದ ದುರ್ದಿನದೊಳದರ ಮೇಲಾಡುತಿಹ ರಸದ ತೇಜಕೆ ಜೀವ ಹಂಬಲಿಪುದಿಂತೆ. ಆ ಮುಗಿಲ ಬಿಡಿಸುತಾ ಕಿರಣಗಳಿಗೆಳೆಸೋ೦ಕ ತಂದು ಕತ್ತಲ ಕಳೆವ ಶುಭಕಲ್ಪಗಳನು ಸುಂದರಾಗಮಕಲಿತ ದೇವೋತ್ಸವಂಗಳನು ಸರಸಸಜ್ಜನಗೋಷ್ಠಿ ಸಲ್ಲಾಪಗಳನು ಆದರಿಸದೀ ನೆಲದ ಮನದ...

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿದ್ಯಾರ್ಥಿಯಾದ ನಾನು ಸಾಹಿತ್ಯ ಕಲಿತದ್ದು ಹಳೆಯ ವಿಧಾನದಲ್ಲಿ. ಎಂದರೆ, ಕವಿತೆಯೊಂದು ಪಠ್ಯ ಪುಸ್ತಕದಲ್ಲಿದ್ದರೆ ಮೊದಲು ಕವಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು, ನಂತರ ಕವಿತೆಯ ಚರಣಗಳನ್ನು ಓದುತ್ತ, ಅದರ ಶಬ...

ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ, ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ ಅವರಿಗೆ ತಿಳಿಯುವುದಿಲ್ಲ. ಹಾಗೆ ನಾಲ್ಕು ಬಾರಿ ಭಿ...

ಚಿವೂ ಚಿವೂ ಚಿವೂ ಆಹಾ… ಎಂಥ ಮಧುರ ಧ್ವನಿಯಿದು! ಬರುತಲಿಹುದು ಯಾವ ಕಡೆಯೋ ಕೇಳಲೆನಿತು ತನಿಯಿದು! ರಾಗ ತಾಳ ಲಯಕೆ ಬೆಸೆದ ನಿನ್ನ ಗಾನ ಸೊಗಸಿದೆ ತಾಳವಿಲ್ಲ ತಬಲವಿಲ್ಲ ಅದರದರ ಲಿಂಪಿದೆ || ಹೂವು ಎಲೆಯ ಮರೆಯ ತಾಣ ನಿನ್ನ ಅರಮನೆ ಏನೆ? ಸುತ್ತಿ...

ಯಾವುದು ಇಲ್ಲವೆಂದು ನಾನು ಕೂಗಿದ್ದು? ಪಬ್ಲಿಕ್ಕಾಗಿ ಕೂಗಿ, ರಣಾರಣ ರೇಗಿ ಎಲ್ಲರೆದುರು ಬೀಗಿದ್ದು? “ನನ್ನ ಬುದ್ಧಿ ನನ್ನ ಉತ್ತರ ಮುಖಿ, ಅಳೆದ ಸತ್ಯ ದಡ ದೂರದ ಮುಳುಗು ತತ್ವವಾದರೂ ಸರಿ ಅದರಲ್ಲೇ ಪೂರ್ತಿ ಸುಖಿ, ನೋವಿಗೊಂದು ರಕ್ಷಯೆಂದು ನಂ...

ಹೆಸರು ಕುಟ್ಟಿಚಾತ ಮಹಾ ಕೆಟ್ಟ ಬೂತ ಒಂದು ದಿನ ಕಾಡಿನಲ್ಲಿ ತಿರುಗಾಡುತಿರುವಲ್ಲಿ ಕಂಡನೊಬ್ಬ ಬಡಗಿ ಕುಳಿತಿದ್ದನಡಗಿ ಅವನ ಎಳೆದು ಹೊರಗೆ ಬೂತ ಹೇಳಿತು ಹೀಗೆ ಎಲವೊ ನರ ಪ್ರಾಣಿ ಮಾಡು ಒಂದು ದೋಣಿ ಇಲ್ಲದಿದ್ದರೆ ನಿನ್ನ ಬೇಯಿಸುವೆನು ಅನ್ನ ಗಡಗಡನೆ ನಡ...

ಶ್ರೀ ವ್ಯಾಸರಾಯ ಬಲ್ಲಾಳರ ಕಾದಂಬರಿಗಳನ್ನು ಅನಕೃ ಸಂಪ್ರದಾಯಕ್ಕೆ ಸೇರಿಸುತ್ತಾರೆ. ಅನಕೃರ ಸಂಭಾಷಣೆಯ ಬೆಡಗು, ಸುಕುಮಾರತೆ, ರೋಚಕತೆಗಳ ಕೆಲವಂಶ ಬಲ್ಲಾಳರ ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ಕಾರಣದಿಂದ ಈ ಅಭಿಪ್ರಾಯ ಅವರದಾದರೆ ಅದನ್ನು ಪೂರ್ತಿ ಒಪ್ಪ...

ಹುಡುಗಿಯೊಬ್ಬಳು ಗೆಳತಿಯರ ಬಳಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದಳು – “ನನ್ನ ಬಾಯ್ ಫ್ರೆಂಡ್ ಶಿವು ಇದ್ದಾನಲ್ಲಾ ಅವನನ್ನು ಕೈತೊಳೆದು ಮುಟ್ಟಬೇಕು..” ಅದಕ್ಕೆ ಅವಳ ಗೆಳತಿ ಹೇಳಿದ್ಲು – &#822...

ರತುನ ದಿಂದ ರತುನ ಕಂಡೆ ಕುತನಿ ಗಾದಿ ಕಂಡೆನೆ ತಂಪು ತನನ ಸಂಪು ಪವನ ನಿವುಳ ಹವುಳವಾದೆನೆ ||೧|| ಮುಗಿಲ ಗಾನ ನಗೆಯ ಯಾನ ಹಗೆಯ ಹೊಗೆಯ ನಂದಿಸಿ ನೆಲದ ತಾಳ ಪಕ್ಷಿ ಮೇಳ ವೃಕ್ಷ ವೃಕ್ಷ ತುಂಬಿಸಿ ||೨|| ನೋಡು ತೆಂಗು ನೋಡಿ ನಂಬು ಇಹಕೆ ಮಹಕೆ ಹೊಂದಿದೆ ...

ಹೆಂಡತಿ ತರುಣಿ ಯಾಗಿದ್ದಾಗ ಅವಳು ಅವನ ಜೊತೆಯಲ್ಲೇ ಇರಬೇಕಿತ್ತು. ಎಲ್ಲಿಗೂ ಒಬ್ಬಳನ್ನೇ ಹೋಗಲು ಬಿಡುತ್ತಿರಲಿಲ್ಲ. ಯೌವ್ವನ ಧಾಟಿ ವೃದ್ಯಾಪ್ಯಕ್ಕೆ ಬಂದೊಡನೆ “ಈಗ ನೀನು ಸ್ವಾತಂತ್ರಳು” ಎಂದ ಪತಿ. ಸ್ವಾತಂತ್ರ್ಯ ಏನು ಎಂದು ತಿಳಿಯದ ಮ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...