ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು- “ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕಾಡು ಮೇಡು ಅಲೆದಾಡಿದೆ. ಬೆಟ್ಟ ಗುಡ್ಡ ಹತ್ತಿದೆ. ಸಮುದ್ರಯಾನ...

ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ ಹರಿವುದೇಕೆ? ಹಾಲೂಡಿದ ನೆಲವದೊಂದೆ ಇಲ್ಲಿ ಕದನವೇಕೆ?...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ...

ದೋಣಿ ದೋಣಿ ದೋಣಿ ನೀರಲಿ ಹೋಗುವ ದೋಣಿ ಅಂಬಿಗನಿರುವ ದೋಣಿ ಹರಿಗೋಲ ತೇಲುವ ದೋಣಿ ನನಗೂ ನಿನಗೂ ದಡ ಸೇರಿಸುವ ದೋಣಿ *****...

ನಾಡಿಗೆ ನಾಡೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಕೆಲಸ ಮಾಡಿದ ಸಂಗಪ್ಪ ದಿನ ಬೆಳಗಾಗುವುದರೊಳಗಾಗಿ ಸುಪ್ರಸಿದ್ಧನಾಗಿದ್ದ. ಅವನ ಈ ಊರೂ ಅಷ್ಟೆ, “ಸ್ವಾಮಿ, ಸಂಗಪ್ಪನೇನೋ ಸುಪ್ರಸಿದ್ಧನೋ ಕುಪ್ರಸಿದ್ದನೋ ಆದ; ಅದು ಪತ್ರಿಕೇಲೂ ಬಂತು; ಆದರೆ ಹರಿಜನ ಪ...

ಮುಗಿಲ ಗೆರೆಯನ್ನು ಹಿಡಿದು ವಾರಿಧಿಯ ಹೊಂಬಸಿರನೊಡೆದು ಏರುವವು ಮುಗಿಲನ್ನು ಅರುಣನ ಕುದುರೆಗಳೇಳು: ಮಾಡುವವು ಹಗಲನು! ಮೋಡಗಳ ಕೊತ್ತಳದ ಕೋಟೆಯೊಂದನು ಕಟ್ಟಿ ಕಿರಣಗಳ ಬತ್ತಳಿಕೆಯನು ಬದಿಗಿರಿಸಿ ಬರುತಿಹನು ದಿವ್ಯಶರೀರಿ ದಿನಮಣಿ,- ಕತ್ತಲನು ಕಿತ್ತೊಗ...

ಗುರುವೆ ಶರಣು ಅರುಹೆ ಶರಣು ಲಿಂಗ ಸಾಗರ ಅನುಪಮಾ ಹಾಲು ಸಾಗರಕಿಂತ ಮೇಲು ಲಿಂಗ ಸಾಗರ ನಿರುಪಮಾ ದೇಹವೆಂಬಾ ಜಡದ ಡೋಣಿಗೆ ಗುರುವು ಹುಟ್ಟನು ಹಾಕಿದಾ ಅರುಹು ನೀಡಿದ ಗುರಿಯ ತೋರಿದ ದೂರ ಕಡಲಿಗೆ ದೂಡಿದಾ ತೆರೆಯ ಮೇಲೆ ತೆರೆಯ ಘರ್ಜನೆ ಭರತಿ ಓಟಿಯ ಅಬ್ಬರ...

ಅವರೊಬ್ಬ ಎಡಿಟರ್ -ಶ್ರೀಪಾದರಾಯರು! “ಶಿಂಗಣ್ಣ!” ಎಂದರು. ಗೋಡೆಗಳೆಲ್ಲ ಕಂಪಿಸಿದುವು. ಅವುಗಳಿಂದ ಸಿಡಿದು ಬಂದಂತೆ, ನಾಲ್ಕಡಿಯ ಒಂದು ಮಹಾ ದೀನಪ್ರಾಣಿಯು ಸಂಪಾದಕರ ಎದುರಿಗೆ ಬಂದು ನಿಂತಿತು. “ಶಿಂಗಣ್ಣಾ!” “ಸಾ...

(ಒಂದು ಪ್ರಗಾಥ) ಹೃದಯ ಕಂಪಿಸುತಿಹುದು ಆನಂದ ದೂರ್ಮಿಯಲಿ ತುಂಬಿ ಮೈಮನವನ್ನು ಬಂಧಿಸಿಹುದು ಇಹುದೆ ಇಂತಹ ಚೆಲುವು ಲೋಕದಲಿ ನಾಕದಲಿ ನಿನ್ನವೊಲು, ಶ್ಯಾಮಲೆಯೆ, ಮಾಗಿದೊಲವು ಹರಣಗಳ ನಯನದಲಿ ಅರಳಿಸುತ ನೋಡುವೆನು. ಕಡಲನ್ನೆ ಕುಡಿಯುವೊಲು ದಿಟ್ಟಿಸುವೆನು...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...