ಗುರುಯೋಗಿ ಶಿವಯೋಗಿ ಹರಯೋಗಿ ಶಿವತಂದೆ
ನೀಬ೦ದ ಈ ಭುವನ ಕೋಟಿಲಿ೦ಗಾ
ನೀನಿಟ್ಟ ಹೆಜ್ಜೆಯಲಿ ಕೈಲಾಸ ಕುಣಿದಾವು
ವೇದ ಆಗಮ ಲಾಸ್ಯ ವಿಶ್ವಲಿಂಗಾ
ನೋಡಿಲ್ಲಿ ಗುಳೆಯೆದ್ದು ಓಡ್ಯಾವು ಹೆಗ್ಗೂಳಿ
ಶಿವಶಿವಾ ಓಂ ನಮೋ ನಮಃ ಶಿವಾಯಾ
ಬಂತಯ್ಯಾ ಶಿವರಾತ್ರಿ ಹೋತಯ್ಯ ಯಮರಾತ್ರಿ
ಹರಹರಾ ಓಂ ನಮೋ ನಮಃ ಶಿವಾಯಾ
ಡಂಢಮಮ ಢಮರುಗಕೆ ರುದ್ರಾಗ್ನಿ ಡಿ೦ಡಿಮಕೆ
ಶಿವಶಿವಾ ಶಿವರಾತ್ರಿ ಶರಣು ಶರಣು
ಶಿವನ ಕರುಣೆಯ ಕ್ಷಣವೆ ಆದಿ ಅದ್ಭುತ ಜಾತ್ರಿ
ಶಿವಶಿವಾ ಶಿವರಾತ್ರಿ ಕೋಟಿ ಶರಣು||
ಗುರುಪಾದ ಶಿವರಾತ್ರಿ ಗುರುಲಿಂಗ ಶುಭರಾತ್ರಿ
ಉಸಿರು ಉಸಿರಿಗೆ ಶಿವನೆ ಪ್ರಾಣಲಿಂಗಾ
ನಾವೆ ಪಾರ್ವತಿ ನಿನಗೆ ನಾವೆ ಗೌರಿಯು ಗಂಗೆ
ರಾತ್ರಿ ಇಲ್ಲದ ರಾತ್ರಿ ಸೂತ್ರಲಿ೦ಗಾ ||
*****


















