ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವನೊಬ್ಬ ಕಾಲೇಜ್ ಹುಡುಗ, ಷೇಕ್ಸ್ ಪಿಯರಿನ ರೋಮಿಯೋ ಜೂಲಿಯೆಟ್ ಕೂಲಂಕುಷವಾಗಿ ಓದಿದ. ಈಗ ಅವನ ಮನಸ್ಸು ಪ್ರೀತಿ ಪ್ರೇಮದಿಂದ ತುಂಬಿ ವಿಶಿಷ್ಟ ಪ್ರೇಮ ಪತ್ರ ಬರೆಯಲಾರಂಭಿಸಿದ. ಅದು ಪುಟ ಗಟ್ಟಲೆ ಆಯಿತು. ಅದನ್ನು ಒಮ್ಮೆ ಸ್ನೇಹಿತೆಗೆ ಓದಲು ಕೊಟ್ಟ.
“ನನ್ನಲ್ಲಿ ಇಷ್ಟು ಪ್ರೀತಿನಾ?” ಎಂದಳು.
“ಛೇ! ನಾನು ಪ್ರೇಮ ಪತ್ರ ಬರೆಯುವ ಸಾಹಿತ್ಯಾಭ್ಯಾಸ ಮಾಡುತ್ತಿರುವೆ”! ಎಂದ.
ಹುಡುಗಿ ಕಲ್ಲಿನ ಪ್ರತಿಮೆಯಾದಳು.
*****