ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿಕ್ಯ ನಿಹಿತವೋ ಪಾದ ಮೂಡದ ಹಾದಿ ತುಳಿಯುತಿಹುದು. ಒಂದೆ ಎರಡಾಗ...

ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು ಎಲ್ಲ ಕ್ರೌರ್ಯ ನಾಚುವಂತೆ ಇಂಥ ತಪ್ಪಿಗೆ ಒಂದು ಏಟು ನೀನು ಕೊಟ್...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟ...

ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ) ಬಂಧಿಸಿಕೊಂಡ ಅವನು ತನ್ನ ತಾನೇ ಒಂದು ಕೋಟೆಯೊಳಗೆ ಶರಣಾದ ಗತಯುಗದ ಗ್ರಂಥಗಳಿಗೆ. ತನ್ನನ್ನು ತಾನೇ ತಿಳಿದುಕೊಳ್ಳುವ ಯತ್ನ ಮರೆತುಬಿಡಲು ಅವನಿಗಿದ್ದ ದಾರಿ ಇದೊಂದೆ. *****...

ಹಿಂದಿನ ಅಧ್ಯಾಯ ಬರೆದು ಮುಗಿಸಿದಾಗ ಮನಸ್ಸಿನಲ್ಲಿ ದುಗುಡ ತುಂಬಿದೆ. ಯಾಕೆಂದರೆ ಅದರ ಹಿಂದಿರುವ ಕ್ರೌರ್ಯ ನಮ್ಮ ದೇಶದ ಒಂದು ದುರಂತ ಅಧ್ಯಾಯ. ಇದರರ್ಥ ನನ್ನ ಬರವಣಿಗೇನ ನಾನೇ ಹೊಗಳಿಕೊಳ್ತಿದ್ದೇನೆ ಅಂತ ಖಂಡಿತ ಅಲ್ಲ. ದುರಂತ ಅಧ್ಯಾಯದ ಕ್ರೌರ್ಯದ ಸ...

ಮಧ್ಯರಾತ್ರಿಯಲ್ಲಿ, ಭೂಮಧ್ಯಸಮುದ್ರದ ಮಧ್ಯದಲ್ಲಿ ತೇಲುತಿಹ ಹಡಗದಲ್ಲಿ ನಿದ್ರಿಸುತ ಸವಿಗನಸು ಕಂಡು ಕಣ್ದೆರೆದು ನೋಡೆ,- ಆಹಾ! ಎನಿತು ನಿಚ್ಚಳವಿಹುದು! ನೆರೆದಿಹುದು ಮುಗಿಲಿನಲ್ಲಿ ತಾರೆಗಳ ನಿಬ್ಬಣವು. ಕೋಟಿ ನಕ್ಷತ್ರಗಳು ಕಣ್ಣುಬಿಡುತಿವೆ ನಭದಿ: ಬ...

ಗುರುಯೋಗಿ ಶಿವಯೋಗಿ ಹರಯೋಗಿ ಶಿವತಂದೆ ನೀಬ೦ದ ಈ ಭುವನ ಕೋಟಿಲಿ೦ಗಾ ನೀನಿಟ್ಟ ಹೆಜ್ಜೆಯಲಿ ಕೈಲಾಸ ಕುಣಿದಾವು ವೇದ ಆಗಮ ಲಾಸ್ಯ ವಿಶ್ವಲಿಂಗಾ ನೋಡಿಲ್ಲಿ ಗುಳೆಯೆದ್ದು ಓಡ್ಯಾವು ಹೆಗ್ಗೂಳಿ ಶಿವಶಿವಾ ಓಂ ನಮೋ ನಮಃ ಶಿವಾಯಾ ಬಂತಯ್ಯಾ ಶಿವರಾತ್ರಿ ಹೋತಯ್ಯ...

ಅಧ್ಯಾಯ ಹದಿನೈದು ಅರವತ್ತರ ದಶಕ ಆರಂಭವಾಗುವವರೆಗೂ ಭಾರತೀಯ ಚಿತ್ರರಂಗ ಕಪ್ಪು-ಬಿಳುಪಿನ ಯುಗವೇ ಆಗಿತ್ತು. ವರ್ಣದಲ್ಲಿ ಚಿತ್ರಗಳನ್ನು ತೆಗೆಯುವುದು ಪ್ರೇಕ್ಷಕರನ್ನು ಸೆಳೆಯುವ ಒಂದು ವಿಧಾನವಾಗಿದ್ದ ಕಾಲ ಅದು. ವರ್ಣಚಿತ್ರ ನಿರ್ಮಾಣ ದುಬಾರಿಯಾದ ಕಾರ...

ನಿನ್ನೊಲವಿನಾಳದಲಿ ಮುಳುಗಿ ಮರೆತಿಹೆ ನನ್ನ ಮನವ ಮುತ್ತಿದ ಮಣ್ಣ ತೊಡರುಗಳ ಕಿತ್ತೊಗೆದು ನಿನ್ನೊಲವ ಜೊನ್ನದಲಿ ಮಿಂದು ಉನ್ಮದಿಸಿರುವೆ ಹಿರಿಮೆ ಹೊನ್ನುಗಳಾಸೆ ವಿಫಲನವೆನಿಸಿತು ಮನಕೆ ಸಂತೃಪ್ತ, ಸಂಪನ್ನ, ಪೂತ, ಸ್ವಾಂತಃಪೂರ್ಣ ನಿದ್ದೆಯಾ ಮರೆಯಿಲ್ಲ,...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...