ಗುರುವೆ ಶರಣು ಅರುಹೆ ಶರಣು
ಲಿಂಗ ಸಾಗರ ಅನುಪಮಾ
ಹಾಲು ಸಾಗರಕಿಂತ ಮೇಲು
ಲಿಂಗ ಸಾಗರ ನಿರುಪಮಾ
ದೇಹವೆಂಬಾ ಜಡದ ಡೋಣಿಗೆ
ಗುರುವು ಹುಟ್ಟನು ಹಾಕಿದಾ
ಅರುಹು ನೀಡಿದ ಗುರಿಯ ತೋರಿದ
ದೂರ ಕಡಲಿಗೆ ದೂಡಿದಾ
ತೆರೆಯ ಮೇಲೆ ತೆರೆಯ ಘರ್ಜನೆ
ಭರತಿ ಓಟಿಯ ಅಬ್ಬರಾ
ತಿಮಿ ತಿಮಿಂಗಿಲು ರುದ್ರ ತಾಂಡವ
ಚಂಡ ಮಾರುತ ಭೀಕರಾ
ಗುರುವು ಬಂದನು ಅರುಹು ಕೊಟ್ಟನು
ಮಂತ್ರಯೋಗವ ಕಲಿಸಿದಾ
ದೂರ ದೂರದ ಆರ ಪಾರದ
ಪಾರಬ್ರಹ್ಮನ ತೋರಿದಾ
*****


















