ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿಕ್ಯ ನಿಹಿತವೋ ಪಾದ ಮೂಡದ ಹಾದಿ ತುಳಿಯುತಿಹುದು. ಒಂದೆ ಎರಡಾಗ...

ಮೂಡಿ ಬಂದ ಹೊಸ ವರುಷ ಹೊಸ ಹರುಷ ನೀಡಲಿ ಹಳೆಯದರಲಿ ಒಳಿತನುಳಿಸಿ ಹೊಸ ಗೀತೆ ಹಾಡಲಿ|| ಒಣಗಿ ನಿಂತ ವನರಾಶಿಗೆ ಹಸಿರೋಕುಳಿ ಚೆಲ್ಲಲಿ ಬರಡಾಗಿಹ ಈ ಬುವಿಗೆ ಹನಿಯೆರಡ ಎರೆಯಲಿ ಎಲ್ಲರೆದೆಯ ಹೂದೋಟದಿ ನವ ಕುಸುಮಗಳರಳಿಸಿ ಭ್ರಾತೃತ್ವದ ಸಿರಿಗಂಪನು ದಿಕ್‌ದ...

ಮೂಲ: ವಿ ಎಸ್ ಖಾಂಡೇಕರ ತೆಂಗಿನ ಗರಿಗಳ ಗುಡಿಸಲಿನ ಮುಂದೆ ಕುಳಿತು ಅಂತೂನನು ದಾರಿ ಕಾಯುತ್ತಿದ್ದ. ಅಂದವಾದ ಚಂದ್ರಕಲೆಯನ್ನು ತನ್ನ ಆಟಿಗೆಯನ್ನಾಗಿ ಮಾಡಿಕೊಳ್ಳಲು ಹವಣಿಸುವ ಬಾಲಕನ ಚೀರಾಟದಂತೆ ದೂರಿನಿಂದ ಸಮುದ್ರದ ತೆರೆಗಳ ಸಪ್ಪಳವು ಕೇಳಬರುತ್ತಿತ್...

ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ) ಎಚ್ಚರಾಯಿತು ನಮಗೆ ಅದೆಷ್ಟು ಸಹಸ್ರವರ್ಷ ನಿದ್ದೆಯಿಂದಲೊ ಏನೊ ತಿಳಿಯಲಿಲ್ಲ. ಹದ್ದು ಹಾರಿತು ಮತ್ತೆ ಬಿಸಿಲಿನಲ್ಲಿ ಹಿಂದೆಂದಿನಂತೆ ಅಂತ ಅನಿಸಲಿಲ್ಲ. *****...

ಭೂದಾನದ ವಿಷಯಕ್ಕೆ ಬಂದು ಭೂಸುಧಾರಣೆ ಸಂಗತಿ ತಿಳಿಸಿದ್ದಾಯ್ತು. ಈಗ ಅನೇಕರಿಗೆ ಗೊತ್ತಾಗಿದೆ `ಸಂಗಪ್ಪನ ಭೂಸುಧಾರಣೆ’ ಹೇಗಾಯ್ತು ಅಂತ. ಆದರೆ ಅದಕ್ಕೆ ಯಾರೇನೂ ಮಾಡಲಿಲ್ಲ. ಈ ಮಾದರಿ ಮನುಷ್ಯನನ್ನು ಇನ್ನೂ ಅನೇಕರು ಅನುಸರಿಸಿದರು. ಆದ್ದರಿಂದಲ...

ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು! ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು! ನನೆ ಕೊನೆಯಿಲ್ಲದ, ಚಿರಂಜೀವಿಯಾದ ನೀರು! ಮುಗಿಲನಣಕಿಸುವ ದಟ್ಟನೀಲಿಯಾದ ನೀರು! ಅಹಾ! ನೀರೆ! ನಿನ್ನ ಸೌಭಾಗ್ಯವೇ ಸೌಭಾಗ್ಯ! ನಿನ್ನ ಚಿರಜೀವಿಪಟ್ಟವೇ ಪಟ್ಟ! ತಬ್ಬುತಿರು...

ಒಂದಂಕಿ ಗೊಳಗೊಳಕಿ ಯಾಡಂಕಿ ಮುಳಗಳಿಕಿ ಮೂರಂಕಿ ಮುತ್ತೈದಿ ಕೇಳು ಗುರುವೆ ನಾಕ೦ಕಿ ನೆಲ್ಲಕ್ಕಿ ಐದ೦ಕಿ ಪಲ್ಲಕ್ಕಿ ಪಂಚಲಿಂಗದ ಪಾದಾ ತೋರು ಗುರುವೆ ಸರದಾರ ದೊರಿಸಾಮಿ ಮುಕ್ಕಣ್ಣ ಗುರುಸಾಮಿ ಎಲ್ಲಿ ಬಿಟ್ಟೆಲ್ಲೀಗೆ ಪಾರೋತಿನಾ ಚಿನ್ನಿ ಸಕ್ಕರಿ ಚಲುವಿ ಚ...

ಹಣದ ಮುದ್ರಣ ಅಥವಾ ನೋಟು ಬಿಡುಗಡೆಯು ವಿತ್ತೀಯ ಪ್ರಾಧಿಕಾರದ ಕಾರ್ಯವಾಗಿದ್ದು ಅದನ್ನು ಕೇಂದ್ರ ಬ್ಯಾಂಕು ನಿರ್‍ವಹಿಸುತ್ತದೆ. ಪ್ರತಿಯೊಂದು ದೇಶವು ಒಂದು ಕೇಂದ್ರ ಬ್ಯಾಂಕನ್ನು ಹೊಂದಿದ್ದು ಅದರ ಮುಖ್ಯಸ್ಥನನ್ನು ಗವರ್‍ನರ್ ಎಂದು ಕರೆಯಲಾಗುತ್ತದೆ. ...

ಎನಿತುಕಾಲ ಹುದುಗಿ ಕೊಳೆವುದು ಎನಿತುಕಾಲ ನೆಲದಲಡಗಿ, ಕೊಳಚೆಯಾಗಿ ಕಳೆವುದು? ಮಳೆಯ ಹನಿಯು ತಟ್ಟಿ ಕರೆದರೂ ಬೆಳಕ ಕಿರಣ ಇಣಿಕಿ ನಡೆದರೂ ಮನದ ಆಸೆ ಕೊನರದಿಹುದು ಕೊಳೆಕೊಳೆವುದು ಕಸದಲಿ ಹಿರಿಯ ಕನಸ ಕಂಡಿತಾದರೂ ಚಿಗಿದು ಬೆಳೆಯ ಬಯಸಿತಾದರೂ ಕಸದ ರಾಶಿ ...

ಅಹಾ ನನ್ನ ಚೆಂದದ! ಚಂದಿರೆಯೆ! ಕುಂದದ ಕುಡಿಮಲರೆ! ಅಹಾ! ನಾನು ಕೈಕೊಂಡ ಜಿದ್ದೇ! ನನ್ನ ಮೈಗೊಂಡ ಮುದ್ದೆ! ಅಧರದಲ್ಲಿ ಮುದ್ದಾಗಿ ಉದರದಲ್ಲಿ ಮುತ್ತಾಗಿ ಇದಿರು ಮೂರ್‍ತಿಗೊಂಡು ನಿಂತ ಜೀವದ ಹೂವೇ! ಬ್ರಹ್ಮಾಂಡವನೊಳಗೊಂಡ, ನಾನು ಹೊತ್ತು ಹೆತ್ತ-ಪಿಂಡವ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...