ಬೂತವೂ ಬಡಗಿಯೂ

ಹೆಸರು ಕುಟ್ಟಿಚಾತ
ಮಹಾ ಕೆಟ್ಟ ಬೂತ

ಒಂದು ದಿನ ಕಾಡಿನಲ್ಲಿ
ತಿರುಗಾಡುತಿರುವಲ್ಲಿ

ಕಂಡನೊಬ್ಬ ಬಡಗಿ
ಕುಳಿತಿದ್ದನಡಗಿ

ಅವನ ಎಳೆದು ಹೊರಗೆ
ಬೂತ ಹೇಳಿತು ಹೀಗೆ

ಎಲವೊ ನರ ಪ್ರಾಣಿ
ಮಾಡು ಒಂದು ದೋಣಿ

ಇಲ್ಲದಿದ್ದರೆ ನಿನ್ನ
ಬೇಯಿಸುವೆನು ಅನ್ನ

ಗಡಗಡನೆ ನಡುಗಿ
ಕೆತ್ತತೊಡಗಿದ ಬಡಗಿ

ತೋರಿಸಲು ಕೈಚಳಕ
ಆಯಿತು ಮನಮೋಹಕ

ಆಹಾ ಎಂದಿತು ಬೂತ
ದೊಣಿ ಮಜಬೂತ

ಒಡನೆ ಇಳಿಸುವೆ ನೀರಿಗೆ
ಎಂದೊಯ್ದಿತು ಕಡಲಿಗೆ

ಬಿಟ್ಟು ಮಳಲ ತೀರ
ಸಾಗಿತೆಷ್ಟೋ ದೂರ

ಅಷ್ಟರಲ್ಲಿ ನೀರು ಒಳಗೆ
ಯಾಕೆ ಎಂದು ನೋಡೆ ಕೆಳಗೆ

ಅರರೆ! ಏನಾಯಿತು
ಆಗುವುದೆ ಆಯಿತು!

ಕತೆಗೊಂದು ನೀತಿ
ಬೇಕಾದರೆ ಐತಿ

ಬೂತ ಬೂತವೇ
ಬಡಗಿ ಬಡಗಿಯೇ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲ್ಲಾಳರ ಭಾವಲೋಕ
Next post ಮಾತು

ಸಣ್ಣ ಕತೆ

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…