ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು- “ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕಾಡು ಮೇಡು ಅಲೆದಾಡಿದೆ. ಬೆಟ್ಟ ಗುಡ್ಡ ಹತ್ತಿದೆ. ಸಮುದ್ರಯಾನ...

ಒಂದು ಕೊಳ. ಅದರ ಬದಿ ಒಂದು ಪುಟ್ಟ ಗುಡಿಸಲು. ಅದರಲ್ಲಿ ಬಾತು ಕೋಳಿಗಳನ್ನು ನೋಡಿಕೊಳ್ಳುತ್ತಾ, ಒಬ್ಬ ಹಳ್ಳಿಯ ವೃದ್ದ ವಾಸವಾಗಿದ್ದ. ಅವನಿಗೆ ಸಂಸಾರದಲ್ಲಿ ಸಾವಿರಾರು ತಾಪತ್ರಯಗಳು, ಮನದಲ್ಲಿ ಸಾವಿರಾರು ಬಗೆಯ ತೀರದ ಪ್ರಶ್ನೆಗಳು ತುಂಬಿಕೊಂಡಿತ್ತು....

ಸೊಳ್ಳೆ ಕೊಂದಷ್ಟೇ ಸುಲಭದೊಳೆಮ್ಮೆಲ್ಲ ಶ್ರಮ ಸಂಸ್ಕೃತಿಯ ಕೊಂದು ಬರಿದೆ ಪೇಳಿದೊಡೇನು ? ಪರಿ ಸರವನುಳಿಸೆಂದು ಜೂನೈದರಂದು ಹಸುರ ಕ್ಷರದೊಳೆಲ್ಲ ಪತ್ರಿಕೆಯ ಬ್ಯಾಟಿಂಗಿನಿಂದೇನು ? ಸೊಳ್ಳೆ ಬೆಳೆವ ಕೊಳೆ ಜಾಹೀರನುಗಾಲ ಒಸರುತಿರೆ – ವಿಜ್ಞಾನೇಶ್...

ಇಂಗ್ಲೆಂಡ ನಾವಿಕರಿರಾ – ಕಾಯುವಿರಿ ನೀವೆಮ್ಮ ಕಡಲುಗಳನು; ನಿಮ್ಮ ಬಾವುಟ ತಡೆಯಿತೊಂದು ಸಾವಿರ ವರುಷ ಗಾಳಿಯನು ಕಾಳಗವನು. ನಿನ್ನೊಮ್ಮೆ ನಿಮ್ಮ ವಿಜಯಧ್ವಜವ ತೂಗಿಬಿಡಿ ಇನ್ನೊಬ್ಬ ಹಗೆಯ ತಾಗಿ ಕಡಲಲ್ಲಿ ನಡೆಗೊಳ್ಳಿ- ಬಿರುಗಾಳಿ ತೀಡುತಿರಲು ಹಿ...

ಅಧ್ಯಾಯ ಹದಿನೇಳು ಆಂದಿನ ದಿನದ ಸಮಾರಾಧನೆಯನ್ನು ಹೊಗಳದವರಿಲ್ಲ. ಎಲ್ಲರೂ ಯಥೇಚ್ಛವಾಗಿ ಊಟಮಾಡಿ ತೃಪ್ತಿಯನ್ನು ಹೊಂದಿದ್ದಾರೆ. ತೃಪ್ತಿಯನ್ನು ಹೊಂದಿರುವುದು ಕೇವಲ ಮಾನವಗಣ ಮಾತ್ರವಲ್ಲ. ರಾತ್ರಿಂಚರರಾಗಿ ಅಲ್ಲಿಗೆ ಬರಬಹುದಾದ ವನ್ಯಮೃಗಗಳಿಗೂ ತೃಪ್ತಿ...

ನನ್ನಲ್ಲಿ ತ್ಯಾಗದ ಭಾವ ಮೂಡಿಲ್ಲ ಮತ್ತೆ ನಾನು ಯೋಗಿಯಾಗ್ವನೇ ಸತ್ಯ ಅಹಿಂಸೆ ದಯಾ ಪರನಿಲ್ಲದೆ ಪರಮಾತ್ಮನ ತಿಳಿಯದ ರೋಗಿಯಾಗೇನೆ! ನನ್ನ ನಾನು ಬದಲಾಗದೆ ಮತ್ತೆ ಜಗದತ್ತ ನಾ ಬೆರಳು ಹರಿಸುವದೇ ಕಾಲ ಬದಲಾಗಿದೆಂದು ಭಾವಿಸುತ್ತ ನಾ ನಿತ್ಯ ಪಾಪ ಕರ್ಮ ಬೆ...

