ಜೀವ ಭಾವ ಬೆರೆತ ಗಾನ

ಜೀವ ಭಾವ ಬೆರೆತಗಾನ
ನನ್ನ ಎದೆಯ ತುಂಬಿತು
ಅದರ ಭಾವ ನನಗೆ ಒಲಿದು
ಬಾಳು ಧನ್ಯವೆನಿಸಿತು ||

ಎನ್ನ ಬದುಕು ಭವ್ಯವಾಯ್ತು
ಮನದ ಹೂವು ಅರಳಿತು
ಮುದುಡಿದ ಮನ ಮಿಡಿದು
ಹರುಷ ತುಂಬಿ ಗೆಲುವು ತಂದಿತು ||

ನೂರು ಆಸೆ ನೂರು ಭಾವ
ಚೈತನ್ಯವ ನೀಡಿತು
ಭರವಸೆಗಳ ಬೆಳಕಿನಲ್ಲಿ
ಆತ್ಮ ಸ್ಥೈರ್ಯ ನಲೆಸಿತು ||

ಯಾಕೋ ಏನೋ ಅಂತು ನನಗೆ
ನಿಮ್ಮ ಅನುರಾಗ ಸೆರೆಯಲಿ
ಸ್ನೇಹ ಬಾಂಧವ್ಯ ಬೆಸೆದು
ನಿಮ್ಮ ಋಣಿ ಎಂತು ಹರಿಸಿತು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದನಶಿಲ್ಪ
Next post ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಸಣ್ಣ ಕತೆ

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…