ಚಿಂತಲ್ ಬಸ್ತಿ ಚಿಂತಲ್ ಬಸ್ತಿ ಬಡವರ ಬಗ್ಗರ ಅಗ್ಗದ ಆಸ್ತಿ ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ ರಾಮುಡು ಭೀಮುಡು ಪರಮೇಶ್ವರುಡು ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ ಎಲ್ಲರಿಗೂ ಇದು ಒಂದೇ ಮಾಡು ಇರುವಂತೆಲ್ಲರಿಗೊಬ್ಬನೆ ಅಲ್ಲಾ! ಆಚೆಗೆ ಬಯಲು...
ಕೆಲಸವಿದ್ದವರು ಮಾತಾಡುತ್ತಾರೆ. ದಿನವೂ ಅನೇಕ ಕಾಗದ ಪತ್ರಗಳಿಗೆ ಸಹಿ ಹಾಕುವುದರಿಂದ ಬಹಳ ಬೇಗನೆ ಸುಸ್ತಾಗುತ್ತಾರೆ. ಪ್ರತಿ ಮುಂಜಾನೆ ನುಣುಪಾಗಿ ಗಡ್ಡ ಹರೆಯುವ ಇವರ ಮುಂದಿನ ಜೇಬಿನಲ್ಲಿ ಸೀಸನ್ ಟಿಕೇಟು ಹಿಂದಿನದರಲ್ಲಿ ಬಾಚಣಿಗೆ ಇಲ್ಲದವರು ಮೌನವಾಗಿದ್ದಾರೆ....
ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ- ವೆಂದು ಹರಡಿದೆ ಆ ಮಹಾನಗರದ ಉದ್ದಗಲ ತುಂಬಿ ಬೀದಿಗಳ ತುಂಬಿ ಕೇರಿಗಳ ಒಳಗೊಳುವೆನೆಂದು ನನ್ನ ತಳಮಳದಲ್ಲಿ ಅದರ ಕಳವಳ ತಲ್ಲಣಗೊಳ್ಳುತ್ತ ಕರೆದು ಕೈ ಚಾಚಿ ತೆರೆದು ತೆರೆಬಿಚ್ಚಿ ತೆರೆದರೂ...
ಹೊತ್ತು ಬೇಗನೆ ಮುಳುಗುವುದೆಂದರೆ ಥಂಡಿ ಗಾಳಿ ಬೀಸುವುದೆಂದರೆ ಸೀತಾಫಲ ಮಂಡಿಗೆ ಗಾಡಿಗಳು ಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿ ಮುಂಜಾವದ ಮುಸುಕಿನಲ್ಲಿ ಎಲ್ಲಿಂದಲೊ ಯಾರಿಗೆ ಗೊತ್ತು ಎಲ್ಲರಿಗೂ ನಿದ್ದೆಯ ಮತ್ತು ಎದ್ದು ನೋಡಿದರೆ ಮುಂದಿನ...
ನಂತರ ಬಂದೆವು ನಾವು ಹೈದರಾಬಾದಿಗೆ ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು ರಾತ್ರಿ ಧಗೆ ಕಾರಲೆಂದು ಹಗಲೆಲ್ಲ ಕಾದು ಕೆಂಪಾಗಿರುವ ಕಲ್ಲು ಬಂಡೆಗಳು ಅವುಗಳ ಕೆಳಗೆ ಮಾತ್ರ ತುಸು ನೆಳಲು ಕ್ಲಾಕ್ ಟವರಿನ ಕಾಗೆ ನುಡಿಯಿತೊಂದು ಒಗಟು...
ಹೈದರಾಬಾದಿನಲ್ಲಿ ಜೂನ್ ಎಂದೊಡನೆ ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ ತಂಪು ಪಾನೀಯಗಳ ಸುಖ ಮಾತಾಡುವುದಕ್ಕೆ ನೋಡುವುದಕ್ಕೆ ಅವರವರು ಬಯಸುವ ಮುಖ ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ ಆ ಗಾಳಿಯಲ್ಲೆಲ್ಲೋ ತೆರೆಗಳ ತೇವ ಶಾಖದೊಂದಿಗೆ ಸಮ್ಮಿಳಿಸಿದ್ದು ಎಷ್ಟೋ...
ನೀರಿಲ್ಲ ನೆರಳಿಲ್ಲ ಹೊರಗೆ ಕಾಲಿಡುವಂತಿಲ್ಲ ಅಂಥ ಕಡು ಬೇಸಗೆಯಲ್ಲಿ ಹಿಮಾಲಯದಿಂದೊಬ್ಬ ಹಿಮ ಮಾನವ ಹೈದರಾಬಾದಿಗೆ ಬಂದು ಕುಳಿತನು ಒಂದು ದೊಡ್ಡ ಬಂಡೆಯ ಮೇಲೆ ಅದೇನು ವಿಚಿತ್ರ! ತಣ್ಣಗಾಯಿತು ಹವೆ ಒಮ್ಮೆಲೆ ಹುಲ್ಲು ಕಮರಿದಲ್ಲಿ ನೆಲ...
ದೂರದ ಮೂಸಿಹೊಳೆಯ ಸಂಕದ ಮೇಲೆ ಸಿಕಂದರಾಬಾದಿನಿಂದ ಫಲಕ್‌ನುಮಾಗೆ ನಿಧಾನವಾಗಿ ಗಮಿಸುತ್ತಿರುವ ಲೋಕಲ್‌ಗಾಡಿಯನ್ನು ನೋಡಿದಾಗ ನನಗೆ ಕೆಲವೊಮ್ಮೆ ನೆನಪಾಗುವುದು- ಮಳೆಗಾಲದಲ್ಲಿ ನಮ್ಮೂರ ಅಡಿಕೆ ತೋಟಗಳಲ್ಲಿ ಕಾಣಿಸುವ ಸಾವಿರಕಾಲಿನ ಬಂಡಿಚೋರಟೆಗಳು: ತಿರುವುಗಳನ್ನು ಅವು ಹೇಗೆ ಬಳಸುತ್ತವೆ, ಸರಳ...