ಮಿರಿಯಾಲ್ ಮಂಡಿ
ಮಿರಿಯಾಲ್ ಮಂಡಿ

ಏನೇನ್ ಕಂಡಿ
ಮಿರಿಯಾಲ್ ಮಂಡಿ

ಕುರುಕಾಯ್ಲ ಬಂಡಿ
ಸಾವಿರ ಕಂಡಿ

ಬಾಣಲೆ ತಿಂಡಿ
ಕರಿಯೋದ್ ಕಂಡಿ

ಬಡವನ ಭಾಂಡಿ
ಒಡೆಯೋದ್ ಕಂಡಿ

ತಿರುಕನ ಥಂಡಿ
ಕೊರೆಯೋದ್ ಕಂಡಿ

ಸೆಟ್ಟಿಯ ಹುಂಡಿ
ಕಟ್ಟೋದ್ ಕಂಡಿ

ಹೆಂಡತಿ ಚಂಡಿ
ಹಿಡಿಯೋದ್ ಕಂಡಿ

ಗಂಡನ ಮಂಡಿ
ತರಿಯೋದ್ ಕಂಡಿ

ಕುಪ್ಪಸ ಗುಂಡಿ
ಒಪ್ಪಿಸಿ ಕೊಂಡಿ

ಲಂಗದ ಕೊಂಡಿ
ತಗ್ಗಿಸಿ ಕೊಂಡಿ

ಕನಕನ ಕಿಂಡಿ
ಧ್ಯಾನಿಸಿ ಕಿಂಡಿ

ಮಿರಿಯಾಲ್ ಮಂಡಿ
ಮಿರಿಯಾಲ್ ಮಂಡಿ

ಏನೇನ್ ಕಂಡಿ
ಮಿರಿಯಾಲ್ ಮಂಡಿ
*****