ಹುಣ್ಣಿಮೆಯ ಒಂದು ರಾತ್ರಿ ಚಂದ್ರಮನಿಂದಾಗಿ ಬೆಳಗುತ್ತಿತ್ತು ಧಾತ್ರಿ ತಂಪು-ತಂಪಾದ ಗಾಳಿ ಎತ್ತಲೂ ಬೆಳಕಿನೆದುರು ಸೋತು; ಸತ್ತಿತ್ತು ಕತ್ತಲು ಚಂದ್ರಮನು ನಗುತ್ತಿದ್ದ ಮಕ್ಕಳಂತೆ ಈ ರಾತ್ರಿ ಆಗಸದಲ್ಲಿ ಬೆಳಕಿನ ಸಂತೆ ಚಂದ್ರಮನ ಈ ಚಿತ್ತಾರ ಕಂಡು ನನ್...

ಇತಿಹಾಸದ ದಾರಿ ನೇರವಾಗಿತ್ತೆ ಎಂದಾದರೂ ಎಡವಿಕೊಂಡೇ ಬಂದಿತೆ ಅದು ಇಲ್ಲೀವರೆಗೆ ಇಲ್ಲಿಂದ ಇನ್ನೆಲ್ಲಿಗೆ ಕೋ ವಾಡಿಸ್ ಎನ್ನುತ್ತ ಪ್ರತಿಯೊಂದು ಬಾರಿ? ದಾರಿ ಇದ್ದಿದ್ದರೆ ತಾನೆ ಅದಕ್ಕೆ ದಾರಿ ಕೇಳುವುದಕ್ಕು? ದಾರಿಯಿಲ್ಲದಲ್ಲಿ ಸಾಗುವುದು ಇತಿಹಾಸ ನನ...

ಸಿಡಿಲ ಪಳಗಿಸುವರಿವು, ರವಿಯ ಸೆರೆಹಿಡಿವರಿವು ಸಾಗರದ ತಳಮಗುಚಿ ಸೂರೆಗೈವರಿವು ಬಾನ ಜಾಲಾಡುತ್ತ ತಾರೆಗಳನಳೆವರಿವು ಸೂಕ್ಷ್ಮಾತಿಸೂಕ್ಷ್ಮವನು ಬಯಲುಗೈವರಿವು ವಸ್ತುಗಳೊಳವಿತಿರುವ ಸೆಳೆತಗಳ ಹವಣರಿತು ಸೊಗಕೆ ನವಸಂಘಾತಗಳ ನಿಲಿಸುವರಿವು- ಇದನು ಕಿತ್ತದನ...

ಈ ಶುಗರ್ ನನ್ನೊಂದಿಗೆ ನನ್ನ ಪತಿಯಂತೆ ನನ್ನ ಪತಿಯ ಜೊತೆ ನನಗೆ ಈ ಜನ್ಮಕೆ ಸಾಕು ಶುಗರಿನ ಜೊತೆ ಮಾತ್ರ ತಲೆಮಾರುಗಳಿಗೆ ಸಾಗುತ್ತದೆ. ಪತಿಯನ್ನು ಮೆನ್‌ಟೇನ್ ಮಾಡಿದಂತೆ ಶುಗರಿಗೂ ನಾನು ಮೆನ್‌ಟೇನ್‌ ಮಾಡಬೇಕು. ಸ್ವಲ್ಪ ಅಲಕ್ಷ ಮಾಡಿದರೂ ಪತಿರಾಯ ಕೆಂ...

ಪೂರ್‍ವ ಕಾಲದಲ್ಲಿ ಅಡುಗೆಮನೆಯಲ್ಲಿ ಅಡುಗೆಮಾಡಲು ಸೌದೆ, ನಂತರ ಸೀಮೆ ಎಣ್ಣೆ, ಗ್ಯಾಸ್, ಸ್ಟೌವ್ ಬಂದವು. ಈದೀಗ ಆಧುನಿಕ ಅಡುಗೆ ಮನೆಯಲ್ಲಿ ಗ್ಯಾಸ್ ಒಲೆಯ ಬಹುಭಾಗವನ್ನು ವಿದ್ಯುತ್‌ಚಾಲಿತ ಮೈಕ್ರೋವೇವ್ ಒಲೆಗಳನ್ನು ಅಡುಗೆಮಾಡಲು ಬಳೆಸಲಾಗುತ್ತದೆ. ನ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...