ಅವತಾರ

ಮುಕ್ಕಣ್ಣಶೆಟ್ಟಿ ದಯವಿಟ್ಟು ಕೊಟ್ಟ ಅಕ್ಕಿಯಲ್ಲಿ
ಚಿಕ್ಕ ಚಿಕ್ಕ ಸಹಸ್ರ ಲಿಂಗಗಳು;
ಅಕ್ಕಿಯಷ್ಟೆ ಬಿಳಿ
ಉಕ್ಕಿನಷ್ಟು ಭಾರ
ಬಿಕ್ಕಿದರೆ ಹೇಗೆ ಚಿಕ್ಕ ಆಲಿಕಲ್ಲನ್ನು ಮುಗಿಲು
ಹಾಗೆ
ಮಣಿಹರಳು!

ಶೆಟ್ಟಿ ಶಿವಭಕ್ತ
ಜೊತೆಗೆ ಕವಿರಕ್ತ
ಈಗ ಸರ್ಕಾರವೂ ಕುಲುಕಿ ಅವನ ಶುಭಹಸ್ತ
ಕೂಲಿಹುಡುಗನ ಕಣ್ಣ ಹನಿಗಿಂತ ಕಿರಿದಾಗಿ
ಸಾಯುವವನ ಕಡ್ಡಿದನಿಗಿಂತ ತೆಳುವಾಗಿ
ನಯವಾಗಿ
ದಯವಾಗಿ
ಪ್ರಜಾಪ್ರಭುತ್ವಕ್ಕೇ ಜಯವಾಗಿ

ಫಳ ಫಳ ಹೊಳೆಯುವ
ಕೊಯಮತ್ತೂರು ಸಣ್ಣದಲ್ಲೂ
ಮಿಣ್ಣಗೆ
ಥಣ್ಣಗೆ
ಮನುನಿರ್‍ಮಿತ ಎಂಬಷ್ಟು ನುಣ್ಣಗೆ
ಕಣ್ಣಿಗೇ ಕಾಣದ
ಸಣ್ಣ ಶಿಲೆಗಳು.

ಆಹಾರದಲ್ಲೂ ದೇವರು ದಯಮಾಡಿದ್ದು ಕಂಡು
ಕಣ್ಣಲ್ಲಿ ನೀರು ಬಂತು,
ಅನ್ನಮಾರ್ಗದಲ್ಲೂ ಹಾಯುವ ಅವನ ಸೂಕ್ಷ್ಮಕ್ಕೆ
ಮೈ ಜುಮ್ಮೆಂದಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯ
Next post ನಿನ್ನ ನೆನಪು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…