ಮುಗಿಲ ಗೆರೆಯನ್ನು ಹಿಡಿದು
ವಾರಿಧಿಯ ಹೊಂಬಸಿರನೊಡೆದು
ಏರುವವು ಮುಗಿಲನ್ನು ಅರುಣನ ಕುದುರೆಗಳೇಳು:
ಮಾಡುವವು ಹಗಲನು!
ಮೋಡಗಳ ಕೊತ್ತಳದ ಕೋಟೆಯೊಂದನು ಕಟ್ಟಿ
ಕಿರಣಗಳ ಬತ್ತಳಿಕೆಯನು ಬದಿಗಿರಿಸಿ
ಬರುತಿಹನು ದಿವ್ಯಶರೀರಿ ದಿನಮಣಿ,-
ಕತ್ತಲನು ಕಿತ್ತೊಗೆವ ಕಿರೀಟಿ!
ಬರುತಿಹನು ತೆರೆಯ ಮೇಲ್ ತಲೆಯೆತ್ತಿ!
*****


















