ಆಡು ಬಾಬಾ ಕೂಡು ಬಾಬಾ

ಆಡು ಬಾಬಾ ಕೂಡು ಬಾಬಾ
ಬೆಳಗಿನಂಗಳ ಹೊಳೆಯಲಿ
ಹಾಡು ಬಾಬಾ ನೀಡು ಬಾಬಾ
ನಿಜದ ನಿರ್‍ಮಲ ಕೊಳದಲಿ ||೧||

ಎತ್ತ ನೋಡಲಿ ಸುತ್ತ ಓಡಲಿ
ಒಲವಿನಮೃತ ಮಿಲನಜಂ
ಸತ್ಯ ಸೋಂಸೋಂ ತೋಂತೋಂ
ತನನ ತಂತನ ತನನ ಓಂ ||೨||

ಗಾಳಿ ಬಿಂಗರಿ ಮುಗಿಲ ಸಿಂಗರಿ
ತುಂಬಿ ತಿರುಗಿದೆ ತಿರ್ರತೋಂ
ಆತ್ಮ ರತುನಾ ಮೌನ ಜತನಾ
ಚಕ್ರ ತಿರುಗಿದೆ ಭರ್ರಭೋಂ ||೩||

ಭುವನ ಲೀಲಾ ಶಿವನ ಲೋಲಾ
ಆತ್ಮ ಕಾಲಂ ನಾಟಕಂ
ಕಲ್ಪ ಕಲ್ಪಂ ಕಾವ್ಯ ತಲ್ಪಂ
ಕಲ್ಪ ವೃಕ್ಷದ ರೂಪಕಂ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಹಿತ್ಯಾಭ್ಯಾಸಿ
Next post ಯಾರ ಮನೆಗೆ

ಸಣ್ಣ ಕತೆ