Home / ಕವನ / ಕವಿತೆ / ಅಹಾ! ನೀರೆ! – ೧

ಅಹಾ! ನೀರೆ! – ೧

ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು!
ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು!
ನನೆ ಕೊನೆಯಿಲ್ಲದ, ಚಿರಂಜೀವಿಯಾದ ನೀರು!
ಮುಗಿಲನಣಕಿಸುವ ದಟ್ಟನೀಲಿಯಾದ ನೀರು!
ಅಹಾ! ನೀರೆ! ನಿನ್ನ ಸೌಭಾಗ್ಯವೇ ಸೌಭಾಗ್ಯ!
ನಿನ್ನ ಚಿರಜೀವಿಪಟ್ಟವೇ ಪಟ್ಟ!

ತಬ್ಬುತಿರುವಿ ಬ್ರಹ್ಮಾಂಡವನೆಲ್ಲ ಸುತ್ತಿ!
ನಿನ್ನ ತೊಳ್‌ತಕ್ಕೆಗೆ ಸಿಕ್ಕಿ ಪುಡಿಪುಡಿಯಾದವು ಖಂಡಖಂಡಗಳು!
ಇಂದ್ರನು ಬಂದಿಲ್ಲಿ ಮಳೆಗರೆಯಲಾರ:
ಮಳೆಯ ಮೂಲಮಂತ್ರವನು ಕಲಿಯುವನಿಲ್ಲಿ ಬಂದು!
ವಾಯುವು ಬಂದಿಲ್ಲಿ ಬೀಸಲಾರ,-
ಈಸಬಹುದು ಬೇಕಾದರೆ ಮನಬಂದತ್ತ!
ಅಹಾ! ನೀರೆ! ಅಂತಪಾರವಿಲ್ಲದ ನೀರೆ!
ದೇವರು ನಿನ್ನಳಿಯ! ದೇವತೆಗಳು ನಿನ್ನಣುಗುರು!
ಸರಿಯಿಲ್ಲ ನಿನ್ನ ವೈಭವಕೆ! ಸಾಟಿಯಿಲ್ಲ ನಿನ್ನ ಮೈಸಿರಿಗೆ!

ಅಹಾ! ನೀರೆ! ದಿಕ್ಕಿಲ್ಲದ ಮಿಕ್ಕಿಲ್ಲದ ನೀರೆ!
ಯಾರಲ್ಲಿ ನಿಂತಿತು ನಿನ್ನ ನೀರು?
ಯಾರೆದೆಯನ್ನು ಹರಿಸಲಿಲ್ಲ ನೀರು ನೀರಾಗಿ?
ಸಾವಿಲ್ಲ ನೋವಿಲ್ಲ ನಿನಗೆ,-
ಮರಣದಂಧ ಹರಣಗಳು ಚರಿಸುತಿಹವು
ನಿನ್ನ ತಿಮಿಂಗಿಲ ತಿಮಿರೋದಕದಲ್ಲಿ,
ಪ್ರಳಯಕಾಲದಿ ಎದ್ದೇಳುವವು!
ಲಾಲನೆ-ಪಾಲನೆಯಿಲ್ಲ ನಿನಗೆ,-
ನಿನ್ನ ಕ್ಷಾರೋದಕದಲ್ಲಿ ಪವಡಿಸಿದ ಕೀರಸಾಗರಶಾಯಿ,-
ಸೃಷ್ಟಿಪಾಲಕ ತಾನು!
ಹುಟ್ಟಿಲ್ಲ ಮುಟ್ಟಿಲ್ಲ ನಿನಗೆ,-
ಮತ್ಸ್ಯಕೂರ್ಮಗಳಾಗಿ ನಿನ್ನ ತೊಡೆಯಲಾಡಿದ ದೇವ-
ಸೃಷ್ಟಿ ಕರ್ತನು ತಾನು!
ತ್ರಿಪುಟಿರಹಿತನಾಗಿರುವೆ, ಓ! ಸಮುದ್ರರಾಜ!
ಓ! ಸ್ವಯಂಭೂ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...